ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಿ: ವೈದ್ಯ

0
24
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ರಾಷ್ಟ್ರವನ್ನು ಪ್ರಗತಿಯೆಡೆಗೆ ಕೊಂಡೊಯ್ಯುವ ಶಕ್ತಿ, ಸಾಮಾರ್ಥ್ಯ ಮಹಿಳೆಯರಿಗಿದೆ. ಆ ಕಾರಣಕ್ಕಾಗಿಯೆ ಮಹಿಳೆಯರು ಎಲ್ಲ ರೀತಿಯಲ್ಲಿಯೂ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಮಹಿಳೆಯರು ಆರ್ಥಿಕವಾಗಿ ಸಶಕ್ತರಾದಾಗ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿಯ ನಿರ್ದೇಶಕ ಎನ್‌.ಆರ್‌.ವೈದ್ಯ ಅಭಿಪ್ರಯಿಸಿದರು.
ಅವರು ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿ ವಿಸ಼ರಣಾ ಕೇಂದ್ರ ದಾಂಡೇಲಿ ಹಾಗೂ ಇದರ ಆಶ್ರಯದಲ್ಲಿ ಹಾಗೂ ಎಂ.ಆರ್‌.ಪಿ.ಎಲ್‌ ಕಂಪೆನಿಯ ಸಹಯೋಗದೊಂದಿಗೆ ನಗರದ ಗಾಂಧಿನಗರ ಹಿರೇವ್ಮಠ ಐಟಿಐ ಕಾಲೇಜಿನಲ್ಲಿ ಸ್ಥಳೀಯ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾದ ಒಂದು ತಿಂಗಳ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿಯ ಯೋಜನಾ ಸಂಯೋಜಕ ವಿನಾಯಕ್‌ ಚವ್ಹಾಣ್‌ ಅವರು ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿ ಹಮ್ಮಿಕೊಳ್ಳುತ್ತಿರುವ ವಿವಿಧ ತರಬೇತಿಗಳ ಅಗತ್ಯತೆಯನ್ನು ವಿವರಿಸಿ, ಸಂಸ್ಥೆಯ ಪ್ರಯೋಜನವನ್ನು ಸದುಪಯೋಗಪಡಿಸಿ ಮಹಿಳೆಯರು ಆರ್ಥಿಕ ಅಭಿವೃದ್ಧಿಯೆಡೆಗೆ ಹೆಜ್ಜೆಯಿಡಬೇಕೆಂದರು. ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿಯ ದಾಂಡೇಲಿ ಘಟಕದ ಯೋಜನಾಧಿಕಾರಿ ಶ್ರೀನಿವಾಸ್‌.ಎಸ್‌.ಕೆ ಅವರು ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಡಿದರು. ಸಂಪನ್ಮೂಲ ವ್ಯಕ್ತಿ ಸುಹಾಸಿನಿ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿಯ ಮೇಲ್ವಿಚಾರಕ ನಾರಾಯಣ ವಾಡಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿ ಫರಿದಾ ವಂದಿಸಿದರು.

loading...