ಮತಪೆಟ್ಟಿಗೆಗಳ ಭದ್ರತಾ ಕೊಠಡಿ, ಮತ ಏಣಿಕೆ ಕೇಂದ್ರಕ್ಕೆ ಭೇಟಿ

0
19
loading...

ಬಾಗಲಕೋಟ: ಜಿಲ್ಲೆಯಲ್ಲಿ ಈ ಬಾರಿ ವ್ಮತಪೆಟ್ಟಿಗೆ ಭದ್ರತಾ ಕೊಠಡಿ ಹಾಗೂ ಚುನಾವಣೆ ಮತ ಏಣಿಕೆ ಕೇಂದ್ರವನ್ನು ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದ್ದು, ಮತ ಏಣಿಕೆ ಕೇಂದ್ರಕ್ಕೆ ಪೊಲೀಸ್‌ ಜಿಲ್ಲಾ ವೀಕ್ಷಕರಾದ ಕೈಸರ್‌ ಖಲೀದ, ಸಾಮಾನ್ಯ ವೀಕ್ಷಕರಾದ ಕೃಷ್ಣಾ ಕುನಾಲ, ಕೆ.ರಾಮಗೋಪಾಲ ಅವರು ಗುರುವಾರ ಭೇಟಿ ನೀಡಿ ಸ್ಥಳ, ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಅವರು ಮಾತನಾಡಿ, ಮತ ಏಣಿಕೆ ಕೇಂದ್ರದ ಸಿದ್ದತೆಗಾಗಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ ಅವರು ಮಾತನಾಡಿ ಮತದಾನ ಕೇಂದ್ರ ಹಾಗೂ ಮತ ಏಣಿಕೆ ಕೇಂದ್ರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಭದ್ರತೆ ಕುರಿತು ವಿವರಿಸಿದರು.
ನಂತರ ಮಾತನಾಡಿದ ಚುನಾವಣಾ ವೀಕ್ಷಕರು, ಮತ ಏಣಿಕೆ ಕೇಂದ್ರಕ್ಕೆ ವಿಶ್ವವಿದ್ಯಾಲಯದಲ್ಲಿ ಸೂಕ್ತವಾದ ಸ್ಥಳಾವಕಾಶ ಹೊಂದಿದ್ದು, ಎಲ್ಲ ತರಹದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಮತ ಏಣಿಕೆಗೆ ಬೇಕಾಗುವ ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಯಾ ಮತಕ್ಷೇತದ ಮತ ಏಣಿಕೆಯ ಪ್ರತಿಯೊಂದು ಕೊಠಡಿಗಳನ್ನು ಪರಿಶೀಲಿಸಿದರು. ಮತ ಏಣಿಕೆಗೆ ಬೇಕಾದ ಎಲ್ಲ ಸೌಲಭ್ಯಗಳ ಕ್ರೀಯಾಯೋಜನೆ ಪಟ್ಟಿಯನ್ನು ಪರಿಶೀಲಿಸಿದರು. ಮಾಧ್ಯಮ ಕೇಂದ್ರ ಕೊಠಡಿಯನ್ನು ಪರಿಶೀಲಿಸಿ, ಮಾಧ್ಯಮದವರಿಗೆ ವರದಿಗಾಗಿ ಬೇಕಾಗುವ ಕಂಪ್ಯೂಟರ, ಇಂಟರನೇಟ್‌, ಟೇಲಿಫೋನ್‌, ಟಿ.ವಿಗಳ ಹಾಗೂ ಕಾಲಕಾಲಕ್ಕೆ ಏಣಿಕೆಯ ಫಲಿತಾಂಶಗಳ ಮಾಹಿತಿ ನೀಡುವ ವ್ಯವಸ್ಥೆಯಾಗಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಎನ್‌.ಐ.ಸಿಯ ಗಿರಿಯಾಚಾರ, ಚುನಾವಣಾ ವೀಕ್ಷಕರ ನೋಡೆಲ್‌ ಅಧಿಕಾರಿಯಾಗಿರುವ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಎಂ.ಸಿ.ಎಂ.ಸಿ ನೋಡಲ್‌ ಅಧಿಕಾರಿಯಾಗಿರುವ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಜಿಲ್ಲಾ ವಾರ್ತಾಧಿಕಾರಿ ಡಾ.ಎಸ್‌.ಎಂ.ಹಿರೇಮಠ, ಪಿಡಬ್ಲೂಡಿ ಕಾರ್ಯನಿರ್ವಾಹಕ ಅಭಿಯಂತರ ರಾಠೋಡ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

loading...