ರಾಜ್ಯದಲ್ಲಿ ಬಿಜೆಪಿ ಸರಕಾರ ನಿಶ್ಚಿತ: ಯಡಿಯೂರಪ್ಪ

0
14
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ರಾಜ್ಯದಲ್ಲಿ ಬಿಜೆಪಿ ಸರಕಾರ ಆಸ್ತಿತ್ವಕ್ಕೆ ಬರುವುದು ನಿಶ್ಚಿತವಾಗಿದ್ದು, ರೈತರು ಹಾಗೂ ಕೃಷಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡು, ನೀರಾವರಿಗಾಗಿ ರೂ. 1 ಲಕ್ಷ ಕೋಟಿ ಹಣವನ್ನು ಮೀಸಲಿಡುವದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.
ಗಂಗಾವತಿ ನಗರದ ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಭತ್ತದ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ರೈತರ ಪ್ರಶ್ಣೆಗಳಿಗೆ ಉತ್ತರಿಸಿದ ಅವರು ಭತ್ತ ಬೆಳೆದ ರೈತರೊಂದಿಗೆ ನಾವು ಸದಾ ಇರುತ್ತೆವೆ. ತುಂಗಭದ್ರಾ ನೀರು ನಿರ್ವಹಣೆ ಯಲ್ಲಿ ಸರ್ಕಾರ ಎಡವಿದೆ, ಇದನ್ನು ನಾವು ಮುಂದಿನ ದಿನಾಮಾನಗಳಲ್ಲಿ ಸರಿಪಡಿಸುತ್ತವೆ. ತಕ್ಷಣವೇ ಜಿಲ್ಲಾಧಿಕಾರಿಗಳು ಭತ್ತದ ಬೆಳೆ ನಾಶದ ಬಗ್ಗೆ ಸರ್ವೆಕಾರ್ಯಮಾಡಿ ವರದಿ ಸಿದ್ದಪಡಿಸಬೆಕೆಂದು ಒತ್ತಾಯಿಸಿದರು. ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಕಾಲಾಮಿತಿಯೊಳಗೆ ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ಅನುದಾನ ಮೀಸಲಿರಿಸುವದಾಗಿ ಹೇಳಿದ ಅವರು ಈ ಬಗ್ಗೆ ಈಗಾಗಲೇ ಚುನಾವಣೆ ಪ್ರಣಾಳಿಕೆಯಲ್ಲಿ ಅಳವಡಿಸಿದ್ದು, 12 ಗಂಟೆ ನಿರಂತರ ವಿದ್ಯುತ್‌ ನೀಡುವುದು ಹಾಗೂ ವಿದ್ಯುತ್‌ ಉತ್ಪಾದನೆಗೆ ಹೆಚ್ಚನ ಆದ್ಯತೆಯನ್ನು ನೀಡುವದಾಗಿ ಭರವಸೆಯನ್ನು ನೀಡಿದರು.
ರೈಸ್‌ ಟೆಕ್ನಾಲಜಿ ಪಾರ್ಕ್‌ಗೆ ಹೆಚ್ಚಿನ ಅನುದಾನ, ಮಾರುಕಟ್ಟೆ ಭದ್ರತೆ ಯೋಜನೆ ಜಾರಿ ಆ ಮೂಲಕ ರೈತರಗೆ ಭದ್ರತೆ, ಸೇರಿದಂತೆ ಕೇಂದ್ರದಿಂದ ರೈತರಿಗೆ ಸಹಾಯವಾಗುವ ಯೋಜನೆಗಳನ್ನು ತಾವು ಜಾರಿಗೆ ತರುವದಾಗಿ ಘೋಷಣೆ ಮಾಡಿದರು. ಪ್ರಮುಖ ನದಿ ಜೋಡಣೆಗಳ ಮೂಲಕ ರಾಜ್ಯದಲ್ಲಿ ನೀರಾವರಿಗೆ ಪ್ರಮಾಣಿಕ ಯತ್ನ ನಾನು ಪ್ರಮಾಣಿಕವಾಗಿ ಮಾತು ನೀಡಿದ್ದೇನೆ. ಈ ಸರ್ಕಾರಸತ್ತು ಹೋಗಿದೆ. ನಾನು ರೈತರನೆರವಿಗೆ ಬಂದಿದ್ದೇನೆ, ರಾಜಕಾರಣಕ್ಕಾಗಿ ರಾಜಕೀಯ ಗೀಮಿಕ್‌ಗಾಗಿ ಬಂದಿಲ್ಲ. ಖುದ್ದು