ಬೇಸಿಗೆ ಧಗೆಯಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಳ

0
31
loading...

ಕನ್ನಡಮ್ಮ ಸುದ್ದಿ-ಕುಮಟಾ: ಏಪ್ರಿಲ್ ತಿಂಗಳ ಪ್ರವೇಶವಾಗುತ್ತಿದ್ದಂತೆ ಬೇಸಿಗೆ ಧಗೆ ಬಿರುಸಿನಿಂದ ಏರುತ್ತಿದ್ದು, ಪಟ್ಟಣದಲ್ಲಿ ಎಳನೀರಿಗೆ ಬೇಡಿಕೆ ಭಾರೀ ಹೆಚ್ಚಳವಾಗಿದೆ.
ತೆಂಗಿನ ಕಾಯಿ ದರ ಏರಿಕೆಯಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಗಗನಮುಖಿಯಾಗಿದೆ. ಎಳನೀರಿಗೆ ಈ ಬಾರಿ ಕಡಿಮೆಯಾಗಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಎಳನೀರು ಪೂರೈಕೆಯಾಗುತ್ತಿಲ್ಲ. ಇದು ಕೂಡ ಎಳನೀರ ದರ ಹೆಚ್ಚಳಕ್ಕೆ ಕಾರಣವಾಗಿದೆ.

ಸ್ಥಳೀಯ ತೆಂಗು ಬೆಳೆಗಾರರು ಧಾರೇಶ್ವರ, ಹೆಗಡೆ, ಮೂರೂರು ವಾಲಗಳ್ಳಿ ಊರಕೇರಿ ಮುಂತಾದ ಹಳ್ಳಿಗಳಿಂದ ಕೃಷಿಕರು ಎಳನೀರು ತಾತ್ಕಾಲಿಕ ಆಶ್ರಯಗಳನ್ನು ನಿರ್ಮಿಸಿಕೊಂಡು ರಸ್ತೆ ಬದಿಗಳಲ್ಲಿ ಮಾರಾಟ ಮಾಡಲಾರಂಭಿಸಿದ್ದಾರೆ. ಎಳನೀರಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಈ ರೈತರಿಗೆ ತಮ್ಮ ಉತ್ಪಾದನೆಯನ್ನು ಮಾರಾಟ ಮಾಡಲು ಯಾವುದೇ ಜಾಹೀರಾತು ಅಥವಾ ಮಧ್ಯವರ್ತಿಗಳ ಸಹಾಯ ಬೇಕಾಗಿಲ್ಲ.
ಕೆಲವು ವ್ಯಾಪಾರಿಗಳಂತು ಎಳನೀರಿನ ಬೆಲೆಯನ್ನು ಏರಿಸಿದ್ದಾರೆ. ಎಳನೀರು ಖರೀದಿಸುವವರು ರೂ 25ರಿಂದ ರೂ 20ರಂತೆ ಬೆಳೆಗಾರರಿಗೆ ನೀಡುತ್ತಾರೆ. ಆದರೆ ಅಂಗಡಿ ಮಾಲಿಕರು ರೂ 25ರಿಂದ 30ಕ್ಕೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಆದರೂ ಗ್ರಾಹಕರು ಬಿಸಿಲಿನ ದಾಹವನ್ನು ತಣಿಸಲು ಎಳನೀರು ಕುಡಿಯಲು ಮುಂದಾಗಿದ್ದಾರೆ.

loading...