ಯರಗಟ್ಟಿ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

0
323
loading...

ಯರಗಟ್ಟಿ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಕನ್ನಡಮ್ಮ ಸುದ್ದಿ

ಹುಕ್ಕೇರಿ 25:ರಾಜ್ಯ ಚುನಾವಣಾಗೆ ಕೆಲವೆ ದಿನಗಳು ಬಾಕಿಯಿರುವ ಸಮಯದಲ್ಲಿ ರಾಜಕೀಯ ಮುಖಂಡರು ಪಕ್ಷದಿಂದ ಪಕ್ಷಕ್ಕೆ ಜಂಪಿಂಗ್ ಕಾರ್ಯ ಹುಕ್ಕೇರಿ ಕ್ಷೇತ್ರದಲ್ಲಿ ಆರಂಭವಾಗಿದೆ.

ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಹುಕ್ಕೇರಿ ಮತ ಕ್ಷೇತ್ರದಲ್ಲಿ ಯರಗಟ್ಟಿ ಗ್ರಾಮದ ಕಾಂಗ್ರೆಸ್ ಮುಖಂಡರು ಶಾಸಕ ಉಮೇಶ ಕತ್ತಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಮಂಗಳವಾರ ರಮೇಶ ಕತ್ತಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದಾಗಿ ಯರಗಟ್ಟಿ ಗ್ರಾಮದ ಮುಖಂಡರು ತಿಳಿಸಿದರು .

ಮಾಜಿ ಸಂಸದ ರಮೇಶ ಕತ್ತಿ ಪಕ್ಷದ ಶಾಲು ತೊಡೆಸಿ ಬಿಜೆಪಿಗೆ ಬರಮಾಡಿಕೊಂಡರು .ಗ್ರಾಮದ ವಿಜಯ ಚೌಗಲಾ,ಗುಳಪ್ಪಾ ಚೌಗಲಾ ಸೇರಿದಂತೆ 25 ಜನ ಕಾರ್ಯಕರ್ತರು ಬಿಜೆಪಿಗೆ ಸೇರಿದು .ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

loading...