ಮತದಾನವೂ ಮೂಲಭೂತ ಕರ್ತವ್ಯವಾಗಿದೆ:ರಾಮಚಂದ್ರನ್‌

0
24
loading...

ಕನ್ನಡಮ್ಮ ಸುದ್ದಿ- ರಾಮದುರ್ಗಃ ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪವಿತ್ರವಾದದ್ದು ಆದ್ದರಿಂದ ಮೇ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು,ಮತದಾನ ನಮ್ಮ ನಿಮ್ಮೆಲ್ಲರ ಮೂಲ ಭೂತ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎನ್‌ ರಾಮಚಂದ್ರನ್‌ ಜಾಗೃತಿಯನ್ನು ಮೂಡಿಸಿದರು.
ಪಟ್ಟಣದಲ್ಲಿ ಮತದಾನದ ಕರೆಯೋಲೆಯೊಂದಿಗೆ ಮತದಾನದ ಜಾಗೃತಿಯನ್ನು ಕಾರ್ಯವನ್ನು ಮಾಡಿಸಿ ಹುತಾತ್ಮ ಚೌಕದ ಹತ್ತಿರ ಮಾನವ ಸರಪಳಿಯೊಂದಿಗೆ ಅರಿವು ಮೂಡಿಸವ ಕಾರ್ಯಮ ಹಮ್ಮಿಕೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಚುನಾವಣೆಯ ಸಮಯ ಬಂದಿದೆ ಆದ್ದರಿಂದ ಮತದಾನ ಮಾಡುವುದು ನಮ್ಮ ನಿಮ್ಮೇಲರ ಕರ್ತವ್ಯ ಮತದಾನ ಪ್ರಕ್ರಿಯೇಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಸಾರ್ವಜನಿಕರಲ್ಲಿ ಕರೆ ನೀಡಿದರು.
ಈ ಮತದಾನದಿಂದ ದೇಶ ರಾಜ್ಯದ ಭವಿಷ್ಯವನ್ನು ನಿರ್ಧರಿಸಲಿದೆ ಆದ್ದರಿಂದ ಯಾವುದೆ ಆಸೆ ಆಮಿಸೆಗಳಿಗೆ ಒಳಗಾಗದೆ ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.
ಚುನಾವಣಾಧಿಕಾರಗಳಾದ ಎಇಇ ಆರ್‌.ಪಿ.ಖಾನಾಪೂರೆ, ಬೈಲಹೊಂಗಲ್‌ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಂಟಗೋಡಿ ಪುರಸಭೆಯ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಎಸ್‌ ವಿ.ಸೋಗಲದ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಆರ್‌.ನಿಡೋಣಿ ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

loading...