ರಾಜ್ಯದಲ್ಲಿ ಬದಲಾವಣೆಯ ಗಾಳಿ, ಬಿಜೆಪಿ ಅಧಿಕಾರಕ್ಕೆ: ಹಾಲಪ್ಪ

0
23
loading...

ಯಲಬುರ್ಗಾ: ಕಾಂಗ್ರೆಸ್ ಸರಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಪಕ್ಷ ಬದಲಾವಣೆಯ ಗಾಳಿ ಬಿಸುತ್ತಿದೆ. ಇಲ್ಲಿ ಬಿಜೆಪಿ ಪರಿವರ್ತನೆಯಾಗುತ್ತಿದೆ,ರಾಜ್ಯದಲ್ಲಿ ಬಿಜೆಪಿ ಸರಕಾರ ಅಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಾವುದೇ ಸಂದೇಹ ಬೇಡ ಎಂದು ಬಿಜೆಪಿ ಪಕ್ಷದ ನಿಯೋಜಿತ ಅಭ್ಯರ್ಥಿ ಹಾಲಪ್ಪ ಆಚಾರ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ರ್ಯಾವಣಕಿ ಗ್ರಾಮದಲ್ಲಿ ನಡೆದ ಮನೆ ಮನೆಗೆ ಬೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಅವರು,ರಾಜ್ಯದಲ್ಲಿ ದುರಾಡಳಿತ ನಡೆಸಿದ್ದ ಕಾಂಗ್ರೇಸ್ ಪಕ್ಷದ ಆಡಳಿತವನ್ನು ರಾಜ್ಯದ ಪ್ರಜ್ಞಾವಂತ ಮತದಾರರು ಬೇಸತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕದ ಬಿಜೆಪಿ ಕನಸು ನನಸಾಗಲಿದೆ.ಯಲಬುರ್ಗಾ ಕ್ಷೇತ್ರದಲ್ಲಿಯೂ ಮಖಂಡರು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸಿದರೆ ಕಾಂಗ್ರೆಸ್ ಮುಕ್ತ ಯಲಬುರ್ಗಾ ಆಗುವುದರಲ್ಲಿ ಯಾವ ಸಂದೇಹವಿಲ್ಲ ಎಂದರು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಯಾವುದೇ ಯೋಜನೆ ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಕೈಗಾರಿಕಾ ಕಾರಿಡಾರ್ ಮಾಡುವುದಾಗಿ ನಿರುದ್ಯೋಗಿ ಯುವಕರಿಂದ ಮತಪಡೆದ ಬಸವರಾಜ ರಾಯರಡ್ಡಿಯವರು ಆ ಬಗ್ಗೆ ಕನಸು ಮನಸ್ಸಿನಲ್ಲಿಯೂ ಚಿಂತನೆ ಮಾಡಿಲ್ಲ, ಈ ಮೂಲಕ ನಿರುದ್ಯೋಗಿ ಯುವಕರ ಜೀವನದಲ್ಲಿ ಚಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಸವಲಿಂಗಪ್ಪ ಭೂತೆ,ವೀರಣ್ಣ ಹುಬ್ಬಳ್ಳಿ,ಪ್ರಭುರಾಜ ಕಲಬುರ್ಗಿ,ಈರಪ್ಪ ಕುಡಗುಂಟಿ,ಅಯ್ಯನಗೌಡ ಕೆಂಚಮ್ಮನವರ್,ಶಂಕರಗೌಡ ಟಣಕನಕಲ್ಲ,ದೇವೆಂದ್ರಪ್ಪ ತಳವಾರ,ವೀರಭದ್ರಪ್ಪ ಆವಾರಿ,ಮಂಜುನಾಥ ಗಟ್ಟೇಪ್ಪನವರ್ ಇದ್ದರು.

loading...