ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ದೂರು ಸ್ವೀಕರಿಸಲು ಸಹಾಯವಾಣಿ ಆರಂಭ

0
14
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ವಿಧಾನಸಭಾ ಕ್ಷೇತ್ರದ ಚುನಾವಣಾ ವಿಷಯದ ಬಗ್ಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಕುರಿತು ದೂರುಗಳನ್ನು ಸ್ವೀಕರಿಸಲು ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕುಗಳನ್ನೊಳಗೊಂಡ ವಿಧಾನಸಭಾ ಕ್ಷೇತ್ರ ಚುನಾವಣಾ ಕಾರ್ಯಾಲಯವಾದ ಹಳಿಯಾಳದ ತಹಶೀಲದಾರ ಕಾರ್ಯಾಲಯದಲ್ಲಿ ಹಾಗೂ ಜೋಯಿಡಾದಲ್ಲಿಯೂ ಸಹ ಸಹಾಯವಾಣಿ ಕೇಂದ್ರ (ಕಂಟ್ರೋಲ್ ರೂಮ) ತೆರೆಯಲಾಗಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಬಗ್ಗೆ ದೂರುಗಳಿದ್ದರೆ ಹಳಿಯಾಳ ಹಾಗೂ ದಾಂಡೇಲಿ ತಾಲೂಕಿನ ಕಂಟ್ರೋಲ್ ರೂಮ್ 08284-220134 ಮತ್ತು ಜೋಯಿಡಾ ಕಂಟ್ರೋಲ್ ರೂಮ್ 08283-282723 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಾರ್ವಜನಿಕರು ಚುನಾವಣಾ ವಿಷಯದ ಬಗ್ಗೆ ತಮ್ಮ ದೂರನ್ನು ಸಲ್ಲಿಸಬಹುದಾಗಿದೆ.
ಸ್ತ್ರೀಶಕ್ತಿ ಸಂಘಗಳ ಮೇಲೆ ಕಣ್ಣು :- ಚುನಾವಣೆಯಲ್ಲಿ ರಾಜಕಾರಣಿಗಳು ಸ್ತ್ರೀಶಕ್ತಿ ಸಂಘಗಳ ಮೂಲಕ ಮತದಾರರಿಗೆ ಆಮೀಷ ನೀಡುತ್ತಾರೆ ಎಂಬ ಮಾಹಿತಿ ಇರುವುದರಿಂದ ಸ್ತ್ರೀಶಕ್ತಿ ಸಂಘಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ. ಈ ಬಗ್ಗೆ ಸೆಕ್ಟರ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ವ್ಯವಸ್ಥೆ ಮೂಲಕ ವಿತರಿಸಲಾಗುತ್ತಿರುವ ತೊಗರಿಬೆಳೆ ಹಾಗೂ ಉಪ್ಪಿನ ಪ್ಯಾಕೆಟ್‍ಗಳ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾವಚಿತ್ರ ಕಾಣದ ಹಾಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಪಡಿತರ ವಿತರಣಾ ಕೇಂದ್ರ ನಿರ್ವಾಹಕರಿಗೆ ಸೂಚಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ನಿರ್ದೇಶಿಸಲಾಗಿದೆ.

ಇಂದಿರಾಗಾಂಧಿ ಭಾವಚಿತ್ರ ಮುಚ್ಚಿದರು:- ಹಳಿಯಾಳ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನ್ ಗೊಡೆಯ ಮೇಲೆ ಇದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬೃಹತ್ ಭಾವಚಿತ್ರದ ಭಾಗವನ್ನು ಕಪ್ಪು ಪ್ಲಾಸ್ಟಿಕ್‍ನಿಂದ ಮುಚ್ಚಲಾಗಿದೆ.

loading...