ಮತ ನೀಡಿ ಅಭಿವೃದ್ದಿ ಮಾಡಲು ಆಶಿರ್ವದಿಸಿ : ಬೊಮ್ಮಾಯಿ

0
8
loading...

ಸವಣೂರ : ಶಿಗ್ಗಾಂವ-ಸವಣೂರ ಮತ ಕ್ಷೇತ್ರದ ಜನತೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಹಕರಿಸಿದಂತೆ ಈ ಭಾರಿ ನಡೆಯುವ ಚುನಾವಣೆಯಲ್ಲಿ ಆಶಿರ್ವದಿಸಿ ಆಯ್ಕೆ ಮಾಡಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಮನವಿಯನ್ನು ಮಾಡಿಕೊಂಡರು.

ಪಟ್ಟಣದ ವಿವಿಧ ಸ್ಥಳದಲ್ಲಿ ಮತ ಪ್ರಚಾರವನ್ನು ಕೈಗೊಂಡು ಅವರು ಮಾತನಾಡಿದರು, ತಮ್ಮ ಮನೆಯ ಮಗನಂತೆ ನೋಡಿಕೊಂಡು ತಮ್ಮೆಲ್ಲರ ಆಶೀರ್ವಾದದಿಂದ ಒಂದು ಭಾರಿ ಶಾಸಕನಾಗಿ, ಒಂದು ಭಾರಿ ನೀರಾವರಿ ಸಚಿವನಾಗಿ 2 ಭಾರಿ ಆರಿಸಿ ತಂದ ಹಿನ್ನೆಲೆಯಲ್ಲಿ ತಮ್ಮೆಲ್ಲರ ಸಹಕಾರದಿಂದ ಸುಮಾರು ಹತ್ತು ವರ್ಷಗಳ ಕಾಲ ಕ್ಷೇತ್ರದ ವಿವಿಧ ಅಭಿವೃದ್ದಿ ಕಾರ್ಯ ಹಾಗೂ ರಾಜ್ಯದ ಜನರ ನೀರಿನ ಬವಣೆಯನ್ನು ನೀಗಿಸುವಂತ ಕಾರ್ಯವನ್ನು ಮಾಡಲು ಸಹಕಾರಿಯಾಗಿದೆ. ಅದಕ್ಕೆ ನಾನು ಚಿರರುಣಿಯಾಗಿದ್ದೇನೆ. ಅದೇ ರೀತಿ ಬರುವ ಚುನಾವಣೆಯಲ್ಲಿ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಅತಿ ಹೆಚ್ಚು ಮತಗಳ ಅಂತರದಲ್ಲಿ ಆರಿಸಿ ತಂದು ಇನ್ನೂ ಅನೇಕ ಕೆಲಸ ಕಾರ್ಯಗಳನ್ನು ಮಾಡಲು ಅನವುಮಾಡಿಕೊಡಬೇಕೆಂದು ಮನವಿಯನ್ನು ಮಾಡಿಕೊಂಡರು.
ಬಿಜೆಪಿ ತಾಲೂಕಾಧ್ಯಕ್ಷ ಗಾಳೆಪ್ಪ ದೊಡ್ಡಪೂಜಾರ, ಉಪಾಧ್ಯಕ್ಷ ಗಿರೀಶ ಮಟಿಗಾರ, ಪುರಸಭೆ ಅಧ್ಯಕ್ಷ ಖಲಂದರ ಅಕ್ಕೂರ, ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಸಂಗಮೇಶ ಏರೇಸಿಮಿ, ರಾಮಣ್ಣ ಸಂಕ್ಲೀಪುರ, ಮುರಳಿದರ ಶೆಂಡಗೆ, ಮೋಹನ ಮೆಣಸಿನಕಾಯಿ, ಮಹೇಶ ಸಾಲಿಮಠ, ಸವಣೂರ ಶಕ್ತಿಕೇಂದ್ರದ ಅಧ್ಯಕ್ಷ ಚನ್ನಬಸಯ್ಯ ದುರ್ಗದಮಠ, ತಾಲ್ಲೂಕ ಯುವಮೋರ್ಚಾ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಪ್ರವೀಣ ಚರಂತಿಮಠ, ಮಂಜುನಾಥ ರಸಾಳಕರ, ವಿನಯ ಬುಶೆಟ್ಟಿ, ಸಮೀತ ಕೆಮ್ಮಣಕೇರಿ ಇದ್ದರು.

loading...