ಬೇಸಿಗೆಯಲ್ಲಿ ಎಸಿ,ಕೂಲರ್ ಪ್ರಿಡ್ಜ್ ಮತ್ತಷ್ಟು ಕಾವು

0
52
loading...

ಬೆಂಗಳೂರು: ಈ ಬೇಸಿಗೆಯಲ್ಲಿ ನಿಮ್ಮ‌ ಶೆಕೆ ಹೆಚ್ಚಾಗಲಿದೆ.ಮಾರುಕಟ್ಟೆಯಲ್ಲಿ ಈಗಾಗಲೆ ಎಸಿ, ಪ್ರಿಜ್, ಕೂಲರ್ಗಳ ಬೇಡಿಕೆ ಹೆಚ್ಚಾಗಿದ್ದು ಜನ ಸಾಮಾನ್ಯ ಬಿಸಿಲಿನ ಜೊತೆ ಜೇಬಿಗೂ ಶಾಕ್ ತಟ್ಟಲಿದೆ.
ಕಚ್ಚಾ ತೈಲದಲ್ಲಿ ಆದ ಬೆಲೆ ಏರಿಕೆ ಹಾಗೂ ಡಾಲರ ಎದುರು ರೂಪಾಯಿಯಲ್ಲಾದ ವ್ಯತ್ಯಾಸವೇ ಇದಕ್ಕೆ ನೇರ ಕಾರಣವಾಗಿದೆ.
ಗೊದ್ರೆಜ್ ಈಗಾಗಲೆ ತನ್ನ ಉತ್ಪನಗಳ ಬೆಲೆಯನ್ನು ಏರಿಕೆ ಮಾಡಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ಉಪಕರಣಗಳ ಬೆಲೆ ಹೆಚ್ಚಾಗುವ ಸ್ಪಷ್ಟ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಎಸಿ, ಕೂಲರ್ ಟಿವಿ,‌ಪ್ರಿಜ್ ಗಳಂತ ವಸ್ತುಗಳನ್ನು ಖರೀದಿಸುವ ಮನಸ್ಸು ಮಾಡಿದ್ದರೆ ಮುಂದಕ್ಕೆ ಹಾಕದೆ ಇಂದೇ ಖರೀದಿಸಿ.
ಈ ವಸ್ತುಗಳ ಬೆಲೆ ಶೇಕಡಾ ೧೦ ರಿಂದ ೫೦-೬೦ ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಆಮದು ಸುಂಕದಲ್ಲು ಏರಿಕೆಯಾಗಿದ್ದರಿಂದ ಬೆಲೆಯಲ್ಲೂ ಮುಂದಿನ ತಿಂಗಳಿಂದ ವ್ಯತ್ಯಾಸ ಕಂಡು ಬರಲಿದೆ.
ಅದೇನೆ ಇರಲಿ ಬಿಸಿಲಿನಲ್ಲಿ ತಣ್ಣಗಿರಲು ಮನಸ್ಸು ಮಾಡಿದವರಿಗೆ ಮುಂದೆ ಸ್ವಲ್ಪ ಕಾವೇ ಹೆಚ್ಚಾಗಲಿದೆ.

loading...