ಯೋಗ್ಯ ಬೆಲೆ ಸಿಗದೆ ರೈತರ ಬೆಳೆಹಾನಿ : ಪರಿಹಾರಕ್ಕೆ ಆಗ್ರಹ

0
33
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ತಾಲೂಕಿನ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ. ನಷ್ಟವನ್ನು ಅನುಭವಿಸಿದ್ದು ರೈತರಿಗೆ ಪರಿಹಾರ ನೀಡಬೆಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅವರು ಬುಧವಾರಂದು ಡಿಸಿ ಕಚೇರಿಗೆ ಆಗಮಿಸಿ ರೈತರ ಬೆಳೆಗೆ ಯೋಗ್ಯ ಬೆಲೆ ಸಿಗದೆ ನಷ್ಟವನ್ನು ಅನುಭವಿಸಿ ಸಂಕಷ್ಠದಲ್ಲಿ ಇದ್ದಾರೆ ಆದ್ದರಿಂದ ಕೂಡಲೆ ಸೂಕ್ತ ಪರಿಹಾರ ನೀಡಬೇಕೆಂದರು. ಸು.3 ರಿಂದ ನಾಲ್ಕು ತಿಂಗಳಿದಂದ ಕ್ಯಾಬೀಜ್ ಹಾಗೂ ಇತರ ತರಕಾರಿಗಳ ದರ ಸಂಪೂರ್ಣ ಕುಸಿದಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಪರಿಹಾರಕ್ಕಾಗಿ ಈಗಾಗಲೇ ಅಧಿಕಾರಿಗಳಿಗೆ ಮೂರರಿಂದ ನಾಲ್ಕು ಬಾರಿ ಮನವಿ ನೀಡಿದರು ಸರ್ಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ.ಸು.10 ಸಾವಿರ ಎಕರೆಯೊಳಗಿನ ತರಕಾರಿ ಬೆಳೆಗಳು ದರ ಸಿಗದೆ ಹೊಲದಲ್ಲಿಯೇ ನಾಶವಾಗಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.
ರೈತರು ಆತ್ಮಹತ್ಯೆ ಮಾಡಿಕೊಂಡರೆ ರಾಜಕಾರಣಿಗಳು ರೈತರ ಮನೆಗೆ ಭೇಟಿ ನೀಡಿ ಪ್ರಚಾರಕ್ಕೆ ಗಿಟ್ಟಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಆತ್ನಹತ್ಯೆಗಳು ಹೆಚ್ಚಾಗುತ್ತಿವೆ ಹೋರತು ಕಡಿಮೆಯಾಗುತ್ತಿಲ್ಲ. ಆದ್ದರಿಂದ ರೈತರ ಆತ್ನಹತ್ಯೆ ಮಾಡಿಕೊಳ್ಳವ ಮೊದಲ ನಷ್ಟಕ್ಕೆ ಪರಿಹಾರ ನೀಡಿ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಅಪ್ಪಾಸಾಬ ದೇಸಾಯಿ,ಸುಭಾಷ ದಾಯಗೊಂಡೆ, ಯಲ್ಲಪ್ಪಾ ದುಡುಂ, ಗಜು ರಾಜಾಯಿ, ರಾಮನಗೌಡ ಪಾಟೀಲ, ಟೋಪಣ್ಣಾ ಬಸರಿಕಟ್ಟಿ ಸೇರಿದಂತೆ ಇತರರ ಇದ್ದರು.

loading...