ಯು ಟರ್ನ್ ಹೋಡೆದ ಜಿ ಆರ್ ಪಾಟೀಲ

0
18
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ತನಗೆ ಭಾಜಪ ಟಿಕೇಟ್ ನೀಡದೇ ವಂಚಿಸಿದೆ ತನ್ಮೂಲಕ ಮರಾಠರಿಗೆ ಅನ್ಯಾಯವಾಗಿದೆ ಎಂದು ಗುಡುಗಿ ತಾನು ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದ ಜಿ ಆರ್ ಪಾಟೀಲ ಯು ಟರ್ನ ಹೋಡಿದಿದ್ದಾರೆ.
ಟಿಕೇಟ್ ನ ಪ್ರಬಲ ಆಕಾಂಕ್ಷಿಯಾಗಿದ್ದ ಜಿ ಆರ್ ಪಾಟೀಲ ರವರು ತಮಗೆ ಟಿಕೇಟ್ ದೊರೆಯದೆ ಸುನೀಲ ಹೆಗಡೆಯವರಿಗೆ ಅವಕಾಶ ದೊರೆತಿರುವುದನ್ನು ಖಂಡಿಸಿ ಏ 17 ರಂದು ತಮ್ಮ ಬೆಂಬಲಿಗರ ಜೊತೆಗೂಡಿ ಮರಾಠಾ ಭವನದಲ್ಲಿ ಸಭೆ ನಡೆಸಿ ಬಂಡಾಯದ ಬಾವುಟ ಹಾರಿಸಿ ಏ 23 ಅಥವಾ ಮರುದಿನ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದರು. ಅಂದಿನ ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಏ 21 ಶನಿವಾರ ತಮ್ಮ ಮಾರ್ಗದರ್ಶಕರಾದ ರಾಜು ಧೂಳಿ ಅವರ ಪತ್ರಿಕಾಗೋಷ್ಠಿಗೆ ಹಾಜರಾಗಿ ತಮ್ಮ ಯು ಟರ್ನ್ ನಿರ್ಧಾರವನ್ನು ಧೂಳಿ ಅವರ ಮೂಲಕ ಪತ್ರಿಕೆಯವರಿಗೆ ತಿಳಿಸಿದ್ದಾರೆ.

ಪಕ್ಷದ ಮುಖಂಡರಾದ ಈಶ್ವರಪ್ಪ ಮಾತ್ರವಲ್ಲದೆ ವಿಶ್ವೇಶ್ವರ ಹೆಗಡೆ ಕಾಗೇರಿ ಇವರುಗಳು ದೂರವಾಣಿ ಮೂಲಕ ಮಾತನಾಡಿ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ಹೇಳಿದ್ದರಿಂದ ಜಿ ಆರ್ ಪಾಟೀಲರು ತಮ್ಮ ಬಂಡಾಯ ನಿರ್ಧಾರ ಹಿಂಪಡೆದು ಪಕ್ಷ ನೀಡಿದ ಜವಾಬ್ದಾರಿಯಂತೆ ಕಾರ್ಯ ಮಾಡುವುದಾಗಿ ತಿಳಿಸಿದ್ಧಾರೆ ಎಂದು ರಾಜು ಧೂಳಿ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದ ಬಹುಸಂಖ್ಯಾತ ಮರಾಠಾ ಸಮುದಾಯದವರಾದ ಜಿ ಆರ್ ಪಾಟೀಲ ತಮ್ಮ ಜಾತಿಗೆ ರಾಜಕೀಯ ಪ್ರಾತಿನಿತ್ಯ ನೀಡಲು ತಮಗೆ ಟಿಕೇಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಟಿಕೇಟ್ ದೊರೆಯದ ಹಿನ್ನಲೆಯಲ್ಲಿ ಪಕ್ಷದ ವಿರುಧ್ಧ ಬಂಡಾಯವೆದಿದ್ದ ಅವರು ತಮ್ಮ ಬಂಡಾಯದ ನಿರ್ಧಾರವನ್ನು ಹಿಂಪಡೆದಿದ್ದಾರೆ.

loading...