ಮತದಾನ ಕ್ರಿಯೆ ಚಿತ್ರಿಕರಣ: ಖಾಸಗಿ ಛಾಯಾಗ್ರಾಹಕರ ಅವಗಣನೆಗೆ ಖಂಡನೆ

0
19
loading...

ಕನ್ನಡಮ್ಮ ಸುದ್ದಿ-ಕಾರವಾರ: ಜಿಲ್ಲೆಯ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನ ಮುಂತಾದ ಪ್ರಕ್ರಿಯೆಯಗಳಲ್ಲಿ ಖಾಸಗಿ ವಿಡಿಯೋಗ್ರಫರ್‌ ಮತ್ತು ಛಾಯಾಗ್ರಹರನ್ನು ನಿರ್ಲಕ್ಷಿಸಲಾಗಿದೆ. ಇದರಿಂದ ವಿಡಿಯೋಗ್ರಫರ್‌ಗಳು ತೊಂದರೆಗೆ ಸಿಲುಕಿದ್ದಾರೆಂದು ಉತ್ತರ ಕನ್ನಡ ಜಿಲ್ಲಾ ಛಾಯಾಚಿತ್ರಗಾಹಕರ ಸಂಘ ಆತಂಕ ವ್ಯಕ್ತಪಡಿಸಿದೆ. ಮತದಾನ ಕ್ರಿಯೆ ಚಿತ್ರೀಕರಣವನ್ನು ಪಿಡಿಓಗಳು ಮತ್ತು ಪಂಚಾಯತ್‌ ಸಿಬ್ಬಂದಿಗಳು ನಿರ್ವಹಿಸುವ ಮಾಹಿತಿ ಬಂದಿದ್ದು, ಇದರಿಂದ ಜಿಲ್ಲೆಯ 900 ವಿಡಿಯೋಫರ್‌ಗಳು ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರ ಬಳಿ ಛಾಯಾಚಿತ್ರಗಾಹಕರ ಸಂಘದ ಪದಾಧಿಕಾರಿಗಳು ಹೇಳಿಕೊಂಡರು.
ಈ ಬಗ್ಗೆ ಲಿಖಿತ ಮನವಿ ನೀಡಿದ ಅವರು ಮತದಾನ ಚಿತ್ರೀಕರಣ ಕಾರ್ಯವನ್ನು ಜಿಲ್ಲೆಯ ಖಾಸಗಿ ವಿಡಿಯೋಗ್ರಫರ್‌ಗಳಿಗೆ ನೀಡುವಂತೆ ಕೋರಿದರು.
ಇದರಿಂದ ಸರ್ಕಾರಕ್ಕೆ ನೂರಾರು ಲಕ್ಷ ಅನಗತ್ಯವಾಗಿ ಖರ್ಚಾಗುತ್ತದೆ. ಅದರ ಬದಲು ಲಕ್ಷಾಂತರ ರೂ.ಬೆಲೆಯ ಕ್ಯಾಮಾರಗಳಿಂದ ನಾವು ಚುನಾವಣಾ ಪ್ರಕ್ರಿಯೆಯನ್ನು ಚಿತ್ರೀಕರಿಸಿ ಕೊಡುತ್ತಿದ್ದ ಸಂಪ್ರದಾಯ ಮೊದಲಿನಿಂದ ಇದೆ. ಇದರಿಂದ ವಿಡಿಯೋಗ್ರಫರ್‌ಗಳಿಗೆ ಉದ್ಯೋಗ ಸಹ ಸಿಗುತ್ತಿತ್ತು. ಬ್ಯಾಂಕ್‌ ಸಾಲ ಮಾಡಿ ತಂದ ಕ್ಯಾಮಾರಗಳ ಮೇಲಿನ ಸಾಲದ ಹೊರೆ ಸಹ ಇಳಿಯುತ್ತಿತ್ತು. ಹಾಗಾಗಿ ಅನಗತ್ಯವಾಗಿ ಹೊಸ ಕ್ಯಾಮರಾ ಖರೀದಿಸಿ, ಪಿಡಿಓಗಳಿಂದ ಮತದಾನ ಚಿತ್ರೀಕರಣ ಮಾಡಿಸದೇ , ನುರಿತ ವಿಡಿಯೋಗ್ರಫರ್‌ ಗಳಿಂದ ಮತದಾನ ಚಿತ್ರೀಕರಣ ಮಾಡಿಸುವಂತೆ ಛಾಯಾಚಿತ್ರಗಾಹಕರ ಸಂಘ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿತು. ಮನವಿಯನ್ನು ಛಾಯಾಚಿತ್ರಗಾಹಕರ ಸಂಘದ ಅಧ್ಯಕ್ಷ ಹರೀಶ್‌ ನೇರಲಕಟ್ಟೆ, ಪ್ರಧಾನ ಕಾರ್ಯದರ್ಶಿ ವಾಲ್ಟರ್‌ ಮಸ್ಕರನೆಸ್‌, ರಾಜೇಂದ್ರ, ಚಂದ್ರಕಾಂತ ಹೊನ್ನಳ್ಳಿ, ಪ್ರವೀಣ್‌ ಎನ್‌ .ನಾಯ್ಕ, ಸೂರಜ್‌ ಜೋಗಳೇಕರ್‌, ವಾಸುದೇವ ಪೂಜಾರಿ ನೇತೃತ್ವದಲ್ಲಿ ನೀಡಲಾಯಿತು.

loading...