ಮುರುಘಾಮಠಕ್ಕೆ ಅಮಿತ್ ಶಾ ಭೇಟಿ

0
36
ಧಾರವಾಡ: ಶಹರದ ಮುರುಘಾಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದರು ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಹೂವಿನ ಸುರಿಮಳೆ ಗೈಯುವ ಮೂಲಕ ಶಾ ಅವರನ್ನು ಸ್ವಾಗತಿಸಿದರು. ಶ್ರೀ ಮಠಕ್ಕೆ ಆಗಮಿಸಿದ ಶಾ ಅವರು ಶ್ರೀ ಶಿವಯೋಗಿ ಅಪ್ಪಗಳವರ, ಶ್ರೀ ಮೃತ್ಯುಂಜಯ್ ಹಾಗೂ ಶ್ರೀ ಮಹಾಂತ ಅಪ್ಪಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮುರುಘಾಮಠದ ಪೀಠಾಧಿಪತಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಆಶಿರ್ವಾದ ಪಡೆದು ಕೆಲವು ಹೊತ್ತು ಆಪ್ತ ಸಮಾಲೋಚನೆ ನಡೆಸಿದರು.
ಅಮಿತ್ ಶಾ ಅವರಿಗೆ ಶ್ರೀಗಳು ಶಾಲು ಹೊದಿಸಿ ಸನ್ಮಾನಿಸಿ, ಬಸವಣ್ಣನವರ ಭಾವಚಿತ್ರ ಕೊಡುವ ಮೂಲಕ ಆಶೀರ್ವಾದಿಸಿ, ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂಬ ಸಮಾಜದ ಮನವಿಯನ್ನು ಸಂಸತ್‍ನಲ್ಲಿ ಅಂಗೀಕರಿಸಲು ಸಹಕರಿಸುವಂತೆ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಲಿಂಗಾಯತ ಸಮಾಜದ ಹಿತ ಕಾಪಾಡುವಂತೆ ಮನವಿ ಸಲ್ಲಿಸಿದರು ಜೊತೆಗೆ ಡಾ.ಎನ್.ಜಿ.ಮಹಾದೇವಪ್ಪನವರು ರಚಿಸಿದ ಲಿಂಗಾಯತಾಸ್ ಆರ್ ನಾಟ್ ಹಿಂದೂಸ್ ಎಂಬ ಗ್ರಂಥವನ್ನು ಶಾ ಅವರಿಗೆ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಲ್ಹಾದ್ ಜೋಶಿ, ಅಮೃತ ದೇಸಾಯಿ, ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ, ಈರೇಶ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

loading...