ಭಟ್ಕಳ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ನ್ಯಾ.ನಾಗೇಂದ್ರ ಕಣಕ್ಕೆ ?

0
14
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಭಟ್ಕಳ ರಾಜಕೀಯದಲ್ಲಿ ದಿನಕ್ಕೊಂದರಂತೆ ಬೆಳವಣಿಗೆಗಳು ಆಗುತ್ತಿದ್ದು ಆಕ್ಷಾಂಕಿಗಳ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಹೋಗುತ್ತಿದೆ.
ಮುಸ್ಲಿಂ ಪರಮೊಚ್ಚ ಸಂಸ್ಥೆಯಾದ ತಂಝೀಂ ಇತ್ತಿಚಿಗೆ ಸಭೆ ನಡೆಸಿ ಕಾಂಗ್ರೇಸ್‌ನಿಂದ ತಮ್ಮ ಸಮುದಾಯದ ವ್ಯಕ್ತಿಗೆ ಟಿಕೇಟ್‌ ನೀಡಬೇಕೆಂದು ಆಗ್ರಹಿಸಿತು. ಒಂದೊಮ್ಮೆ ತಮ್ಮ ಸಮುದಾಯ ವ್ಯಕ್ತಿಗೆ ಟಿಕೇಟ್‌ ತಪ್ಪಿದಲ್ಲಿ ತಾವು ಬೇರೆ ಪಕ್ಷಕ್ಕೆ ಬೆಂಬಲ ನೀಡಿ ಕಾಂಗ್ರೇಸ್‌ ಅಭ್ಯರ್ಥಿಯನ್ನು ಸೋಲಿಸುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನು ಕೂಡ ರವಾನಿಸಿತ್ತು. ಆದರೆ ಇವರ ಎಚ್ಚರಿಕೆ ಸಂದೇಶಕ್ಕೆ ಮಣಿಯದ ಕಾಂಗ್ರೇಸ್‌ ಹೈಕಮಾಂಡ ರವಿವಾರ ಹಾಲಿ ಶಾಸಕ ಮಂಕಾಳ ವೈದ್ಯರಿಗೆ ಟಿಕೇಟ್‌ ಘೋಷಣೆ ಮಾಡಿತ್ತು. ಟಿಕೇಟ್‌ ಘೋಷಣೆಯಾದ ಬೆನ್ನಲ್ಲೆ ಭಟ್ಕಳ ತಂಝೀಂ ಸಂಸ್ಥೆ ರವಿವಾರ ರಾತ್ರಿ ಸಭೆ ನಡೆಸಿ ಕಾಂಗ್ರೇಸ್‌ ಸೋಲಿಸಲು ತಮ್ಮ ಬೆಂಬಲದ ಸೂಕ್ತ ವ್ಯಕ್ತಿಯನ್ನು ನಿಲ್ಲಿಸಲು ನಿರ್ಧರಿಸಿದೆ ಎಂಬ ಮಾಹಿತಿ ಗುಟ್ಟಾಗಿ ಉಳಿದಿಲ್ಲ.
ಈ ಹಿಂದೆ ತಂಝೀಂ ಸಂಸ್ಥೆ ಭೇಟಿ ಮಾಡಿದ್ದ ಹೈಕೊರ್ಟ ನ್ಯಾಯವಾದಿ ನಾಗೇಂದ್ರ ನಾಯ್ಕರವರು ಯಾವುದಾದರು ಪಕ್ಷ ತನಗೆ ಟಿಕೇಟ್‌ ನೀಡಿದರೆ ತಾವು ನನಗೆ ಬೆಂಬಲಿಸಬೇಕು ಎಂದು ಕೋರಿಕೊಂಡಿದ್ದರು. ನಾಮಧಾರಿ ಸಮಾಜ ಪ್ರಬಲ ನಾಯಕರಲ್ಲಿ ಓರ್ವರಾಗಿರುವ ನ್ಯಾಯವಾದಿ ನಾಗೇಂದ್ರ ನಾಯ್ಕರವರು ಕಳಂಕರಹಿತರಾಗಿದ್ದಾರೆ. ಕಳೇದ ಕೆಲವು ತಿಂಗಳುಗಳಿಂದ ಭಟ್ಕಳದ ನಾಮಧಾರಿ ಸಮಾಜದ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದು, ಸಮಾಜದ ಕನಸು ತನ್ನದೇ ಆದ ಶಿಕ್ಷಣ ಸಂಸ್ಥೆ ಕಟ್ಟಬೇಕು ಎನ್ನುವ ಆಸೆಗೆ ರೂಪರೇಷೆಗಳನ್ನು ಸಿದ್ದಪಡಿಸುತ್ತಿದ್ದಾರೆ. ನಾಮಧಾರಿ ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿರುವ ನಾಗೇಂದ್ರ ನಾಯ್ಕರಿಗೆ ನಾಮಧಾರಿಗಳು ಎಲ್ಲಾ ರೀತಿಯಿಂದಲೂ ಒಲವು ತೋರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಭಟ್ಕಳ ಕ್ಷೇತ್ರದಲ್ಲೆ ಅತೀ ಹೆಚ್ಚೂ ಮತದಾರರಿರುವ ನಾಮಧಾರಿ ಸಮುದಾಯಕ್ಕೆ ಬಿಜೆಪಿ ಟಿಕೇಟ್‌ ನೀಡಿದ್ದು ಸುನೀಲ್‌ ನಾಯ್ಕ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇನ್ನೊಂದು ಕಡೆ ಇನ್ನೊರ್ವ ನಾಮಧಾರಿ ನ್ಯಾಯವಾದಿ ನಾಗೇಂದ್ರ ನಾಯ್ಕ ಜೆಡಿಎಸ್‌ನಿಂದ ಟಿಕೇಟ್‌ ಪಡೆದು ಕಣಕ್ಕಿಳಿದಿದ್ದೆ ಆದಲ್ಲಿ ಮೂವರಲ್ಲಿ ತೀಕ್ರೋಣ ಸ್ಪರ್ಧೇ ಎರ್ಪಡುವುದರಲ್ಲಿ ಸಂಶಯವಿಲ್ಲ.

loading...