ಭರಾಟೆಯಲ್ಲಿ ದನಗಳ ಪ್ರದರ್ಶನ, ಮಾರಾಟ ಮೇಳ

0
25
loading...

ಅಥಣಿ 03: ಮುರುಘೇಂದ್ರ ಶಿವಯೋಗಿಗಳ 97ನೇ ಸ್ಮರಣೋತ್ಸವ ಜಾತ್ರಾ ನಿಮಿತ್ತ, ದÀನಗಳ ಪ್ರದರ್ಶನ ಹಾಗು ಮಾರಾಟ ಭರಾಟೆಯಿಂದ ಜರುಗಿತು.1.30 ಲಕ್ಷ ವೆಚ್ಚಕ್ಕೆ ಜೋಡೆತ್ತು ಮಾರಾಟವಾದ ದಾಖಲೆಯಾಗಿದೆ.

ಮಾ.30 ರಿಂದ ಎ.1ರವರೆಗೆ ಮೂರು ದಿನಗಳ ಕಾಲ ಮಾರಾಟ ಮೇಳ ಜರುಗಿತು. ಈ ಸಮಯದಲ್ಲಿ ಜೋಡೆತ್ತಿನ ಬೆಲೆ 1 ಲಕ್ಷ 30 ಸಾವಿರದಿಂದ 50 ಸಾವಿರವರೆಗೆ ದರ ಕೇಳಿಬರುತ್ತಿತ್ತು. ಕೋಳಿಗುಡ್ಡದ 1 ಜೋಡು 1.25 ಲಕ್ಷ ವರೆಗೆ ಮಾರಾಟವಾಯಿತು. ಅದರೊಂದಿಗೆ ಐಗಳಿಯ ಜೋಡಿ 1.10 ಲಕ್ಷ ಮಾರಾಟವಾಯಿತು. ಇವುಗಳ ಮಧ್ಯೆ ಸಾಮಾನ್ಯ ಜೋಡಿಗಳು 25 ಸಾವಿರದಿಂದ 30 ಸಾವಿರದವರೆಗೆ ಮಾರಾಟವಾದವು.
ಬಳಿಕ ಏ.2 ,3 ರಂದು ಯಾವ ಜೊಡಿಗಳು ಲಕ್ಷದ ಮೆಲೆ ಮಾರಾಟವಾಗಲಿಲ್ಲ, ಹುಲಗಬಾಳಿಯ ಕರಿ ಎತ್ತಿನ ಜೋಡಿ 80 ಸಾವಿರ ಬೆಲೆ ಬಾಳುವಂತಿತ್ತು. ಆದರೆ ಸಾಮಾನ್ಯವಾಗಿ 50 ರಿಂದ 60 ಸಾವಿರದವರೆಗೆ ಮಾತ್ರ ಮಾರಾಟವಾದವು. ತೀರ ಸಣ್ಣ ಹೋರಿ, ದನಗಳು 10 ಸಾವಿರದ ಮೇಲೆ ಬೆಲೆ ಏರಲಿಲ್ಲ. ಮಾರಾಟದಲ್ಲಿ ಮಧ್ಯಸ್ಥಿಕೆ ವಹಿಸುವರು ಮಹಾರಾಷ್ಟ್ರದ ನಗರ, ಸಾಂಗೊಲಾ ,ಜತ್ತ ,ವಿಜಾಪುರುದ ಇಂಡಿ ಭಾಗದ ಜನರು ಮತ್ತು ಗಡಿಭಾಗದವರು ಬಂದಿದ್ದರು. ಅವರ ಅಭಿಪ್ರಾಯದ ಮೆರೆಗೆ ಕೇವಲ 4 ರಿಂದ 5 ಸಾವಿರ ದನಗಳು ಕೂಡಿದ್ದವು. ಹೀಗಾಗಿ ಈ ಜಾತ್ರೆಗೆ ಬಂದ ದನಗಳು ಕೆವಲ 1 ,2 ದಿವಸ ನಿಂತಿದ್ದು ಧಿಡೀರನೆ ಯಾದವಾಡ ಘಟ್ಟಿ ಬಸವೇಶ್ವರ ಜಾತ್ರೆಗೆ ಪಯಣಿಸಿದವು. ಇಂದು ಇದ್ದ ದನಗಳು ತಮ್ಮ ತಮ್ಮ ಮನೆ ಕಡೆಗೆ ಹೊರಡಬಹದು.

loading...