ಸ್ಥಳಕ್ಕೆಬಂದಿದ್ದೇನೆ. ರಾಜ್ಯದಲ್ಲಿ ಅನ್ನದಾತರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ÷್ಯ ಮಾಡಿದೆ. ಸರಿಯಾಗಿ ಕ್ರಮಬದ್ಧವಾಗಿ ಯೋಚಿಸಿದ್ರೆ ರೈತರಿಗೆ ಈ ಸ್ಥಿತಿ ಬರ್ತಿರಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ರೈತರಿಗಾಗಿ ಜೀವನ ಮುಡುಪು : ದಾವಣಗೆರೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಸಮ್ಮುಖದಲ್ಲಿ ಹೇಳಿದಂತೆ ತಮ್ಮ ಜೀವಮಾನದವರೆಗೂ ರೈತರ ಕಲ್ಯಾಣಕ್ಕಾಗಿ ಹೋರಾಡುವದಾಗಿ ಪುನರುಚ್ಚಿರಿಸಿದರು, ಸಂವಾದದಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಯಡಿಯೂರಪ್ಪ ಅವರು ರೈತರಿಗಾಗಿ ಹಲವು ಕಾರ್ಯಕ್ರಮಗಳ ಮೂಲಕ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು, ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಚುನಾವಣಾ ಪ್ರಣಾಳಿಕೆಯಲ್ಲಿ ಕಾರ್ಯಕ್ರಮ ಅಳವಡಿಸಿದೆ ಎಂದು ತಿಳಿಸಿದರು.
ಪರಿಹಾರ ನೀಡಲು ಸಂಸದರ ಆಗ್ರಹ : ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಕರಡಿ ಸಂಗಣ್ಣ ಅವರು ಸರಿಯಾಗಿ ಉಸ್ತುವಾರಿ, ನಿರ್ವಹಣೆ ಇಲ್ಲದ ಕಾರಣ ಭತ್ತ ಬೆಳೆದ ರೈತ ಸಂಕಷ್ಟದಲ್ಲಿ ಸಿಲುಕಿದ್ದಾರೆ, ಎರಡು ಟಿಎಂಸಿ ನೀರು ಬಿಡಲು ಒತ್ತಾಯಿಸಿದರು ಬಿಡಲಿಲ್ಲ, ಸಿಎಂ ಭೇಟಿಗೆ ಅವಕಾಶ ನೀಡಲಿಲ್ಲ ನೀರು ಕೇಳಿದರೆ ಬಂಧಿಸಲಾಯಿತು. ಇದು ರೈತ ವಿರೋಧಿ ಸರ್ಕಾರವಾಗಿದೆ. ಬೆಳೆಗೆ ನೀರು ಬಿಡಲಿಲ್ಲ ಹಾಗೂ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಿಲ್ಲ, ತಕ್ಷಣ ಸರ್ವೇ ನಡೆಸಿ ಪರಿಹಾರ ನೀಡುವುಂತೆ ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಮಾಜಿ ಸಂಸದರಾದ ಶಿವರಾಮೆಗೌಡ, ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್‌, ಜಿ.ವೀರಪ್ಪ, ಮುಖಂಡರಾದ ನಾಗಪ್ಪ ಸಾಲೋಣಿ, ಸಿ.ವಿ.ಚಂದ್ರಶೇಖರ್‌, ಬಸವರಾಜ ದಡೇಸ್ಗೋರ್‌, ಹೆಚ್ಚ,ಆರ್‌.ಚನ್ನಕೇಶವ, ಚಂದ್ರಶೇಖರಗೌಡ ಹಲಗೇರಿ, ಬಿ.ಗಿರಿಶನಾಂದ, ತಿಪ್ಪೆರುದ್ರಯ್ಯ ಸ್ವಾಮಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...