ಭಾವೈಕ್ಯತೆಯನ್ನು ಸಾರುವ ಹಾಲೇಶ್ವರ ದೇವಾಲಯದಲ್ಲಿ ಜಾತ್ರ ಸಂಭ್ರಮ

0
22
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಕಾಗದ ನಗರಿ ಎಂದೇ ಖ್ಯಾತಿ ಪಡೆದ ದಾಂಡೇಲಿ ಇದು ಸರ್ವ ಧರ್ಮ ಸಮನ್ವಯ ನಗರವು ಹೌದು. ಬೇರೆ ಬೇರೆ ಜಾತಿ, ಧರ್ಮ, ರಾಜ್ಯ, ಜಿಲ್ಲೆಗಳ ಜನ ಬಂದು ನೆಲೆಸಿರುವ ಮಿನಿ ಇಂಡಿಯಾನು ಹೌದು. ಇಲ್ಲಿ ಎಲ್ಲ ಭಾಷೆಗಳನ್ನು ಮಾತನಾಡುವ ಜನರಿದ್ದು, ಎಲ್ಲರೊಂದಿಗೆ ಬೆರೆಯುವ ಪರಸ್ಪರ ಅನ್ಯೋನ್ಯತೆಯ ಅನನ್ಯ ಸಂಬಂಧವನ್ನು ಹೊಂದಿ, ಆ ಮೂಲಕ ನಾವೆಲ್ಲರೂ ಒಂದೇ ಎಂಬ ಭಾತೃತ್ವದ ಸಂದೇಶದ ಪ್ರಸಾರವಾಗುತ್ತಿದೆ. ಪ್ರತಿಯೊಂದು ಧರ್ಮದವರ ಹಬ್ಬ ಹರಿದಿನಗಳನ್ನು ಶೃದ್ಧಾಭಕ್ತಿಯಿಂದ ಆಚರಿಸಿಕೊಳ್ಳುವ ಪರಿಯನ್ನಂತು ಇಲ್ಲಿ ನೋಡಲೇಬೇಕು. ಅದಕ್ಕೊಂದು ಅತ್ಯುತ್ತಮವಾದ ಉದಾಹರಣೆ ಇಲ್ಲಿದೆ ನೋಡಿ.
ಜನರಿಟ್ಟ ಹೆಸರು ದೂದನಾನ: ಇಲ್ಲಿ ಹುತ್ತಕ್ಕೂ ಪೂಜೆಯಿದೆ ಸಣ್ಣ ಜೋಪಡಿಯ ಈ ದೇವಾಲಯವನ್ನು ಜನರು ದೂದನಾನ ಎಂದು ಕರೆಯಲು ಪ್ರಾರಂಭಿಸಿದರು. 1973 ರಿಂದ 1987 ರವರೆಗೆ ಜೋಪಡೆಯನ್ನೇ ಹೊಂದಿದ್ದ ಈ ಕೇವಲ ಹುತ್ತವನ್ನೇ ಪೂಜೆ ಮಾಡಲಾಗುತ್ತಿದ್ದ ಈ ದೇವಸ್ಥಾನವನ್ನು ಸ್ಥಳೀಯ ಜನರು ಸೇರಿ ಒಂದು ಸಮಿತಿ ರಚಿಸಿ, ಸಂಘಟನೆಯ ಮೂಲಕ ಭಗವದ್ಭಕ್ತರ ಸಹಾಯ ಸಹಕಾರದಿಂದ 1987 ರಲ್ಲಿ ಜೋಪಡಿಯನ್ನು ತೆಗೆದು ಗರ್ಬಗುಡಿಯನ್ನು ನಿರ್ಮಾಣಮಾಡಲಾಯಿತು. ಈ ಸಂದರ್ಭದಲ್ಲಿ ಕಾಶೀ ಜಗದ್ಗುರು ಶ್ರೀ.ಶ್ರೀ.ಶ್ರೀ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಹಸ್ತದಿಂದ ಈಶ್ವರ ಲಿಂಗ ಮತ್ತು ನಂದಿ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರದ ದಿನಗಳಿಂದ ಹುತ್ತದ ಜೊತೆಗೆ ಪ್ರತಿಷ್ಠಾಪಿಸಿದ ಲಿಂಗಗಳಿಗೂ ಪೂಜೆ ಮಾಡುವುದನ್ನು ಪ್ರಾರಂಭಿಸಲಾಯಿತು. ಈ ದೇವಾಲಯದ ಪೂಜಾ ಕೈಂಕರ್ಯಗಳನ್ನು ಮಾಡುವುದರ ಜೊತೆಗೆ ಭಕ್ತ ಜನರ ಸಮಸ್ಯೆಗಳಿಗೆ ಸಾಂತ್ವನದ ಅಭಯವನ್ನು ಅಜ್ಜರಾದ ರಾಮಚಂದ್ರ.ಬಾ.ಪರಮಂಜಿಯವರೇ ನೀಡುತ್ತಿದ್ದರು. ಭಕ್ತರ ಇಷ್ಟಾರ್ಥಗಳನ್ನು ತನ್ನ ಧ್ಯಾನದ ಮನಸ್ಸಿನಲ್ಲಿಯೇ ಈಡೇರಿಸುತ್ತಿದ್ದರು.

ಶನಿವಾರ ಜಾತ್ರ ಮಹೋತ್ಸವದ ನಿಮಿತ್ತ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ಪ್ರಸಾಧ ಸ್ವೀಕರಿಸಿದರು.

loading...