ಮತದಾನಕ್ಕಾಗಿ ಬೈಕ್‌ ರ್ಯಾಲಿ ಜನರಲ್ಲಿ ಜಾಗೃತಿ ಮೂಡಿಸಿದ ಸಿಇಓ ಸುರಳಕರ

0
29
loading...

ಬಾಗಲಕೋಟೆ: ಮತದಾನ ಜಾಗೃತಿಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ರಾಜ್ಯ ಸರಕಾರಿ ನೌಕರರ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಬೈಕ್‌ ರ್ಯಾಲಿ ಆಯೋಜಿಸಲಾಗಿತ್ತು.
ಜಿಲ್ಲೆಯ ಸರಕಾರಿ ನೌಕರರು ಭಾಗವಹಿಸಿದ್ದ ಈ ಬೈಕ್‌ ರ್ಯಾಲಿ ಸಾರ್ವಜನಿರಕ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜಿ.ಪಂ ಸಿಇಓ ವಿಕಾಸ ಸುರಳಕರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕರಿ ಸಿ.ಬಿ.ರಿಷ್ಯಂತ ಸ್ವತಃ ನಗರದಲ್ಲಿ ಬೈಕ್‌ ಸವಾರಿ ಮಾಡುವ ಮೂಲಕ ರ್ಯಾಲಿಯುದ್ದಕ್ಕೂ ಭಾಗವಹಿಸಿದ್ದು ವಿಶೇಷವಾಗಿತ್ತು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಬೈಕ್‌ ರ್ಯಾಲಿಗೆ ಜಿ.ಪಂ ಸಿಇಓ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಚಾಲನೆ ನೀಡಿದರು. ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಬೈಕ್‌ ರ್ಯಾಲಿ ಜಿಲ್ಲಾ ಆಡಳಿತ ಭವನದಿಂದ ಪ್ರಾರಂಭವಾಗಿ ಬಸವೇಶ್ವರ ಬ್ಯಾಂಕ್‌, ನವನಗರ, ಕಾಳಿದಾಸ ಸರ್ಕಲ್‌, ಇಂಜಿನೀಯರಿಂಗ್‌ ಸರ್ಕಲ್‌, ವಿದ್ಯಾಗಿರಿ 6ನೇ ಕ್ರಾಸ್‌, ವಿದ್ಯಾಗಿರಿ ಪೊಲೀಸ್‌ ಸ್ಟೇಶನ್‌, ಕೃಷ್ಣಾ ಟಾಕೀಸ್‌, ಪಂಕಾ ಮಸೂತಿ, ವಲ್ಲಭ ಭಾಯಿ ಚೌಕ್‌, ಬಸವೇಶ್ವರ ಸರ್ಕಲ್‌, ಬಸ್‌ಸ್ಟ್ಯಾಂಡ್‌, ರೈಲ್ವೆ ನಿಲ್ದಾಣ ಹಾಗೂ ಎಪಿಎಂಸಿ ಮಾರ್ಗಮೂಲಕ ಸಂಚರಿಸಿ ಜಿಲ್ಲಾಡಳಿತ ಭವನದಲ್ಲಿ ಕೊನೆಗೊಂಡಿತು. ರ್ಯಾಲಿಯುದ್ದಕ್ಕೂ ಮತದಾನದ ಮಹತ್ವ, ಮತದಾರರ ಪಟ್ಟಿಗೆ ಸೇರ್ಪಡೆಗೆ ಏಪ್ರೀಲ್‌ 14 ಕೊನೆಯ ದಿನ ಹಾಗೂ ಮೇ 12 ರಂದು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ದಾರಿಯುದ್ದಕ್ಕೂ ಜಾಗೃತಿ ಮೂಡಿಸಲಾಯಿತು. ಮತದಾರರ ಜಾಗೃತಿ ಕುರಿತಾದ ಘೋಷನೆಗಳ ಪ್ಲೇ ಕಾರ್ಡಗಳನ್ನು ಪ್ರದರ್ಶಿಸಲಾಯಿತು. ಬೈಕ್‌ ರ್ಯಾಲಿ ನಗರದಲ್ಲಿ ಸಂಚರಿಸುವ ಮೂಲಕ ಎಲ್ಲರ ಗಮನ ಸೆಳೆಯಿತು. ರ್ಯಾಲಿಯಲ್ಲಿ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಹ ಬೈಕ್‌ ಸವಾರಿ ನಡೆಸಿದ್ದು ಎಲ್ಲರನ್ನು ಆಕರ್ಷಿಸಿತು. ಬೈಕ್‌ ರ್ಯಾಲಿಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ ಕುಮಾರ, ಉಪನಿರ್ದೇಶಕರಾದ ಕೊಂಗವಾಡ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿU ಬಿ.ಎಸ್‌.ಶಿರೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕಾಮಾಕ್ಷಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎ.ಎನ್‌.ದೇಸಾಯಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಹೊಕಾಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿ.ವಿ.ಚೈತ್ರಾ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿಗಳಾದ ಮಂಜುನಾಥ ಸುಳ್ಳೊಳ್ಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕನವಾಡಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ಬಳ್ಳಾರಿ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿವರ್ಗದವರು ಹಾಗೂ ವಿಕಲಚೇತನರು ಬೈಕ್‌ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

loading...