ಮತದಾನ ಜಾಗೃತಿಗೆ ವೈವಿದ್ಯಮಯ ಕಾರ್ಯಕ್ರಮ : ಮಂಜುನಾಥ

0
12
loading...

ಗದಗ: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಇರುವ ಸರ್ವರೂ ಮತ ಚಲಾಯಿಸಬೇಕು ಎನ್ನುವ ಉದ್ದೇಶದಿಂದ ಜಿಲ್ಲಾ ಸ್ವೀಪ್‌ ಸಮಿತಿಗಳ ಮೂಲಕ ಮತದಾರ ಜಾಗೃತಿ ಕಾರ್ಯಕ್ರಮ ಎರ್ಪಡಿಸುತ್ತಿದೆ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ ಸಿ.ಇ.ಓ ಮಂಜುನಾಥ ಚವ್ಹಾಣ ಹೇಳಿದರು.
ಜಿ.ಪಂ. ಸಿ.ಇ.ಓ ಕಚೇರಿಯಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮತದಾರ ಪಟ್ಟಿಯಲ್ಲಿರುವ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕು. ಇದಕ್ಕೆ ಹೆಚ್ಚಿನ ಪ್ರೇರಣೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ವಿವಿಧ ಸ್ಥರದ ಮತದಾರರ ಜಾಗೃತಿಗಾಗಿ ಏಪ್ರಿಲ್‌ 7 ರಿಂದ 25ರ ವರಗೆ ಗ್ರಾಮ ಅರಣ್ಯ ಸಮಿತಿ ಸದಸ್ಯರು, ಸಿಬ್ಬಂದಿ ಹಾಗೂ ದಿನಗೂಲಿ ಕಾವಲುಗಾರರಿಗೆ ಮತದಾನ ತರಬೇತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೊಗದೊಂದಿಗೆ ವಿಧ್ಯಾರ್ಥಿಗಳ ಪಲಿತಾಂಶ ನೀಡುವಾಗ ಪಾಲಕರಿಗೆ ವಿನಂತಿ ಪತ್ರ, ಲೈಂಗಿಕ ಕಾರ್ಯಕರ್ತೆಯರು ಹಾಗೂ ಮಂಗಳಮುಖಿಯರಿಂದ ಮತದಾನ ಜಾಗೃತಿ ಜಾಥಾ, ವಿಕಲಚೇತನರಿಂದ ತ್ರಿಚಕ್ರ ವಾಹನಗಳ ಮೂಲಕ ರ್ಯಾಲಿ, ತಾಲೂಕಾ ಮಟ್ಟದಲ್ಲಿ ಮತದಾನ ಮಿತ್ರರ ಸಭೆ, ರಕ್ತದಾನ ಶಿಬಿರ, ಹಾಗೂ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತರಿಗೆ ತರಬೇತಿ, ಟಾಂಗಾ, ಅಟೋ ರಿಕ್ಷಾ ಜಾಥಾ, ಮ್ಯಾರಾಥಾನ, ಬೈಕ್‌ ರ್ಯಾಲಿ ಎರ್ಪಡಿಸಲಾಗಿತ್ತು.
ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಮತದಾರ ಮಿತ್ರರ ಸಭೆ ಆಯೋಜಿಸಲಾಗಿದ್ದು ಏಪ್ರೀಲ್‌ 26 ರಿಂದ ಮೇ 5ರ ವರೆಗೆ ತಾಲೂಕು ಮಟ್ಟದಲ್ಲಿ ವಾಲಿಬಾಲ ಪಂದ್ಯ, ದೋಣಿ ಜಾಥಾ, ಖೋಖೋ ಪಂದ್ಯಾವಳಿಗಳು, ಸಹಕಾರ ದಿನ, ಕ್ಯಾಂಡೆಲ್‌ ಲೈಟ, ರೈತರ ದಿನ, ಹಿರಿಯ ನಾಗರಿಕರಿಗೆ ಮತಗಟ್ಟೆಗೆ ಆಗಮಿಸುವ ಕುರಿತು ತಿಳುವಳಿಕೆ ಕಾರ್ಯಕ್ರಮ, ವಿಧ್ಯಾರ್ಥಿಗಳ ದಿನ, ನೇಕಾರರ ದಿನ, ಮೇ 8 ರಿಂದ 10ರ ವರೆಗೆ ಪ್ರತಿ ಗ್ರಾಮ ಪಂಚಾಯತಗಳಲ್ಲಿ ಚುನಾವಣಾ ಹಬ್ಬದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾ ಸ್ವೀಪ್‌ ಸಮಿತಿ ಮೂಲಕ ಎಲ್ಲ ತಾಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಸ್ವೀಪ ಸಮಿತಿಗಳ ಸಹಕಾರದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಜರುಗಿದ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 7847 ಹೊಸ ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 8 ಲಕ್ಷ 47 ಸಾವಿರ ಮತದಾರರು ಈ ಬಾರಿ ಮತ ಚಲಾಯಿಸುವರು. ಮಾದರಿ £ೕತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಒಟ್ಟು 15,18,05,790 ರೂ.