ರಾಮುಲು ಎಸ್ಟಿ ಸಮುದಾಯದ ನಾಯಕರಲ್ಲ: ಈಶ್ವರ

0
20
loading...

ಕನ್ನಡಮ್ಮ ಸುದ್ಧಿ ರೋಣ: ಬಿ.ಶ್ರೀ ರಾಮುಲು ಎಸ್ಟಿ ಸಮುದಾಯದ ಪಕ್ಕಾ ನಾಯಕನೆಂದು ಹೇಳಿಕೊಂಡಿದ್ದು, ಸತ್ಯಕ್ಕೆ ದೂರವಾಗಿದ್ದು. ಇದೆಲ್ಲಾ ಚುನಾವಣೆಯ ಗಿಮ್ಮಿಕ್‌ ಆಗಿದೆ ಎಂದು ಎಸ್ಟಿ ರಾಜ್ಯಾಧ್ಯಕ್ಷ ಟಿ.ಈಶ್ವರ ಆರೋಪ ಮಾಡಿದರು.
ಪಟ್ಟಣದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್‌ ಸರಕಾರ ಆಡಳಿತದ ಚುಕ್ಕಾಣಿಯನ್ನು ಹಿಡಿಯುತ್ತದೆ.ಅದರಲ್ಲೂ ಬದಾಮಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯನವರೇ ಗೆಲುವನ್ನು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2018 ಚುನಾವಣೆಯಲ್ಲು ಶತಾಯಗತಾಯ ಗೆಲ್ಲಲೇಬೇಕು ಎಂಬ ಮಹದಾಸೆಯಿಂದ ಇಂದು ವಿವಿಧ ರೀತಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಲಿರಯುವುದು ಸರಿಯಾದುದಾದಲ್ಲಾ.ಬದಾಮಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯನವರ ಎದುರಾಳಿಯಾಗಿ ಬಿ.ಶ್ರೀ ರಾಮುಲು ನಾಮಪತ್ರವನ್ನು ಸಲ್ಲಿಸಿ ಅವರನ್ನು ಸೋಲಿಸುವ ಹುಣ್ಣಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಂದಾನಯ್ಯ ನಂದಿಕೋಲಮಠ,ಸಂಜಯ ದೊಡ್ಡಮನಿ,ಶೇಖರಗೌಡ ಜಕ್ಕನಗೌಡ್ರ,ಅನ್ನಪ್ಪ ನವಲಗುಂದ,ಕೆ.ಕೆ.ಮುಲ್ಲಾ,ಸೇರಿದಂತೆ ಇತರರು ಇದ್ದರು.

loading...