ಭೀಮಣ್ಣ ನಾಯ್ಕಗೆ ಟಿಕೆಟ್ ಕನ್ಫರ್ಮ್

0
24
loading...

ಕನ್ನಡಮ್ಮ ಸುದ್ದಿ-ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಥಾನ ಹಂಚಿಕೆಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ಪಕ್ಕಾ ಆಗಿದೆ. ಬಣ ರಾಜಕಾರಣದಲ್ಲಿ ಟಿಕೆಟ್ ಕೈ ತಪ್ಪೋ ಹಂತ ತಲುಪಿದ್ದ ಭೀಮಣ್ಣ ನಾಯ್ಕರ ಆಸೆ ಇದೀಗ ಈಡೇರಿದೆ. ಈ ನಡುವೆ ಒಬ್ಬರಿಗೊಬ್ಬರು ಕಾಲೆಳೆಯುವ ಹೇಳಿಕೆಗಳೂ ಜೋರಾಗುತ್ತಿವೆ. ಸಂಬಂಧಿಕರಾದ್ರೂ ರಾಜಕೀಯವಾಗಿ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡ ಇಂತಹ ರಾಜಕಾರಣಿಗಳಿಂದ ಚುನಾವಣಾ ಕಣ ರಂಗೇರುತ್ತಿದೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭೀಮಣ್ಣ ನಾಯ್ಕಗೆ ಟಿಕೆಟ್ ಕನ್ಫರ್ಮ್ ಆಗಿದೆ. ದಿವಗಂತ ಮಾಜಿ ಸಿಎಂ ಎಸ್.ಬಂಗಾರಪ್ಪ ಸಂಬಂದಿಕರಾಗಿರೋ ಭೀಮಣ್ಣ ನಾಯ್ಕ ಶಿರಸಿ-ಸಿದ್ದಾಪುರದಲ್ಲಿ ಅವರದ್ದೇ ಆದ ಛಾಪು ಮೂಡಿಸಿದ್ದೋರು. ಆದ್ರೆ ಅದೇ ಮಾಜಿ ಸಿಎಂ ಬಂಗಾರಪ್ಪ ಪುತ್ರ ಜೆಡಿಎಸ್‍ನ ಮಧು ಬಂಗಾರಪ್ಪ ಮಾತ್ರ ಟಿಕೆಟ್ ಪಡಿಯೋಕೆ ಹಾಗೂ ಅಧಿಕಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಮನೆ ಬಾಗಿಲು ಕಾಯುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥೀ ಭೀಮಣ್ಣ ನಾಯ್ಕ ಅವರ ಕಾಲೆಳೆದಿದ್ದರು. ಸಿದ್ದಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕರನ್ನ ಕುಟಿಕಿದ್ರು. ಚುನಾವಣೆ ದಿನದವರೆಗೂ ಅವರ ಕಚ್ಚಾಟ ನಡೆಯುತ್ತಲೇ ಇರುತ್ತದೆ. ಜೆಡಿಎಸ್ ಈಗಾಗಲೇ ಯಾವುದೇ ಗೊಂದಲವಿಲ್ಲದೇ ಅಭ್ಯರ್ಥಿ ಘೋಷಣೆ ಮಾಡಿದ್ದು, ಅಭ್ಯರ್ಥಿಗಳು ಮನೆ ಮನೆ ಭೇಟಿ ನೀಡಿ ಜೆಡಿಎಸ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಒಟ್ಟಾರೆ ಶಿರಸಿ ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹಾಗೂ ಜೆಡಿಎಸ್ ನಾಯಕ ಮಧು ಬಂಗಾರಪ್ಪ ಸಂಬಧಿಕಾರಾಗಿದ್ರು, ರಾಜಕೀಯದಲ್ಲಿ ಮಾತ್ರ ದಾಯಾದಿಗಳ ಕಲಹ ಮಾಡಿಕೊಂಡರೆ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮೂಡುತ್ತಿದೆ. ದೇಶಪಾಂಡೆ ಅವರ ಬಗ್ಗೆ ಆರೋಪ ಮಾಡೋ ಗುಂಗಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಅವರ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಈ ಲೀಸ್ಟಲ್ಲಿ ಮಧು ಬಂಗಾರಪ್ಪ ಸಂಬಂಧಿ ಭೀಮಣ್ಣ ನಾಯ್ಕ ಕೂಡ ಒಬ್ಬರು ಅನ್ನೋದು ಸತ್ಯ.

loading...