ಭಾರತೀಯ ಬಹುಜನ ಕ್ರಾಂತಿ ದಳವು 99 ಕ್ಷೇತ್ರಗಳಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸಲಿದೆ: ರಾಥೋಡ

0
12
loading...

ಕನ್ನಡಮ್ಮ ಸುದ್ದಿ-ಶಿರಸಿ: ದೇಶದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಬಹುಜನ ಕ್ರಾಂತಿ ದಳವು ಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 99 ಕ್ಷೇತ್ರಗಳಲ್ಲಿ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮೋರಸಿಂಗ್‍ಭಾಯ್ ರಾಥೋಡ ಹೇಳಿದರು.
ಪಕ್ಷದ ಪ್ರಚಾರ ನಿಮಿತ್ತ ಶಿರಸಿಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ಆಡಳಿತಾರೂಢ ಸರ್ಕಾರಗಳಿಂದ ಬಹುಜನರ ಕಲ್ಯಾಣ ಆಗುತ್ತಿಲ್ಲ. ಶೇ.85ರಷ್ಟಿರುವ ಬಹುಜನರ ಕಲ್ಯಾಣ ಮಾಡುವ ಪಕ್ಷದ ಕೈಗೆ ಅಧಿಕಾರ ಬರಬೇಕು.

ದೇಶದಲ್ಲಿ ಕೃಷಿಕರು ಸಂಕಷ್ಟದಲ್ಲಿದ್ದು ಮಳೆ ಆಧಾರದಲ್ಲಿ ಕೃಷಿ ಅವಲಂಬನೆಯು ಸರಿಯಲ್ಲ. ಪೂರಕ ಉದ್ಯಮಗಳನ್ನು ಮಾಡಲು ಪಕ್ಷ ಬೆಂಬಲಸುತ್ತದೆ. ಕರ್ನಾಟಕದಿಂದ ಅಸಂಘಟಿತ ಕಾರ್ಮಿಕರು ಬೇರೆ ಕಡೆ ವಲಸೆ ಹೋಗುತ್ತಿದ್ದು, ಅವರಿಗೆ ಸ್ಥಳೀಯವಾಗಿ ಉದ್ಯೋಗ ಕೊಡಿಸುವ ಚಿಂತನೆ ಇದೆ. ನಿರುದ್ಯೋಗಿಗಳಿಗೆ ಭತ್ಯೆ ಕೊಡುವ ಚಿಂತನೆ ಇದೆ ಎಂದ ಅವರು, ಈ ಬಾರಿ ಚುನಾವಣೆಯಲ್ಲಿ 50 ಸ್ಥಾನ ಗೆಲ್ಲುವ ಸಾಧ್ಯತೆ ಇದ್ದು, ಯಾವ ಪಕ್ಷದ ಜೊತೆ ಮುಂದೆ ಹೊಂದಾಣಿಕೆ ಬಗ್ಗೆ ಚಿಂತನೆ ನಡೆಸಿಲ್ಲ ಎಂದರು.
ರಾಜ್ಯ ಅಧ್ಯಕ್ಷ ಶಂಕರ ಚವ್ಹಾಣ ಮಾತನಾಡಿ, ಕರಾವಳಿ ಭಾಗದಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಪ್ರಧಾನವಾಗಿದ್ದು, ನಮ್ಮ ಪಕ್ಷವು ಆದ್ಯತೆಯಡಿ ಇದನ್ನು ಪರಿಗಣಿಸಿದೆ. ಸದ್ಯ ಶಿರಸಿ ಕ್ಷೇತ್ರದಿಂದ ಕುಬೇರ ಬಿಜೋ, ಯಲ್ಲಾಪುರ ಕ್ಷೇತ್ರದಿಂದ ಜಿಲ್ಲಾಧ್ಯಕ್ಷ ನೀಲಪ್ಪ ಲಮಾಣಿ ಸ್ಪರ್ಧಿಸಲಿದ್ದು, ಹಳಿಯಾಳದಲ್ಲಿಯೂ ಶಿಘ್ರದಲ್ಲಿ ಸ್ಪರ್ಧಿಯನ್ನು ಕಣಕ್ಕಿಳಿಸಲಿದ್ದೇವೆ ಎಂದರು. ಈ ವೇಳೆ ರಾಜ್ಯ ಸಂಚಾಲಕ ರಾಜೇಂದ್ರ ಚವ್ಹಾಣ ಇದ್ದರು.

loading...