ರಾಯರೆಡ್ಡಿ ಅಭಿವೃದ್ದಿಗೆ ಮೆಚ್ಚಿ ಮತ್ತೆ ಪಕ್ಷಕ್ಕೆ ವಾಪಸ್ಸು: ಶ್ರೀಪಾದಪ್ಪ

0
21
loading...

ಯಲಬುರ್ಗಾ: ಕ್ಷೇತ್ರದ ಶಾಸಕರಾಗಿ ಸಚಿವರಾಗಿ ಕೆಲಸ ಮಾಡಿರುವ ಅಭಿವೃದ್ದಿ ಯೋಜನೆಯ ಕನಸ್ಸು ಕಂಡಿರುವ ಬಸವರಾಜ ರಾಯರೆಡ್ಡಿ ಅವರ ಅಭಿವೃದ್ದಿ ಕೆಲಸ ಮೆಚ್ಚಿ ನನ್ನ ಮಾತೃ ಪಕ್ಷವಾದ ಕಾಂಗ್ರೇಸ್‌ ಪಕ್ಷಕ್ಕೆ ವಾಪಸ್ಸಾಗಿದ್ದು ನನಗೆ ತುಂಬಾ ಆನಂದವಾಗಿದೆ ಎಂದು ಹಿರಿಯ ಮಖಂಡ ಶ್ರೀಪಾದಪ್ಪ ಅಧಿಕಾರಿ ಹೇಳಿದರು.
ಇಲ್ಲಿಯ ಬ್ಲಾಕ ಕಾಂಗ್ರೇಸ್‌ ಪಕ್ಷದ ಕಛೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೇಸ್‌ ಪಕ್ಷಕ್ಕೆ ಸೇರ್ಪಡೆ ನಂತರ ಮಾತನಾಡುತ್ತಿದ್ದ ಅವರು,ಇಡೀ ರಾಜ್ಯದಲ್ಲಿಯೇ ಶಿಕ್ಷಣದ ಕ್ರಾಂತ್ರಿಯನ್ನು ಮಾಡಿರುವ ಸಚಿವ ಬಸವರಾಜ ರಾಯರೆಡ್ಡಿ ಹೈದ್ರಬಾದ ಕರ್ನಾಟಕ ಭಾಗದಲ್ಲಿಯೇ ಹಿಂದುಳಿದಿದ್ದ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡುವ ಮೂಲಕ ಇಡೀ ಕರ್ನಾಟಕದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ.ನನ್ನ ಮತ್ತು ಸಚಿವ ಬಸವರಾಜ ರಾಯರೆಡ್ಡಿಯವರ ಸಂಬಂಧ ಬಹು ದಿನಗಳಿಂದ ಬಂದಿದ್ದು,ಅನಿವಾರ್ಯ ಕಾರಣಗಳಿಂದ ಪಕ್ಷ ಬಿಡಬೇಕಾಯಿತು.
ಆದರೆ ಬಿಜೆಪಿ,ಜೆಡಿಎಸ್‌ ಪಕ್ಷಕ್ಕೆ ಹೋಗಿದ್ದಾಗ ಅಲ್ಲಿ ನಾನು ಸಾಕಷ್ಟು ನೋವನ್ನು ಅನುಭವಿಸಬೇಕಾಯಿತು.ಯಾಕೆ ನನ್ನ ಮಾತೃ ಪಕ್ಷವನ್ನು ಬಿಟ್ಟು ಬಂದೆ ಅಂತಾ ನನಗೆ ಅನುಭವವಾಯಿತು.ಈ ನಿಟ್ಟಿನಲ್ಲಿ ಯಾವುದೇ ಆಸೆಗೆ ಒಳಗಾಗದೆ ಮತ್ತು ಇವರ ಅಭಿವೃದ್ದಿ ಮತ್ತು ಜನಪರ ಕಾರ್ಯಗಳನ್ನು ಮೆಚ್ಚಿ ಕಾಂಗ್ರೇಸ್‌ ಪಕ್ಷಕ್ಕೆ ಸೇರ್ಪಡೆಗೊಂಡದ್ದೇನೆ.
ಈ ಭಾರಿಯ ಚುನಾವಣೆಯಲ್ಲಿಯಲ್ಲಿ ಸಚಿವರು ಮಾಡಿರುವ ನೂರೆಂಟು ಅಭಿವೃದ್ದಿ ಕಾರ್ಯಗಳಿಂದ ಇವರ ಗೆಲುವಿಗೆ ಈ ಕ್ಷೇತ್ರದ ಪ್ರಜ್ಞಾವಂತ ಮತದಾರರು ಆಶೀರ್ವಾದಿಸುವ ಮೂಲಕ ಅತ್ಯಂತ ಬಹುಮತದಿಂದ ಗೆಲ್ಲಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವ ಬಸವರಾಜ ರಾಯರೆಡ್ಡಿ,ಬಸವರಾಜ ಉಳ್ಳಾಗಡ್ಡಿ,ಜಿಪಂ ಮಾಜಿ ಸದಸ್ಯ ಕೆರಿಬಸಪ್ಪ ನಿಡಗುಂದಿ,ನ್ಯಾಯವಾದಿ ಬಿ.ಎಂ.ಶಿರೂರು,ನಾಗರಾಜ ಕೊಳಜಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

loading...