ಮಂಕಾಳ ವೈದ್ಯರನ್ನು ಬೆಂಬಲಿಸಲು ತೀರ್ಮಾನ: ಕಲೈವಾಲಾ

0
23
loading...

ಕನ್ನಡಮ್ಮ ಸುದ್ದಿ-ಭಟ್ಕಳ: ತಾಲೂಕಾ ಇದಾರೆ ಫೈಸರುಸೂಲ್ ಸಂಘಟನೆಯ ವತಿಯಿಂದ ಈ ಬಾರಿಯ ಚುನಾವಣೆಯಲ್ಲಿ ಮಂಕಾಳ ವೈದ್ಯರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟನೆ ಖಾಜಾ ಹಸನ್ ಕಲೈವಾಲಾ ತಿಳಿಸಿದ್ದಾರೆ.
ಇಲ್ಲಿನ ಖಾಸಗೀ ಹೋಟೆಲ್‍ನಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಇದಾರೆ ಫೈಸರುಸೂಲ್ ಸಂಘಟನೆಯು ಸುನ್ನಿ, ದಖನಿ, ತಂಗರಕರ ಜನತೆಯ ಸಂಘಟನೆಯಾಗಿದ್ದು ಭಟ್ಕಳ ಮತದಾರ ಕ್ಷೇತ್ರದಲ್ಲಿ ಸಂಘಟನೆಯ ಹತ್ತು ಸಾವಿರಕ್ಕೂ ಹೆಚ್ಚು ಜನರಿದ್ದೇವೆ. ನಾವು ಈ ಬಾರಿ ಒಮ್ಮತದಿಂದ ಮಂಕಾಳ ವೈದ್ಯರು ಯಾವುದೇ ಪಕ್ಷದಲ್ಲಿ ನಿಂತರೂ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ಮುನೀರ್ ಅಹಮ್ಮದ್ ಮಾತನಾಡಿ ಮುಂದಿನ ಚುನಾವಣೆಯಲ್ಲಿ ನಾವು ಪಕ್ಷಾತೀತವಾಗಿ ಮಂಕಾಳ ವೈದ್ಯರಿಗೆ ಬೆಂಬಲ ನೀಡುತ್ತೇವೆ. ಈ ಹಿಂದೆ ಎಲ್ಲಾ ಚುನಾವಣೆಗಳಲ್ಲಿ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೇ ಕೆಲವು ಸಂಘಟನೆಗಳು ತಾವೇ ಮುಸ್ಲಿಂ ಓಟುಗಳನ್ನು ಕೊಡಿಸುತ್ತೇವೆನ್ನುವಂತೆ ಪೋಸು ಕೊಡುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮನ್ನು ಕಡೆಗಣಿಸಲಾಗುತ್ತಿರುವುದರಿಂದ ನಾವು ಈ ಬಾರಿ ಚುನಾವಣೆಯಲ್ಲಿ ನಮ್ಮದೇ ನಿರ್ಧಾರ ಕೈಗೊಂಡಿದ್ದೇವೆ ಒಂದು ಓಟು ಕೂಡಾ ಬೇರೆ ಯಾವುದೇ ಸಂಘಟನೆ ಹೇಳಿದರೆ ಹಾಕಲು ನಾವು ತಯಾರಿಲ್ಲ ಎಂದರು.
ಸಂಸ್ಥೆಯ ಜನರಲ್ ಸಕ್ರೆಟರಿ ಇಸ್ಮಾಯಿಲ್ ಫಾರೂಕಿ ಮಾತನಾಡಿ ನಮ್ಮ ಸಂಸ್ಥೆಯು ರಾಜಕೀಯೇತರ ಸಂಸ್ಥೆಯಾಗಿದ್ದು ನಮ್ಮ ದೇಶದ ಸಂಸ್ಕøತಿಯನ್ನು, ಸಾರಭೌಮತ್ವನ್ನು ಎತ್ತಿ ಹಿಡಿಯುವತ್ತ ನಮ್ಮ ಪ್ರಯತ್ನ ಸಾಗಿದೆ. ಶರಣರನ್ನು, ಸೂಫಿ ಸಂತರನ್ನು ಆರಾಧಿಸುವ ನಾವು ಸಮಾಜದ ಒಳಿತಿಗಾಗಿ ಶ್ರಮಿಸುತ್ತೇವೆ. ಈ ಚುನಾವಣೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಪಕ್ಷೇತರ ಅಭ್ಯರ್ಥಿ ನಿಲ್ಲಿಸಲು ಯೋಚಿಸಿದ್ದೆವು. ಆದರೆ ಅದನ್ನು ಕೈಬಿಟ್ಟು ನಮ್ಮ ಕ್ಷೇತ್ರದಲ್ಲಿ ಉತ್ತಮ, ಬಡವರ ಪರವಾಗಿ ಕೆಲಸ ಮಾಡಿದ, ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಶ್ರಮಿಸುತ್ತಿರುವ ಮಂಕಾಳ ವೈದ್ಯ ಅವರನ್ನು ಬೆಂಬಲಿಸಲು ಒಕ್ಕರಲ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಬ್ದುಲ್ ಸತ್ತಾರ್, ಮೌಲಾನಾ ಮೊಹಮ್ಮದ್ ಅಕ್ರಮಿ, ಮುಂತಾದವರು ಉಪಸ್ಥಿತರಿದ್ದರು.

loading...