ರಾಜ್ಯದಲ್ಲಿ ಮತ್ತೆ ಕಾಂಗ್ರೇಸ್‌ ಪಕ್ಷ ಅಧಿಕಾರಕ್ಕೆ: ಬಸವರಾಜ ರಾಯರೆಡ್ಡಿ

0
20
loading...

ಯಲಬುರ್ಗಾ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್‌ ಸರಕಾರ ಮತ್ತೋಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ವಿಶ್ವಾಸ ವ್ಯಕ್ತಪಡಿದಿದರು.
ಯಲಬುರ್ಗಾ ಪಟ್ಟಣದ ಬ್ಲಾಕ ಕಾಂಗ್ರೇಸ್‌ ಪಕ್ಷದ ಕಛೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು,ನೀರಾವರಿ ಬಗ್ಗೆ ಬಿಜೆಪಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ.
ಅವರಿಗೆ ಈ ಯೋಜನೆ ಬಗ್ಗೆ ಏನು ಗೋತ್ತಿಲ್ಲ.ಬಿಜೆಪಿಯವರಿಗೆ ಅಂಕಿ ಅಂಶ ಗೊತ್ತಿಲ್ಲ.ಹೀಗಾಗಿ ನೀರಾವರಿ ಯೋಜನೆ ಬಗ್ಗೆ ಇಲ್ಲಾ ಸಲ್ಲದ ಆರೋಪ ಮಾಡುತ್ತಿದ್ದಾರೆ,ನಾನು ಮತ್ತೆ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡರೆ ಇಡೀ ಕೊಪ್ಪಳ ಜಿಲೆಯಲ್ಲಿಯೇ ನೀರಾವರಿ ಯೋಜನೆಯನ್ನು ಜಾರಿಗೆ ತರುವಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
ಇಲ್ಲದ್ದಿದ್ದರೆ ನನ್ನ ಹೆಸರನ್ನು ಕರೆಯಬೇಡಿ ಎಂದಾ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಕ್ಕೆ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ರಾಜ್ಯದ ಪ್ರಜ್ಞಾವಂತ ಮತದಾರರು ಮತ್ತೆ ಕಾಂಗ್ರೇಸ್‌ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ನಾನು ಕೂಡ ಈ ಕ್ಷೇತ್ರದ ಶಾಸಕನಾಗಿ ಆಯ್ಕೆಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಅವರು,ತಾಲೂಕಿನಲ್ಲಿ ಎಂದಿಗೂ ಜಾತಿ ರಾಜಕಾರಣ ನಡೆಯುವದಿಲ್ಲ.ಇಲ್ಲಿ ಅಭಿವೃದ್ದಿಯೇ ಮುಖ್ಯ.ಎಂದಿಗೂ ಹಣ ಮತ್ತು ಜಾತಿಯಿಂದ ಆಯ್ಕೆಗೊಳ್ಳುವದಿಲ್ಲ.ಇಲ್ಲಿಯ ಮತದಾರರು ಪ್ರಜ್ಞಾವಂತರಾಗಿದ್ದು,ಅಭಿವೃದ್ದಿಯೇ ಮುಖ್ಯ ಹೊರತು ಹಣದಿಂದಲ್ಲಾ.ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದವರು ಈ ಕ್ಷೇತ್ರದ ಮತದಾರರು,ಅವರ ಆಶೀರ್ವಾದದಿಂದ ನಾನು ರಾಜ್ಯ ಮಟ್ಟದಲ್ಲಿ ಗುರ್ತಿಸಲು ಸಾಧ್ಯವಾಯಿತು
.ಅವರ ಈ ಋಣ ಎಂದಿಗೂ ಮರೆಯುದಿಲ್ಲ.ಬಿಜೆಪಿ ಪಕ್ಷ ವಾಮ ಮಾರ್ಗದಿಂದ ಚುನಾವಣೆಗೆ ಹೋಗುತ್ತಿದೆ.ಇಂಥವರಿಂದ ನಾನು ಪಾಠ ಕಲಿಯಬೇಕಾಗಿಲ್ಲ.ಕ್ಷೇತ್ರದ ಮತದಾರರ ಆಶೀರ್ವಾದ ಎಲ್ಲಿತನಕ ಇರುತ್ತೆ ಅಲ್ಲಿವರೆಗೂ ಜನರ ಸೇವೆ ಮಾಡಲು ಸಿದ್ದ.ಬೇಡಾ ಎಂದರೆ ಇವತ್ತೆ ಮನೆಗೆ ಹೋಗಲು ಸಿದ್ದ ಎಂದಾ ಅವರು,ಕ್ಷೇತ್ರದಲ್ಲಿ ಅಭಿವೃದ್ದಿಯಾಗಬೇಕೆಂಬ ಕನಸು ಕಂಡು ರಾಜಕರಣಕ್ಕೆ ಬಂದವನು.ಇಲ್ಲಿಯ ಜನರಿಗೆ ಹಣ ಮತ್ತು ಜಾತಿ ಬೇಕಿಲ್ಲ.ಅಭಿವೃದ್ದಿ ಬೇಕು.ಈ ದೃಷ್ಠಿಯಿಂದ ಈ ಭಾರಿ ಕೂಡಾ ಮತದಾರರು ಆಶೀರ್ವದಿಸುವಂತೆ ಸಚಿವ ಬಸವರಾಜ ರಾಯರಡ್ಡಿ ಮನವಿ ಮಾಡಿಕೊಂಡರು.
ಇದೆ ಸಂದರ್ಭದಲ್ಲಿ ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷರು,ಹಿರಿಯ ಮುಖಂಡ ಶ್ರೀಪಾದಪ್ಪ ಅಧಿಕಾರಿ,ಹಿರಿಯ ರೈತ ಮುಖಂಡ ತ್ರೀಲಿಂಗಪ್ಪ ಬೆಟಗೇರಿ,ಬಸವರಾಜ ಅಧಿಕಾರಿ,ನ್ಯಾಯವಾದಿ ರಾಜೂ ನಿಂಗೋಜಿ,ಸಂಗಮೇಶ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೇಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.
ಬ್ಲಾಕ ಕಾಂಗ್ರೇಸ್‌ ಪಕ್ಷದ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ,ಕರಿಬಸಪ್ಪ ನಿಡಗುಂದಿ,ಬಿ.ಎಂ.ಶಿರೂರು,ಸಂಗಣ್ಣ ಟೆಂಗಿನಕಾಯಿ,ಹನಮಂತರಾವ್‌ ದೇಸಾಯಿ,ನಾಗರಾಜ ಕೊಳಜಿ,ಆನಂದ ಉಳ್ಳಾಗಡ್ಡಿ,ಪಪಂ ಅಧ್ಯಕ್ಷೆ ಜಯಶ್ರೀ ಅರಕೇರಿ,ಜಯಶ್ರೀ ಕಂದಕೂರು,ಭಾಗಿರಥಿ ಜೋಗಿನ ಶರಣಮ್ಮ ಪೂಜಾರ,ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಮುಖಂಡ ಮೌಲಾಹುಸೇನ ಬುಲ್ಡಿಯಾರ ನಿರೂಪಿಸಿ ಸ್ವಾಗತಿಸಿದರು.

loading...