ಭಾರತೀಯ ಸಂಸ್ಕøತಿ-ಸಂಸ್ಕಾರಗಳು ಜಗತ್ತಿಗೆ ಮಾದರಿ: ಚಂದ್ರಶೇಖರ ಶಿವಾಚಾರ್ಯರು

0
21
loading...

ಹುಕ್ಕೇರಿ 04: ಐತಿಹಾಸಿಕ ಹಿನ್ನೆಲೆಯುಳ್ಳ ಭಾರತೀಯ ಸಂಸ್ಕøತಿ-ಸಂಸ್ಕಾರಗಳಿಗೆ ವಿಶ್ವದೆಲ್ಲೆಡೆ ಗೌರವ ದೊರೆಯುತ್ತಿದ್ದು, ನಮ್ಮ ಸನಾತನ ಸಂಪ್ರದಾಯಗಳು ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ಲಪಟ್ಟಣದ ಹಿರೇಮಠದಲ್ಲಿ ಆiÀiÁ ದೇಶಕ್ಕೆ ಭಾರತದ ರಾಯಭಾರಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿದ ನಿಮಿತ್ತ ಆಯೋಜಿಸಿದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಮುಂದುವರೆದ ರಾಷ್ಟ್ರಗಳಲ್ಲಿನ ಜನ ಕೇವಲ ಯಾಂತ್ರಿಕ ಬದುಕಿನಲ್ಲಿ ಮಗ್ನರಾಗುವ ಮೂಲಕ ಜೀವನದಲ್ಲಿ ನೆಮ್ಮದಿ, ಶಾಂತಿ, ಸಹನಶೀಲ ಗುಣಗಳನ್ನು ಕಳೆದುಕೊಂಡಿದ್ದು, ಧಾರ್ಮಿಕತೆ ಮನಸು ಪರಿವರ್ತಿಸುವ ಶಕ್ತಿ ಹೊಂದಿದ್ದರಿಂದಲೇ ಜಗತ್ತು ಭಾರತೀಯ ಸಂಸ್ಕøತಿಯನ್ನು ಗೌರವಿಸುತ್ತಿದೆ ಎಂದರು.
ಅರ್ಬನ ಬ್ಯಾಂಕ ಸದಸ್ಯ ರಾಜು ಬಾಗಲಕೋಟಿ, ನಮ್ಮ ದೇಶದ ಸಂಸ್ಕøತಿ ಆಸ್ಟ್ರೇಲಿಯಾ ದೇಶವರಿಗೆ ಮಾದರಿಯಾಗಿ ಮಾಡಿದ ಚಂದ್ರ ಶೇಖರ ಸ್ವಾಮಿಜಿಯವರ ಕಾರ್ಯ ಅನನ್ಯ. ಆಸ್ಟ್ರೇಲಿಯಾ ದೇಶದ ಹಾಗೂ ನಮ್ಮಲ್ಲಿರುವ ಪದ್ದತಿಯ ಬಗ್ಗೆ ಭಕ್ತರಿಗೆ ತಿಳಿವಳಿಕೆ ಹಾಗೂ ಅಧ್ಯಯ ಮಾಡಿದ್ದಾರೆ. ಪಟ್ಟಣದ ಭಕ್ತರು ಅದರ ಸದಪಯೋಗ ಮಾಡಿಕೋಳಬೇಕೆಂದು ಹೇಳಿದರು.

ಭಕ್ತರಾದ ಸುರೇಶ ಹುಣಶ್ಯಾಳ, ವಿರೇಶ ಗಜಬರ, ನಾಗೇಶ ಪಾಟ್ನೆ,ಮಹಾಂತೇಶ ಹಿರೇಮಠ ರಂಗನಾಥ ಬಾರಕರ,ದುಂಡಯ್ಯ ನಂದಿಕೋಲಮಠ,ಚನ್ನಪ್ಪಾ ಗಜಬರ,ಸಚೀನ ಹಿರೇಮಠ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...