ರೈತರ ಸಮಸ್ಯೆ ಪರಿಹಾರಿಸದಿದ್ದರೆ ಬೃಹತ್ ಹೋರಾಟ : ಸಂಜೀವ

0
19
loading...

ಬ್ಯಾಡಗಿ: ರೈತರ ಸಮಸ್ಯೆಗಳನ್ನು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹತ್ತಾರು ಬಾರಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ಮೂಲಕ ಒತ್ತಾಯ ಮಾಡಿದ್ದು, ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಉತ್ತರ ಕರ್ನಾಟಕ ಪ್ರದೇಶ ರೈತ ಹಾಗೂ ರೈತಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಸಂಜೀವ ಮಡಿವಾಳರ ತಿಳಿಸಿದರು.

ಈ ಕುರಿತು ಪಟ್ಟಣದ ಮುಪ್ಪಿನೇಶ್ವರ ಮಠದಲ್ಲಿ ಜರುಗಿದ ತಾಲೂಕು ಮಟ್ಟದ ಸಭೆಯಲ್ಲಿ ಸರ್ವಸದಸ್ಯರು ನೂತನ ಪದಾಧಿಕಾರಿಗಳ ಆಯ್ಕೆಗೊಳಿಸಿ ಮಾತನಾಡಿದರು. ರೈತನ ಬೆಳೆಗಳಿಗೆ ಸಮರ್ಪಕವಾಗಿ ಬೆಲೆಸಿಗದೆ ಪರಿತಪಿಸುತ್ತಿದ್ದಾರೆ. ಗೋವಿನಜೋಳಕ್ಕೆ ಬೆಂಬಲ ಬೆಲೆ ನಿಗಧಿಮಾಡಿರುವುದು ಅವೈಜ್ಞಾನಿಕವಾಗಿದ್ದು, ರೈತರನ್ನು ಇನ್ನಷ್ಟು ಸಾಲಕ್ಕೆ ಸಿಲುಕಿಸುವಂತಿದೆ. ಇಂದಿಗೂ ಖರೀದಿ ಕೇಂದ್ರಗಳನ್ನು ತೆಗೆಯದೆ ಮೋಸವೆಸಗಲಾಗಿದೆ. ಒಂದು ಕ್ವಿಂಟಲ್ ಗೋವಿನಜೋಳ ಬೆಳೆಯಲು ಸಾ.ರೂ.ಖರ್ಚು ಬರುತ್ತಿದ್ದು, ಈಗ 900 ದರದಲ್ಲಿ ಮಾರಾಟವಾಗುತ್ತಿದ್ದ, ಇಂತಹ ದುಸ್ಥಿತಿಯಲ್ಲಿ ರೈತ ಉಳಿಯುವುದು ಹೇಗೆ..? ರೈತರ ದುಸ್ಥಿತಿಗೆ ತರಲು ಸರ್ಕಾರಗಳೇ ಕಾರಣವೆಂದು ಆರೋಪಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಬೋವಿ ಮಾತನಾಡಿ, ಪ್ರತಿ ತಾಲೂಕಿನಲ್ಲಿ ಕೆರೆಗಳ ಹೂಳು ತೆಗೆಯುವ ಮೂಲಕ ಹೆಚ್ಚು ನೀರು ನಿಲ್ಲುವಂತೆ ಯೋಜನೆ ರೂಪಿಸಬೇಕಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ದೊಡ್ಡ ಕೆರೆಗಳನ್ನು ಆಯ್ಕೆಮಾಡಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮಾಡಬೇಕೆಂದರು. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಕೂಡ ರೈತರಿಗೆ ಶಾಸ್ವತವಾಗಿ ಆಧಾಯ ನಿರೀಕ್ಷಿಸುವ ಯೋಜನೆ ಆಗುತ್ತಿಲ್ಲ.ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶಂಕರ ಕುಸಗೂರು, ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಪುಷ್ಪಾ ಹಿರೇಮಠ ಇವರನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅಸುಂಡಿ, ಈರಪ್ಪ ಮಾಳೇನಹಳ್ಳಿ, ಸುರೇಶ ಛತ್ರದ, ಮಹೇಶ ಗಿರಣಿ, ಮಂಜುನಾಥ ಗೂರಣ್ಣನವರ, ಸಚಿನ ಮಾಳದಕರ, ಪವನ ಗೋಸಾವಿ, ಉದಕುಮಾರ ಚೌದರಿ, ಶಿವರಾಜ ಮಾಳೇನಹಳ್ಳಿ ಕಿರಣ ಕಟ್ಟಿ, ಬಸವರಾಜ ತೆರೇದಹಳ್ಳಿ, ವಿಜಯ ಶೆಟ್ಟರ, ಸತೀಶ ಬಿ, ನಾಗರಾಜ ಮಡಿವಾಳರ ಇದ್ದರು.

loading...