ಗಳನ್ನು ಪರಿಶೀಲನಾ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದ್ದು ಇದರಲ್ಲಿ 15,17,05,790 ರೂಗಳನ್ನು ಮರಳಿಸಿದ್ದು ಬಾಕಿ ಉಳಿದ ಒಂದು ಲಕ್ಷ ರೂ.ಗಳ ದಾಖಲೆ ಪರಿಶೀಲನೆ ಪ್ರಕ್ರಿಯೆ ಜಾರಿಯಲ್ಲಿದೆ.
ಈ ಬಾರಿ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ £ಟ್ಟಿನಲ್ಲಿ ಮಹಿಳಾ ಮತದಾರರು ಹೆಚ್ಚಾಗಿರುವ ಮತಟ್ಟೆಗಳನ್ನು ಗುರುತಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ 3 ಪಿಂಕ್‌ ಮತಗಟ್ಟೆಗಳಂತೆ ಜಿಲ್ಲೆಯಲ್ಲಿ ಒಟ್ಟು 12 ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಈ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಳು ಮಹಿಳೆಯರೇ ಆಗಿರುವದು ವಿಶೇಷವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸ್ವೀಪ್‌ ಸಮಿತಿ ನೋಡೆಲ್‌ ಅಧಿಕಾರಿ ಟಿ.ದಿನೇಶ ಉಪಸ್ಥಿತರಿದ್ದರು.
ಜಿಲ್ಲೆಯ ಪಿಂಕ್‌ ಮತಗಟ್ಟೆಗಳು
ಗದಗ ವಿಧಾನ ಸಭಾ ಕ್ಷೇತ್ರ: ಶರಣಬಸವೇಶ್ವರ ಪೂರ್ವಪ್ರಾಥಮಿಕ ಶಾಲೆ ಕಗಣಿನಹಳ ರೋಡ ಬೆಟಗೇರಿ, ನಂ.9 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆದರ್ಶ ನಗರ ಕಳಸಾಪೂರ ರಸ್ತೆ ಗದಗ, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಕಲ್ಲೂರು.
ಶಿರಹಟ್ಟಿ ವಿಧಾನ ಸಭಾ ಕ್ಷೇತ್ರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಪೂರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎ.ಪಿ.ಎಂ.ಸಿ.ಯಾರ್ಡ ಲಕ್ಷ್ಮೇಶ್ವರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ಯಾಲವಾಡಗಿ.
ನರಗುಂದ ವಿಧಾನ ಸಭಾ ಕ್ಷೇತ್ರ: ಲಯನ್ಸ ಇಂಗ್ಲೀಷ ಮಾಧ್ಯಮ ಶಾಲೆ, ರೂಂ. ನಂ 8 ನರಗುಂದ, ಹೆಣ್ಣು ಮಕ್ಕಳ ಪ್ರೌಢ ಶಾಲೆ ಹೊಸ ಕಟ್ಟಡ ನರಗುಂದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಕಲಕೇರಿ.
ರೋಣ ವಿಧಾನ ಸಭಾ ಕ್ಷೇತ್ರ: ಸರಕಾರಿ ಹೆಣ್ಣು ಮಕ್ಕಳ ಮಾದರಿ ಕೇಂದ್ರ ಶಾಲೆ ಗಜೇಂದ್ರಗಡ, ಎಸ್‌.ಆರ್‌.ಪಾಟೀಲ ಮಾದರಿ ಕೇಂದ್ರ ಶಾಲೆ ರೋಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಚಲಾಪೂರ

loading...