ಬ್ರಾಹ್ಮಣ ಬಾಲಕರಿಗೆ ಏಳು ದಿನಗಳ ಕಾಲ ಸಂಸ್ಕಾರದ ಪಾಠ

0
26
loading...

ಕಾಗವಾಡ 03: ಇಂದಿನ ವಿಜ್ಞಾನ ಯುಗ ಮತ್ತು ಪಾಶ್ಚಾತ್ ಸಂಸ್ಕøತಿ ಹೆಸರಿನಲ್ಲಿ ಅನೇಕ ಯುವಕ, ಯುವತಿಯರು ಬ್ರಾಹ್ಮಣ ಸಮಾಜದ ಹಳೆ ಸಾಂಪ್ರದಾಯಗಳು ಮರೇತು, ಕೆಲವರು ದುಷ್ಟ ಚಟಗಳಿಗೆ ಅಂಟಿಕೊಳ್ಳುತಿದ್ದಾರೆ. ಇದನ್ನು ಗಮನಿಸಿದ ಉಗಾರ ಬ್ರಾಹ್ಮಣ ಸಮಾಜ ಸಂಘಟನೆ ವತಿಯಿಂದ ಏಳು ದಿನದ ಧಾರ್ಮಿಕ ಸಂಸ್ಕಾರ ಶಿಬಿರ ಹಮ್ಮಿಕ್ಕೊಂಡಿದ್ದರು.

ಉಗಾರ ಖುರ್ದ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಏಳು ದಿನದ ಧಾರ್ಮಿಕ ಸಂಸ್ಕಾರ ಶಿಬಿರ ನೆರವೇರಿತು. ಶಿಬಿರದಲ್ಲಿ 5 ರಿಂದ 16 ವಯಸ್ಸಿನ ಬಾಲಕರನ್ನು ಒಂದುಗೂಡಿಸಿ ಶ್ರೀಶೈಲ್ ದಾನಿ ಗುರುಗಳಿಂದ ಯೋಗ ಶಿಕ್ಷಣ ನೀಡಿದರು. ವೇದಮೂರ್ತಿ ಅಜಯ್ ಆಚಾರ್ಯ ಇವರಿಂದ ಪ್ರಾತಃಸ್ಮರಣೆ, ಯೋಗಾ ಸ್ತೋತ್ರ ಪಠಣ, ತ್ರೀಕಾಲ ಸಂಧ್ಯಾ ವಂದನೆ, ಪೂಜಾ ವಿಧಾನ, ಧಾರ್ಮಿಕ ಶಿಕ್ಷಣ ನೀಡಿದರು.
ಶ್ರೀ ಹನುಮಂತಾಚಾರ್ಯ ಜೋಶಿ ಇವರಿಂದ ಪುರಾಣ ಮತ್ತು ದೇಶ ಭಕ್ತಿ ಕತೆಗಳನ್ನು ಬಾಲಕರಿಗೆ ಹೇಳಿದರು. ಪ್ರತಿ ದಿನ ಸಂಜೆ ಶಿಬಿರಾರ್ಥಿಗಳಿಗೆ ರಾಮಾಯಣದ ಸಂದೇಶ, ಗಂಗಾಧರ್ ವಠಾರಕರ್ ಗುರೂಜಿ, ಆರ್‍ಎಸ್ ಕುಲಕರ್ಣಿ ಇವರಿಂದ ಸದಾಚಾರ, ಏಕಾಗ್ರತೆ, ಸತ್ಯಸಂಧತೆ ಬಗ್ಗೆ ಮತ್ತು ಡಾ. ಪಿವಿ ಜೋಗ್ ಇವರಿಂದ ಆರೋಗ್ಯ ಬಗ್ಗೆ ಹಾಗೂ ಸುಜಾತಾ ಸತ್ತಿಕರ್ ಕ್ರಾಫ್ಟ ಬಗ್ಗೆ ಮಾಹಿತಿ ನೀಡಿದರು. ಶಿಬಿರಾರ್ಥಿಗಳಿಗೆ ರಾಮನಾಮ್ ಲಿಖಿತ ಪತ್ರಿಕಾ ವಿಠ್ಠಲ್ ಮಂದಿರಲ್ಲಿ ನೀಡಲಾಯಿತು.

ಉಗಾರ ಬ್ರಹ್ಮಣ ಸಮಾಜದ ಆಧ್ಯಕ್ಷ ರಾಘವೇಂದ್ರ ಪಾಟೀಲ, ಉಪಾಧ್ಯಕ್ಷ ಕಲ್ಪೇಶ ನಾಯಿಕ, ಮಹಿಳಾ ಆಧ್ಯಕ್ಷ ನಿರ್ಮಲಾ ಕುಲಕರ್ಣಿ, ಉಪಾಧ್ಯಕ್ಷ ಸುಷ್ಮಾ ಗಲಗಲಿ ಇವರ ನೇತೃತ್ವದಲ್ಲಿ ಶಿಬಿರ ನೇರವೆರಿತು. ಸದಸ್ಯರಾದ ಸುನಿತಾ ನಾಯಿಕ, ಮಹಾಲಕ್ಷ್ಮೀ ಮಂಡಳ, ರಮೇಶ ಕುಲಕರ್ಣಿ, ರಾಘವೇಂದ್ರ ಮಠದ ಎಲ್ಲ ಸದಸ್ಯರು ಸಹಕರಿಸಿದರು.

loading...