ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಯಲಿ: ಐ.ಎ. ಪಾಟೀಲ

0
10
loading...

ಶೇಡಬಾಳ 01: ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವದರಿಂದ ದೇಶ ಭಕ್ತಿ, ದೇಶ ಪ್ರೇಮ, ಸೇವಾ ಮನೋಭಾವನೆ ವೃದ್ಧಿಸುವದರ ಜತೆಗೆ ಶಿಸ್ತುಬದ್ಧ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ಶಿರಗುಪ್ಪಿಯ ಆಯ್.ಎ.ಪಾಟೀಲ ಹೇಳಿದರು.

ಶಿರಗುಪ್ಪಿಯ ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯವು ದತ್ತು ಗ್ರಾಮ ಮಾಂಜರಿವಾಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಎನ್‍ಎಸ್‍ಎಸ್ 7 ದಿನಗಳ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಕೇವಲ ಪ್ರಮಾಣ ಪತ್ರಕ್ಕಾಗಿ ಸೇವೆ ಮಾಡದೇ ನಿಸ್ವಾರ್ಥದಿಂದ ಸೇವೆ ಮಾಡುವಂತೆ ಕರೆ ನೀಡಿದರು.
ಕೆಎಲ್‍ಇ ಸಂಸ್ಥೆಯ ಶಿರಗುಪ್ಪಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎ.ಎ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು. 7 ದಿನಗಳ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಹಾಗೂ ಸರ್ಕಾರಿ, ಪ್ರಾಥಮಿಕ ಶಾಲೆಗಳ ಆವರಣದಲ್ಲಿ ವೃಕ್ಷಾರೋಪಣ, ಹನಿ ನೀರಾವರಿ ಸೌಲಭ್ಯ ಮಾಡಿಕೊಡುವದರ ಜತೆಗೆ ಗ್ರಾಮದಲ್ಲಿ ಸಾಕ್ಷರತೆ, ಸ್ವಚ್ಛತೆ, ಶೌಚಾಲಯ, ನೀರಿನ ಸದ್ಬಳಕೆ ಮೊದಲಾದ ವಿಷಯಗಳ ಕುರಿತು ಜಾಥಾಗಳ ಮೂಲಕ ಜನಜಾಗೃತಿಯನ್ನುಂಟು ಮಾಡಿದರು.ಡಿ.ಎಸ್.ಪಿರಾಜೆ, ಉದ್ಭವ ದಾಬೋಳೆ, ತಾತೋಬಾ ವರೂಟೆ, ಆರ್.ಎಸ್.ಮಿರ್ಜೆ, ಎಂ.ಬಿ.ಪಾಟೀಲ ಸೇರಿದಂತೆ ಅನೇಕರು ಇದ್ದರು.

loading...