ಮತ ಚಲಾಯಿಸಲು ವಿದ್ಯಾರ್ಥಿನಿಯರಿಂದ ಪ್ರತಿಜ್ಞಾವಿಧಿ ಸ್ವೀಕಾರ

0
16
loading...

ವಿಜಯಪುರ: ಚುನಾವಣೆಯಲ್ಲಿ ನಿರ್ಭೀತರಾಗಿ ಹಾಗೂ ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವುದಾಗಿ ವಿದ್ಯಾರ್ಥಿನಿಯರು ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ನಗರದ ಸರಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿಂದು ಜಿಲ್ಲಾ ಸ್ವೀಪ ಸಮಿತಿಯಿಂದ ಮತದಾನದ ಮಹತ್ವ ಕುರಿತು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ವಿದ್ಯಾರ್ಥಿನಿಯರು ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘಣತೆಯನ್ನು ಎತ್ತಿ ಹಿಡಿಯುವುದಾಗಿ ಹಾಗೂ ತಪ್ಪದೇ ಮತದಾನ ಮಾಡುವುದಾಗಿ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಇದೇ ಪ್ರಥಮ ಬಾರಿಗೆ ಬಳಸಾಗುತ್ತಿರುವ ಮತಖಾತ್ರಿ ಯಂತ್ರದ ಮೂಲಕ ಮತ ಚಲಾಯಿಸಿ ಪ್ರಾತ್ಯಕ್ಷಿಕೆಯನ್ನು ಕುತೂಹಲದಿಂದ ವೀಕ್ಷಿಸಿ ತಪ್ಪದೇ ತಾವು ಮತದಾನ ಮಾಡುವುದಾಗಿ ಹಾಗೂ ಕುಟುಂಬದ ಸದಸ್ಯರನ್ನು ಸಹ ಮತದಾನ ಮಾಡಲು ತಿಳಿವಳಿಕೆ ನೀಡುವುದಾಗಿ ಭರವಸೆ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಮುಖ್ಯ ಯೋಜನಾಧಿಕಾರಿ ಶ್ರೀ ಜಿ.ವ್ಹಿ ದಶವಂತ ಅವರು ಪ್ರತಿಯೊಂದು ಮತ ಅಮೂಲ್ಯವಾಗಿದೆ ಪ್ರತಿಯೊಂದು ಮತ ಸುಭದ್ರ ಸರ್ಕಾರಕ್ಕೆ ನೆರವಾಗಿದೆ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಯುವಶಕ್ತಿಯಾಗಿರುವ ಯುವಕ-ಯುವತಿಯರು ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದರು

ಜಿ.ಪಂ ಯೋಜನಾ ನಿರ್ದೇಶಕ ಸಿ.ಬಿ ಕುಂಬಾರ ಅವರು ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಭೋಧಿಸಿ ಏ 14ರೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಹಾಗೂ ಮೇ 12ರಂದು ತಪ್ಪದೇ ಮತದಾನ ಮಾಡಲು ಕರೆ ನೀಡಿದರು ಕಾರ್ಯಕ್ರಮದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮುರಳಿಧರ, ನೆಹರು ಯುವಕೇಂದ್ರದ ಯುವ ಸಮನ್ವಯಾಧಿಕಾರಿ ಡಿ.ದಯಾನಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಡಿ ನದಾಫ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್.ಎಸ್ ಕಲ್ಲೂರಮಠ ಕೊನೆಯಲ್ಲಿ ವಂದಿಸಿದರು. ಪ್ರೋ. ಎಂ.ಆರ್ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.

loading...