ಮೋದಿ ಹೋದ ಕಡೆಗಳಲ್ಲಿ ಸುಳ್ಳು ಹೇಳಿತ್ತಿದ್ದಾರೆ: ರಾಹುಲ್‌

0
13
loading...

ಕುಮಟಾ : ಕಾಂಗ್ರೆಸ್‌ ಪಕ್ಷದ ವತಿಯಿಂದ ರೋಡ್‌ ಶೋ ಇಲ್ಲಿಯ ಮಣಕಿ ಮೈದಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಬಸ್ಸಿನಲ್ಲಿ ಆಗಮಿಸಿದ ಕಾಂಗ್ರಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಬ್ಲಾಕ್‌ ಕಾಂಗ್ರಸ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಳಿದರು. ಅಲ್ಲಿ ಒಂದು ಪಕ್ಕದಲ್ಲಿ ಸೇರಿದ ಜನರ ಕಡೆ ನಮಸ್ಕಾರ ಎನ್ನುತ್ತ ಕೈಬೀಸಿ, ಕೈಮುಗಿಯುತ್ತ 200 ಮೀಟರಗಳಷ್ಟು ನಡೆಯುತ್ತಾ ಸಾಗಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ವಿದೇಶದಿಂದ ಕಪ್ಪುಹಣ ತಂದು ಜನಧನ ಯೋಜನೆಯ ಬ್ಯಾಂಕ್‌ ಖಾತೆಗೆ 15 ಲಕ್ಷ ಜಮಾ ಮಾಡುತ್ತೇವೆ ಎಂದ ಮೋದಿ ಹೇಳಿದ್ದು, ಇನ್ನೂ ಯಾರೊಬ್ಬರ ಖಾತೆಗೂ ಜಮಾ ಆಗಿಲ್ಲ. ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಠಾಚಾರ ನಿರ್ಮೂಲನೆಯ ಕುರಿತಾಗಿ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಬಿಜೆಪಿ ಜನತೆಗೆ ನುಡಿದಂತೆ ನಡೆಯದೇ ಮೋಸಮಾಡಿದ ಸುಳ್ಳಿನ ಸರ್ಕಾರವಾಗಿದೆ. ಪ್ರದಾನಿ ಮೋದಿ ಹೋದ ಕಡೆಗಳಲ್ಲಿ ಸುಳ್ಳು ಹೇಳಿತ್ತಿದ್ದಾರೆ. ನೋಟ್‌ ಬ್ಯಾನ್‌ ಮತ್ತು ಜಿಎಸ್‌.ಟಿ. ಜಾರಿಮಾಡಿದ್ದರಿಂದ ಯಾವ ವಿಕಾಸವೂ ಆಗಲಿಲ್ಲ. ಇದರಿಂದಾಗಿ ಜನರಿಗೆ ತೊಂದರೆಯೇ ಆಗಿದೆ.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇಂದರಾ ಕ್ಯಾಂಟಿನ್‌, ರೈತರ ಸಾಲ ಮನ್ನಾ, ಅನೇಕ ಭಾಗ್ಯಗಳಂತಹ ಅನೇಕ ಜನಪರ ಕಾರ್ಯಗಳನ್ನು ಮಾಡಿದೆ. ಬಡವರಿಗಾಗಿ ಶ್ರಮಿಸುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ಆರಿಸಿ ತನ್ನಿರಿ ಎಂದು ಮತಯಾಚಿಸಿದರು.
ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ಈ ಹಿಂದೆ ರಾಜ್ಯದ ಜನತೆ ಕಾಂಗ್ರಸ್‌ ಗೆ ಆಶೀರ್ವಾದ ಮಾಡಿ ನಿರೀಕ್ಷಿಸಿದಂತೆ ಆಡಳಿತ ನಡೆಸಿದೆ. ಬಡವರಿಗೆ ಅನ್ನಭಾಗ್ಯವನ್ನು ಯಾವುದೇ ಸರ್ಕಾರ ಮಾಡಿರಲಿಲ್ಲ ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಮಾಡಿದೆ. ಬಿಜೆಪಿಯಲ್ಲಿ ಜೈಲಿಗೆ ಹೋದವರು ಹಾಗೂ ಲೂಟಿಕೋರರು ಒಂದಾಗಿದ್ದಾರೆ. ಇಂತವರಿಗೆ ಮತ್ತೆ ಅಧಿಕಾರ ನೀಡುತ್ತೀರಾ? ಎಂದು ಪ್ರಶ್ನಿಸಿದರು. ಇನ್ನು ಜೆಡಿಎಸ್‌ ನವರು ಅವಕಾಶವಾದಿಗಳು. ಬಿಜೆಪಿ ಹಾಗೂ ಜೆಡಿಎಸ್‌ ಒಳಒಪ್ಪಂದ ಮಾಡಿಕೊಂಡಿವೆ. ಇಬ್ಬರೂ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಿದೆ. ಆದಕಾರಣ ನಮ್ಮನ್ನು ಆಶೀರ್ವದಿಸಿ ಎಂದು ಕೋರಿದರು.
ಪ್ರಮುಖರಾದ ಜಿ ಪರಮೇಶ್ವರ, ವೇಣುಗೋಪಾಲ, ಬಿ ಕೆ ಹರಿಪ್ರಸಾದ, ಡಿ ಕೆ ಶಿವಕುಮಾರ, ಆರ್‌ ವಿ ದೇಶಪಾಂಡೆ, ಕೆ ಪಿ ಸಿ ಸಿ ಪ್ರದಾನ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ, ಶಾರದಾ ಮೋಹನ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ ಎಲ್‌ ನಾಯ್ಕ, ಜಿಪಂ ಸದಸ್ಯ ರತ್ನಾಕರ ನಾಯ್ಕ, ಪುರಸಭೆ ಅಧ್ಯಕ್ಷ ಮಧುಸೂದನ ಶೇಟ್‌, ರವಿಕುಮಾರ ಶೆಟ್ಟಿ ಹಾಗೂ ಮೊದಲಾದವರದು ಉಪಸ್ಥಿತರಿದ್ದರು.ಮತ್ತಿತರರು ಇದ್ದರು.

loading...