ರಾಜ್ಯದ ಜನತೆಗೆ ಬಿಜೆಪಿ ಸರ್ಕಾರದ ಅಗತ್ಯವಿದೆ: ಅಮಿತ್ ಶಾ

0
38
loading...

ರಾಜ್ಯದ ಜನತೆಗೆ ಬಿಜೆಪಿ ಸರ್ಕಾರದ ಅಗತ್ಯವಿದೆ: ಅಮಿತ್ ಶಾ

ಕನ್ನಡಮ್ಮ ಸುದ್ದಿ-ಬೆಳಗಾವಿ: ಕರ್ನಾಟಕದ ಜನತೆಗೆ ಸಿದ್ದರಾಮಯ್ಯ ತೆಗೆದು ಯಡಿಯೂರಪ್ಪ ನನ್ನು ಸಿಎಂ ಮಾಡಬೇಕೆಂದು ಇಚ್ಛಿಸಿದ್ದಾರೆ ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಹೇಳಿದರು.

ಅವರು ಶುಕ್ರವಾರದಂದು ಉತ್ತರ ಕರ್ನಾಟಕದ ಪ್ರವಾಸ ಕೈಗೊಮಡಿರುವ ಬಿಜೆಪಿಯ ಚಾಣಕ್ಯ ಎಂದೆ ಖ್ಯಾತಿ ಪಡೆದ ಅಮಿತ್ ಶಾ ಅವರು ಕಿತ್ತೂರ ರಾಣಿ ಚನ್ನಮ್ಮನ ನಾಡಿಗೆ ಭೇಟಿ ನೀಡಿ ರಾಣಿ ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಮಾದ್ಯಮದೊಂದಿಗೆ ಮಾತನಾಡಿ, ಕಿತ್ತೂರು ಸ್ವತಂತ್ರ ಪೂರ್ವದಲ್ಲಿ ಇಲ್ಲಿ ಯುದ್ದ ನಡೆದಿದೆ.ಇದು ಇತಿಹಾಸ ಹೊಂದಿದ ಸ್ಥಳವಾಗಿದೆ.ಇಲ್ಲಿಂದಲೇ ಬಿಜೆಪಿ ಪ್ರಚಾರವನ್ನು ಪ್ರಾರಂಬಿಸಿದ್ದವೆ.ಈ ಭಾರಿ ಬಿಜೆಪಿ ಬಹು ಪ್ರಚಂಡ ಮತದಿಂದ ಜಯಬೇರಿ ಭಾರಿಸಲಿದೆ ಎಂದು ಹೇಳಿದರು.
ಕರ್ನಾಟಕದ ಲ್ಲಿ ವೇಗವಾಗಿ ಕ್ಯಾಂಪಿನ ನಡದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯ ಅಧಿಕಾರ ನೀಡಿ ಕರ್ನಾಟಕ ವನ್ನು ಅಭಿವೃದ್ಧಿ ಯತ್ತ ಕೊಂಡೊಯುತ್ತೆವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಾ ,ಕೇಂದ್ರ ಸಚಿವ ಅನಂತಕುಮಾರ ಹೆಗಡೆ,ಸಂಸದ ಸುರೇಶ ಅಂಗಡಿ, ಪ್ರಭಾಕರ ಕೋರೆ, ಶಾಸಕ ವಿಶ್ವನಾಥ ಪಟೀಲ,ಉಮೇಶ ಕತ್ತಿ, ಮಾಂತೇಶ ಕವಟಗಿಮಠ, ಈರಣ್ಣಾ ಕಡಾಡಿ, ಅಭಯ ಪಟೀಲ, ಅನಿಲ ಬೇನಕೆ, ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.

loading...