ಬೊಮ್ಮಾಯಿ ಉತ್ತರ ಕರ್ನಾಟಕದ ಭಗಿರಥ : ಮುರುಗೇಶ

0
32
loading...

ಶಿಗ್ಗಾವಿ : ಹಿಂದೆ ಶಿಗ್ಗಾಂವ-ಸವಣೂರ ಕ್ಷೇತ್ರದ ಜನತೆಯ ಉತ್ತಮ ನಿರ್ದಾರದಿಂದ ಶಾಸಕ ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿ ರಾಜ್ಯದಲ್ಲಿ 7 ಲಕ್ಷ ಎಕರೆ ನೀರಾವರಿ ಯೋಜನೆಗಳನ್ನು ಮಾಡಿ ಉತ್ತರ ಕರ್ನಾಟಕದ ಭಗಿರಥ ಎಂಬ ಹೆಗ್ಗಳಿಕೆಯಿಂದ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣೀ ಹೇಳಿದರು.

ತಾಲೂಕಿನ ಚಂದಾಪೂರ ಗ್ರಾಮದಲ್ಲಿ ಬುಧವಾರ ನಡೆದ ದುಂಡಶಿ ಕ್ಷೇತ್ರದ ಜಿ ಪಂ ವ್ಯಾಪ್ತಿಯ ಭೂತ್ ಮಟ್ಟದ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ ಹಾಗೂ ಮುಷ್ಟೀಧಾನ್ಯ ಅಭಿಯಾನ ಸಮಾರಂಭದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಮೊಟ್ಟಮೊದಲ ಬಾರಿ ಮೈಕ್ರೋ ಇರಗೇಶನ್ ಪೈಲೆಟ್ ಪ್ರೊಜಕ್ಟ್ ಪ್ರಾರಂಭಿಸಿ ಶಿಗ್ಗಾಂವ-ಸವಣೂರ ಕ್ಷೇತ್ರದಲ್ಲಿ 26 ಸಾವಿರ ಎಕರೆ ಪ್ರದೇಶ ನೀರಾವರಿ ಹಾಗು ಸುಮಾರು 100 ಕೆರೆ ತುಂಬಿಸುವ ಯೋಜನೆ ಮಾಡಿ ಈಗಾಗಲೆ 30 ಕೆರೆ ತುಂಬಿಸಿದ್ದಾರೆ. ರಾಜ್ಯದಲಿ 7 ಲಕ್ಷ ಎಕರೆ ನಿರಾವರಿ ಮಾಡಿಸಿದವರು, ಬಾಡದ ಕನಕನ ಅರಮನೆಗೆ 14 ಕೋಟಿ ಅನುಧಾನ ತಂದವರು ನಮ್ಮಲ್ಲಿಯ ಚಿಕ್ಕ ಸಂಗಮಕ್ಕೆ 12 ಕೋಟಿ ಅನುಧಾನ ಕೋಡಿಸಿದವರು, ಶ್ರೀಶೈಲಕ್ಕೆ 5 ಕೋಟಿ ಅನುಧಾನ ಕೊಡಿಸಿದ ಕಿರ್ತಿ ಬೊಮ್ಮಾಯಿಯವರದು, ಇತಿಹಾಸದಲ್ಲಿ ಅಚ್ಚಳಿಯುವಂತಹ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ರೂಪಿಸುವಂತಹ ಶಕ್ತಿ ಇರುವ ವ್ಯಕ್ತಿಯೆಂದರೆ ಬಸವರಾಜ ಬೊಮ್ಮಾಯಿ, ಅವರನ್ನು ಕ್ಷೇತ್ರದ ಜನತೆ ಬೆಂಬಲಿಸಿದರೆ ನಾನು ಸಹ ನಿಮ್ಮ ಸೇವೆಗೆ ಸದಾ ಸಿದ್ದನಿರುತ್ತನೆ ಮತ್ತು ಈ ಕ್ಷೇತ್ರಕ್ಕೆ ಇಬ್ಬರು ಶಾಸಕರಂತೆ ಸೇವೆ ಮಾಡುತ್ತೆವೆ ಎಂದು ಬರವಸೆ ವಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ನಾನು ಶಾಸಕ, ಸಚಿವನಾಗಿದ್ದಾಗ, ಯಾವುದೇ ಸಂದರ್ಭದಲ್ಲಿ ಒಂದೆ ಪ್ರೀತಿ, ವಿಶ್ವಾಸ, ಸಲಹೆ ಸಹಕಾರ ನೀಡಿದ್ದೀರಿ ನಾನು ಜೀವನ ಪೂರ್ತಿ ಸೇವೆ ಮಾಡಿದರು ಈ ಕ್ಷೇತ್ರದ ಜನತೆಯ ಋಣ ತಿರಿಸಲಾಗದು. ಇಲ್ಲಿ ನನ್ನ ಮತ್ತು ಕ್ಷೇತ್ರದ ಜನತೆಯ ಮಧ್ಯ ಪ್ರೀತಿ, ವಾತ್ಸಲ್ಯ, ಮಮತೆ, ಸಹೊಧರ ಭಾವ ತಂದೆ ತಾಯಿಯರಂತಹ ಸಂಬಂದ ಸೃಷ್ಠಿಯಾಗಿ ಭಾವನಾತ್ಮಕ ಸಂಬಂದ ಗಟ್ಟಿಗೊಂಡಿದೆ, ನಾನು ಪ್ರಾಮಾಣಿಕ ಪ್ರಯತ್ನದಿಂದ ಜನತೆಯ ಹೃದಯದಲ್ಲಿ ಶ್ವಾಶ್ವತ ಸ್ಥಾನ ಉಳಿಸಿಕೊಳ್ಳುವದೇ ನನ್ನ ಗುರಿಯಾಗಿದೆ, ನಾನು ಹಲವಾರು ಅಬಿವೃದ್ದಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದೆನೆ ಅದಕ್ಕೆ ಜನತೆಯ ಸಹಕಾರವಿದೆ ಅದರ ಶ್ರೇಯಸ್ಸು ಜನತೆಗೆ ಸಲ್ಲುವಂತದ್ದು ಎಂದರು.

