ಮತದಾನದ ಹಕ್ಕನ್ನು ಕಳೆದುಕೊಳ್ಳಬೇಡಿ: ಕೆಂಚಿಕೊಪ್ಪದ

0
15
loading...

ಹಿರೇಕೆರೂರ: ಮತದಾನವೆಂಬುವುದು ಶ್ರೇಷ್ಠವಾದುದು. ಮತದಾನ ಪ್ರಜಾ ಪ್ರಭುತ್ವದಲ್ಲಿ ಜೀವಾಳ.ಮತದಾನ ಮಾಡುವುದು ನಮ್ಮ ಕರ್ತವ್ಯ. ಮತದಾನದ ಹಕ್ಕು ದೊರೆತಿರುವುದು ನಮ್ಮ ಪುಣ್ಯ. ಮತದಾನದ ಹಕ್ಕನ್ನು ಯಾರು ಕಳೆದುಕೊಳ್ಳಬಾರದು, ಎಲ್ಲರೂ ತಪ್ಪದೇ ಮತದಾನಮಾಡಬೇಕು ಎಂದು ಗ್ರಾಮ ಲೆಕ್ಕಾಧಿಕಾರಿ ಸುಮಾ ಕೆಂಚಿಕೊಪ್ಪದ ಹೇಳಿದರು.

ಅವರು ಹಿರೇಕೆರೂರ ರಟ್ಟೀಹಳ್ಳಿ ತಾಲೂಕಿನ ಪುರತಕೇರಿ ಗ್ರಾಮದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮತದಾನ ಎಂಬುವುದು ಈ ದೇಶದಲ್ಲಿ ನಮಗೆ ನೀಡಿ ದೊಡ್ಡ ಹಕ್ಕು. ಆ ಹಕ್ಕನ್ನು ನಾವು ಚಲಾಯಿಸಬೇಕಾದರೆ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದ ದಿನ ತಪ್ಪದೇ ಮತದಾನ ಮಾಡಬೇಕೆಂದು ಮನವಿ ಮಾಡಿದರು. ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಎಲ್‍ಒ ದೇವೇಂದ್ರಪ್ಪ ಹೊನ್ನಾಳಿ, ದ್ರಾಕ್ಷಾಯಿಣಿ ಅಕಾರ್ಚಾರಿ, ನೇತ್ರಾವತಿ ಅಂಗಡಿ, ರಾಧಾ ಪಾಳೇದ ಮತ್ತು ವಿದ್ಯಾರ್ಥಿಗಳು ಇದ್ದರು.

loading...