ರಸ್ತೆ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಒತ್ತಾಯ

0
27
loading...

ವಿಜಯಪುರ : ಮಹಾರಾಷ್ಟ್ರದ ಖಂಡಾಳ ಘಾಟ್‍ದಲ್ಲಿ ಇತ್ತೀಚಿಗೆ ಜರುಗಿದ ಭೀಕರ ರಸ್ತೆ ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಅವಲಂಬಿತ ಕುಟುಂಬ ಸದಸ್ಯರಿಗೆ ಸೂಕ್ತ ಪರಿಹಾರ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ ವಾದ) ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಸಂಚಾಲಕ ಮಹಾಂತೇಶ ರಾಠೋಡ ಮಾತನಾಡಿ, ಇತ್ತೀಚಿಗೆ ನಡೆದ ಭೀಕರ ರಸ್ತೆ ದುರಂತ ಅತ್ಯಂತ ಘೋರವಾಗಿದೆ, ಅಪಘಾತದಲ್ಲಿ 18 ಕ್ಕೂ ಹೆಚ್ಚು ಜನರು ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯ ಹಡಗಲಿ ತಾಂಡಾ, ರಾಜನಾಳ ತಾಂಡಾ, ಮಧಭಾವಿ ತಾಂಡಾ, ಕೂಡಗಿ ತಾಂಡಾ, ಹಡಲಸಂಘ ತಾಂಡಾ, ಹಿಟ್ನಳ್ಳಿ ತಾಂಡಾ ಮುಂತಾದ ತಾಂಡಾದ 18 ಕ್ಕೂ ಹೆಚ್ಚು ನಿವಾಸಿಗಳು ದಾರುಣ ಸಾವನಪ್ಪಿದ್ದರು. ತುತ್ತೀನ ಚೀಲ ತುಂಬಿಸಿಕೊಳ್ಳಲು ಹೋಗಿದ್ದ ಈ ಎಲ್ಲ ಕುಟುಂಬ ಸದಸ್ಯರ ಅವಲಂಬಿತರು ಈಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಸಾವನ್ನಿಪ್ಪದ ಪ್ರತಿಯೊಬ್ಬರ ಮನೆಯಲ್ಲಿಯೂ ಆರ್ಥಿಕ ತೊಂದರೆ ಇದೆ. ತೀವ್ರ ಬಡತನ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಮಾನವೀಯ ದೃಷ್ಟಿಯಿಂದ ಪ್ರತಿಯೊಂದು ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಮಂಜೂರು ಮಾಡಿ ಆ ಕುಟುಂಬವನ್ನು ಕಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಮಹಾಂತೇಶ ರಾಠೋಡ, ನಗರ ಘಟಕ ಸಂಚಾಲಕ ಶಂಕರ ಚಲವಾದಿ, ಲಕ್ಷ್ಮಣ ದೇವಪೂರ, ಬಸವರಾಜ ಲಗಳಿ, ಯಲ್ಲಪ್ಪ ಕಾಂಬಳೆ, ಮಿಥುನ್ ಪವಾರ, ಅಮೂಲ ಪವಾರ, ರಮೇಶ ಪವಾರ, ಶ್ರೀಮಂತ ಪವಾರ, ಇಲಿಯಾಸ್ ಪವಾರ, ಗುಲಾಬ ಜಾಧವ, ಮಹಾಂತೇಶ ಚವ್ಹಾಣ, ಕಿಶನ್ ಪವಾರ, ರಮೇಶ ಹೂಗಾರ ಉಪಸ್ಥಿತರಿದ್ದರು.

loading...