ಈ ಚುನಾವಣೆ ಅಭಿವೃದ್ದಿಯ ಭವಿಷ್ಯ ಬರೆಯುವ ಚುನಾವಣೆ, ಅಭಿವೃದ್ದಿಯ ಪತದಲ್ಲಿ ಶಿಗ್ಗಾಂವ- ಸವಣೂರ ಕ್ಷೇತ್ರ ಮುಂದೆ ಹೋಗುತ್ತಿದೆ. ಅಭಿವೃದ್ದಿಯ ಗಾಡಿ ಹಳಿಯಮೇಲೆ ನಿಂತಿದೆ ಅದನ್ನು ಮುಂದೊಡಿಸುತ್ತಿದ್ದೇನೆ, ಆದರೆ ಕೆಲವರು ಹಳಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ನಮ್ಮ ಕ್ಷೇತ್ರದ ಜನತೆ ಅಂತವರಿಗೆ ಅವಕಾಶ ಕೊಡುವದಿಲ್ಲ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿವೃತ್ ಐಎಎಸ್ ಅಧಿಕಾರಿ ಸಿ ಸೋಮಶೇಖರ ಮಾತನಾಡಿ ಬೊಮ್ಮಾಯಿಯವರು ಕೆವಲ ರಾಜಕಾರಣಿಯಲ್ಲ ಅವರು ದೇಶಭಕ್ತ, ಭವಿಷ್ಯದ ಚಿಂತಕ, ದಾರ್ಶನಿಕ, ಕನಸುಗಾರ, ನೊಂದವರನ್ನು ಶೋಷಿತರನ್ನು ಕೈ ಹಿಡಿಯುವ ಸೇವಾ ಸಂಪನ್ನರು, ಮಾನವಿಯ ಪ್ರಜ್ಞೆಯ ನಾಯಕರು, ತಾಯಿಯ ಕರೆಯಂತೆ ಕೆರೆಗಳನ್ನು ಕಟ್ಟಿಸಿ ನೀರು ತುಂಬಿಸಿದವರು ಒಟ್ಟಿನಲ್ಲಿ ಚಲಿಸುವ ವಿಶ್ವಕೋಶ ಬೊಮ್ಮಾಯಿಯವರು ಎಂದರು.

ಮುಖಂಡ ಎಮ್ ಬಸಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಷ್ಟೀಧಾನ್ಯ ಅಭಿಯಾನ ಅಂಗವಾಗಿ ರೈತರನ್ನು ಸನ್ಮಾಸಿಸಲಾಯಿತು.
ಭಾಜಪ ತಾಲೂಕಾ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಮುಖಂಡರಾದ ಗಂಗಣ್ಣ ಸಾತಣ್ಣವರ, ಸಿದ್ದಲಿಂಗಪ್ಪ ಕಾರಡಗಿ, ಶೋಭಾ ಗಂಜಿಗಟ್ಟಿ, ನಿಂಗಣ್ಣ ಹರಿಜನ, ಡಿ.ಎಸ್.ಮಾಳಗಿ, ಭಾರತಿ ಜಂಬಗಿ, ಮಲ್ಲಮ್ಮ ಸೋಮನಕಟ್ಟಿ, ಸೋಮವ್ವ ರಾಠೋಡ, ಶಾಂತಮ್ಮ ಹಿರೇಮಠ, ವಿರುಪಾಕ್ಷಪ್ಪ ಆಡಿನ, ಮಾಜಿ ತಾಪಂ ಅದ್ಯಕ್ಷರಾದ ಉಮಾ ಡವಗಿ, ಸುಜಾತಾ ಕಲ್ಕಟ್ಟಿ, ನಿವೃತ್ತ ಶಿಕ್ಷಕರಾದ ಸೋಮನಕಟ್ಟಿ ಸೇರಿದಂತೆ ಗ್ರಾಪಂ ಅಧ್ಯಕ್ಷರು ಸದಸ್ಯರು, ಜಿಪಂ ಸದಸ್ಯರು, ತಾಪಂ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ ನಿರೂಪಿಸಿ ವಂದಿಸಿದರು.

loading...