ಮುಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕಾದದ್ದು ಪ್ರನಿನಿಧಿಗಳ ಕರ್ತವ್ಯ

0
10
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ನೀಲಕೋಡ ದಟ್ಟ ಕಾನನದಿಂದ ಆವೃತ್ತವಾದ ಕುಗ್ರಾಮ ಯಲವಳ್ಳಿಯಿಂದ ನೀಲಕೋಡಿಗೆ ಸಂಪರ್ಕ ಕಲ್ಪಿಸುವ 2 ಕಿಮಿ ರಸ್ತೆ ಇಚ್ಛಾಶಕ್ತಿಯ ಕೊರತೆಯಿಂದಾಗಿ 10 ವರ್ಷಗಳ ಹಿಂದೆ ಈ ರಸ್ತೆಗೆ ಹಾಕಿದ ಡಾಂಬರ ಕಿತ್ತು ಹೊಗಿದ್ದು, ವಾಹನ ಸಂಚರಿಸದ ಶೊಚನೀಯ ಸ್ಥಿತಿ ನಿರ್ಮಾಣವಾಗಿದೆ.
ಜನ ಪ್ರನಿನಿಧಿಗಳಾಗಿ ಆಯ್ಕೆಯಾದವರು ಜನರ ಕನಿಷ್ಟ ಮುಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕಾದದ್ದು ಅವರ ಆದ್ಯ ಕರ್ತವ್ಯ ಆದರೆ ಚುನಾವಣೆಯಲ್ಲಿ ಆಯ್ಕೆಯಾದ ಜನ ಪ್ರತಿನಿಧಿಗಳು ಅಧಿಕಾರ ಕೈಗೆ ಸಿಕ್ಕಕೂಡಲೇ ಕೊಟ್ಟ ಮಾತನ್ನೆ ಹೇಗೆ ಮರೆತು ಬಿಡುತ್ತಾರೆ ಎಂಬುದಕ್ಕೆ ನೀಲಕೋಡದ ಕುಗ್ರಾಮದ ರಸ್ತೆ ಗಳೆ ಜೀವಂತ ಸಾಕ್ಷಿಗಳಾಗಿವೆ.

ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ನೀಲಕೋಡ ದಟ್ಟ ಕಾನನದಿಂದ ಆವೃತ್ತವಾದ ಕುಗ್ರಾಮ ಯಲವಳ್ಳಿಯಿಂದ ನೀಲಕೋಡಿಗೆ ಸಂಪರ್ಕ ಕಲ್ಪಿಸುವ 2 ಕಿಮಿ ರಸ್ತೆ ಇಲ್ಲಿದೆ. ಈ ರಸ್ತೆ ಜಿಲ್ಲಾ ಪಂಚಾಯತ ವಿಭಾಗಕ್ಕೆ ಸೇರೆದ್ದಾಗಿದೆ ಎನ್ನಲಾಗಿದೆ. ಸದರ ರಸ್ತೆ ನಿರ್ಮಿಸಿಕೊಡುವಂತೆ ಈ ಭಾಗದ ಜನರು ಜನ ಪ್ರತಿನಿಧಿಗಳಲ್ಲಿ ದುಂಬಾಲು ಬಿದ್ದರು ಇಚ್ಛಾಶಕ್ತಿಯ ಕೊರತೆಯಿಂದಾಗಿ 10 ವರ್ಷಗಳ ಹಿಂದೆ ಈ ರಸ್ತೆಗೆ ಹಾಕಿದ ಡಾಂಬರ ಕಿತ್ತು ಹೊಗಿದ್ದು, ವಾಹನ ಸಂಚರಿಸದ ಶೊಚನೀಯ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ಈ ಕುಗ್ರಾಮಗೆ ಸರಕಾರಿ ಬಸ್‍ಗಳ ಸೌಲಭ್ಯವಿದೆ. ದಿನಕ್ಕೆ 3 ಬಾರಿ ಈ ಭಾಗದಲ್ಲಿ ಬಸ್ ಸಂಚರಿಸುತ್ತದೆ. ಅದು ಅಲ್ಲದೆ 3 ದಿನ ಪ್ರಗತಿ ವಿಧ್ಯಾಲಯದ ವಿಧ್ಯಾರ್ಥಿಗಳನ್ನು ಕರೆಲರಲು ಶಾಲಾ ವಾಹನ ಸಹ ಸಂಚರಿಸುತ್ತದೆ. ಆದರೆ 2 ಕಿಮಿ ರಸ್ತೆಯಲ್ಲಿ ವಾಹನ ಸಂಚರಿಸಲಾಗದೆ ಸ್ಥಿತಿ ಉಲ್ಪಣಿಸಿದರಿಂದ ಜನ ಹಾಗೂ ವಿಧ್ಯಾರ್ಥಿಗಳು 2 ಕಿಮಿ ನಡೆದುಕೊಂಡೇ ಬರುವ ಸ್ಥತಿ ಉಂಟಾಗಿದೆ. ನಂತರ ಗ್ರಾಪಂ ದವರು ರಸ್ತೆ ನಿರ್ಮಿಸಿಕೊಡಲು ಹಣವಿಲ್ಲವೆಂದು ಕಡತವನ್ನು ವಾಪಸ ಕಳುಹಿಸುತತ್ತಾರೆಂದು ದೂರುತ್ತಾರೆ. ಮತದಾರರು ತಮ್ಮ ಬಾಗದ ಸಮಸ್ಯೆಯನ್ನು ಜನ ಪ್ರತಿನಿಧಿಗಳಲ್ಲಿ ಅರುಹಿದಾಗ ಸಮಸ್ಯೆಯನ್ನು ಕಣ್ಣಾರೆ ಕಂಡು ತಕ್ಷಣ ಪರಿಹರಿಸಬೇಕಾದ ಜವಾಬ್ದಾರಿ ಜನ ಪ್ರತಿನಿಧಿಗಳದ್ದಾಗಿರುತ್ತದೆ. ಆದರೆ ಪ್ರಾಮಾಣಿಕ ಸಾಮಾಜಿಕ ಕಳಕಳಿ ಇಲ್ಲದ ಜನ ಪ್ರತಿನಿಧಿಗಳು ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಒಬ್ಬರಿಂದ ಮತ್ತೊಬ್ಬರಿಗೆ ಸೂಚಿಸುವುದು ಹಾಗೂ ಕೊನೆಯಲ್ಲಿ ಹಣ ವಿಲ್ಲವೆಂದು ವಾಪಾಸ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳುವ ಮತದಾರರು ಇವರು ನಮ್ಮೂರಿಗೆ ಯಾವ ಮುಖ ಹೊತ್ತು ಮತ ಕೆಳುತ್ತಾರೆ ಎಂಬ ನೀರಿಕ್ಷೆಂiÀiಲ್ಲಿದ್ದಾರೆ.

loading...