ರಾಜಕೀಯ ಪಕ್ಷಗಳು ಸಭೆಗಳಿಗೆ 48 ಗಂಟೆಗಳ ಮುನ್ನಾ ಅನುಮತಿ ಪಡೆದುಕೊಳ್ಳಬೇಕು

0
12
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 215 ಮತಗಟ್ಟೆಗಳಿದ್ದು, 151 ಬೂತ್ ಕುಮಟಾ ತಾಲೂಕಿನಲ್ಲಿ ಹಾಗೂ ಹೊನ್ನಾವರ ತಾಲೂಕಿನಲ್ಲಿ 64 ಬೂತ್ ಗಳಿದ್ದು, ಒಟ್ಟೂ 20 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಕಛೇರಿಯ ಗ್ರೇಡ್ 2 ತಹಶೀಲ್ದಾರ ಬಿ ಎಚ್ ಗುನಗಾ ತಿಳಿಸಿದರು.
ಅವರು ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ರಾಜಕೀಯ ಪಕ್ಷಗಳು ಸಭೆಗಳಿಗೆ, ಕಾರ್ಯಕ್ರಮಗಳಿಗೆ ಅನುಮತಿಯನ್ನು 48 ಗಂಟೆಗಳ ಮೊದಲು ಪಡೆದುಕೊಳ್ಳಬೇಕು.

ಈವರೆಗೆ ಎರಡು ಪ್ರಕರಣಗಳು ದಾಖಲಿಸಲಾಗಿದ್ದು, ಹೊನ್ನಾವರದಲ್ಲಿ ಕಾರನ್ನು ಜಫ್ತಮಾಡಿ 7 ಲಕ್ಷರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ಚಾಲಕ ನಿಲೇಶ ಹಾಗೂ ಕಾರವಾರದ ಇಂಜನೀಯರ್ ಗಂಗಾ ನಾಯ್ಕ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಚಂದಾವರದಲ್ಲಿ ಲಗೇಜ್ ರಿಕ್ಷಾದಲ್ಲಿ ಸಾಗಿಸಲಾಗುತ್ತಿದ್ದ, 58 ಲೀಟರ್ ಮಧ್ಯವನ್ನು ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ನೀಡಲಾಗಿದೆ.
1-1-2018 ಕ್ಕೆ 18 ವರ್ಷ ಮುಗಿದರೆ ಅಥವಾ ಇನ್ಯಾರಾದರೂ ತಮ್ಮ ಹೆಸರನ್ನು ಸೇರಿಸಲು ಮತ್ತು ತಿದ್ದುಪಡಿಗಳಿಗೆ ಏ.14ರ ತನಕ ಅವಕಾಶಗಳಿದ್ದು, ಸೂಕ್ತ ದಾಖಲೆಗಳನ್ನು ಒದಗಿಸಿ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದರು.

loading...