ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ : ಜಿ.ಪರಮೇಶ್ವರ

0
20
loading...

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಪಿ.ಸಿ.ಸಿ ಅಧ್ಯಕ್ಯ ಜಿ.ಪರಮೇಶ್ವರವರು ರಾಜ್ಯಕ್ಕೆ ಅಮಿತ್ ಶಾ, ಮೋದಿ ಯಾರೇ ಬಂದರು ವರ್ಕೌಟ್ ಆಗಲ್ಲ. ಯಡಿಯೂರಪ್ಪನವರು ಎಷ್ಟೇ ಪ್ರಯತ್ನ ಪಟ್ಟರು ಈ ಬಾರಿ ಮುಖ್ಯಮಂತ್ರಿಯಾಗುವುದು ಅಸಾದ್ಯ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಈಗಾಗಲೆ ರಾಜ್ಯ ಹಲವು ಪ್ರವಾಸ ಮಾಡಿದ್ದೇವೆ. ನಮಗೆ ಈ ಬಗ್ಗೆ ಭರವಸೆ ಇದೆ, ಹಾಗೆಯೇ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಹಾಗೂ ದೇವೆಗೌಡರದು ಕನಸುಗಳು ನನಸಾಗುವುದಿಲ್ಲ. ಮತ್ತೊಮ್ಮೆ ಅಧಿಕಾರಕ್ಕೆ ಬರೋದು ನಮ್ಮ ಮೊದಲ ಆದ್ಯತೆ ಎಂದ ಅವರು, ಆ ಮೇಲೆ ಸಿಎಂ ಯಾರಾಗಬೇಕು ಅಂತ ಚರ್ಚೆ ಮಾಡ್ತುತ್ತೇವೆ ಎಂದರು. ಟಿಕೇಟ್ ಬಗ್ಗೆ ಯಾರು ಗೊಂದಲ ಪಡೋದು ಬೇಡ. ಆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದ ಅವರು, ಅಶೋಕ್ ಖೇಣಿ ಕೈ ಟಿಕೇಟ್ ವಿಚಾರವಾಗಿ ಮಾತನಾಡಿ, ನಂದೇ ಟಿಕೇಟ್ ಇನ್ನು ಖಾತ್ರಿ ಆಗಿಲ್ಲ , ಬೇರೆಯವರುದು ನನ್ಯಾಗೆ ಹೇಳಲಿ ಎಂದು ಪ್ರಶ್ನಿಸಿದರು. ಸಿಎಂ ಕ್ಷೇತ್ರ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಸುದ್ದಿಗಾರರಿಗೆ ಕ್ಷೇತ್ರ ಬದಲಾವಣೆ ಮಾಡ್ತಾರೆ ಎಂದು ಯಾರು ಹೇಳಿದ್ದು, ಇನ್ನು ಟಿಕೇಟ್ ಘೋಷಣೆನೆ ಆಗಿಲ್ಲ. ಹೀಗಾಗಿ ಅದರ ಬಗ್ಗೆ ಮಾತಾಡೋದು ಹೇಗೆ ಎಂದು ಪ್ರಶ್ನಿಸಿ ಸುಮ್ಮನಾದರು.

loading...