ಮೂಲಭೂತ ಸೌಲಭ್ಯವನ್ನು ಒದಗಿಸಿಕೊಡುವಂತೆ ಮನವಿ

0
10
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪಟ್ಟಣದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಕಣ್ಣಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಜಮಗುಳಿ ಮಜರೆಗೆ ಮೂಲಭೂತ ಸೌಲಭ್ಯವನ್ನು ಒದಗಿಸಿ ಕೊಡುವಲ್ಲಿ ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಪಟ್ಟಣದಿಂದ ಸಮೀಪವಿದ್ದೂ ಗ್ರಾಪಂದಿಂದ ಹಿಡಿದು ಶಾಸಕ ಸಂಸದರವರೆಗೂ ಮನವಿ ಮಾಡಿಕೊಂಡರೂ ಯಾವದೇ ಪ್ರಯೋಜನವಾಗಿಲ್ಲ, ಗ್ರಾಮದ ಅಭಿವೃದ್ಧಿ ನಿರ್ಲಕ್ಷಿತವಾಗಿರುವ ಬಗ್ಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸಭಾಭವನ, ತ್ರೀಫೇಸ್ ವಿದ್ಯುತ್ ಒದಗಿಸಿ ಕೊಡದೇ ಇರುವುದರಿಂದ ಬೇಸತ್ತು ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಮಜರೆಯಿಂದ ಮತಗಟ್ಟೆಗೆ ಹೋಗದೇ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಮತ ಯಾಚಿಸಲು ಬರುವ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂದು ಊರ ಹೊರಗೆ ನಾಮಫಲಕ ಅಳವಡಿಸಲು ಮುಂದಾಗಿದ್ದಾರೆ.

ಗ್ರಾಮಸ್ಥರಾದ ವಿಶ್ವನಾಥ ಗಾಂವ್ಕಾರ ಜಮಗುಳಿ, ಗಣಪತಿ ಗಾಂವ್ಕಾರ, ಸಂತೋಷ ಮರಾಠಿ, ನರಸಿಂಹ ಗಾಂವ್ಕಾರ, ಸೀತಾರಾಮ ಗಾಂವ್ಕಾರ, ವಿಘ್ನೇಶ್ವರ ಗಾಂವ್ಕಾರ, ಸುರೇಶ ಮರಾಠಿ, ಮಹಾಬಲೇಶ್ವರ ಮರಾಠಿ, ಉಮೇಶ ಮರಾಠಿ, ಅನಂತ ಮರಾಠಿ, ಈಶ್ವರ ಮರಾಠಿ, ಬಾಳಾ ಗಾವಡೆ, ಲಕ್ಷ್ಮಣ ಗಾವಡೆ, ಪರ್ಸ್ಯಾ ಮರಾಠಿ, ಡುಮಿಂಗ್ ಫರ್ನಾಂಡೀಸ್, ಬಸ್ತ್ಯಾಂವ ಫರ್ನಾಂಡೀಸ್, ಜಗನ್ನಾಥ ರಾಯ್ಕರ್, ವಿನೋದ ರಾಯ್ಕರ್, ಮಾಲಾ ನಾಯ್ಕರ್, ಉಮೇಶ ಗುಂಜಿಕರ್, ವಿಠೋಬಾ ಗಾವಡೆ, ಕವಿತಾ ಮರಾಠಿ ಮುಂತಾದವರು ಈ ಸಂದರ್ಭದಲ್ಲಿದ್ದು ಮಾಹಿತಿ ನೀಡಿದರು.

loading...