ರೌಡಿ ಸೀಟರಗಳಿಗೆ ತೀವಾರಿ ಖಡಕ್ ಎಚ್ಚರಿಕೆ

0
25
loading...

ಗೋಕಾಕ: ಚುನಾವಣೆ ಸಂದರ್ಭದಲ್ಲಿ ಮತದಾನದ ಭೂತಗಳಲ್ಲಿ ಅಹೀತಕರ ಘಟನೆ ನಡೆಸಿದರೆ ಜೈಲು ಪಾಲು ಮಾಡುತ್ತೆವೆ ಎಂದು ಸಿಆರ್‍ಪಿಎಫ್‍ನ ಅಸಿಸ್ಟಂಟ್ ಕಮಾಂಡರ್ ವೀಕ್ರಂ ತೀವಾರಿ ಖಡಕ್ ಎಚ್ಚರಿಕೆ ನೀಡಿದರು.
ಅವರು, ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಗ್ರಾಮೀಣ ಠಾಣೆಯ ಆವರಣದಲ್ಲಿ ಸಿಆರ್‍ಪಿಎಫ್ ಕಮಾಂಡರ್ ವೀಕ್ರಂ ತೀವಾರಿ ಹಾಗೂ ಡಿವೈಎಸ್‍ಪಿ ಡಿ.ಟಿ ಪ್ರಭು ಅವರ ನೇತ್ರತ್ವದಲ್ಲಿ ಜರುಗಿದ ರೌಡಿ ಶೀಟರ್‍ಗಳ ಪೇರೇಡ್‍ನಲ್ಲಿ ಮಾತನಾಡಿ, ಚುನಾವಣೆಯ ಪ್ರಚಾರ ಹಾಗೂ ಬೂತಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸಿದರೆ ಸಿಆರ್‍ಪಿಎಫ್ ಸಿಬ್ಬಂಧಿ ಸೂಕ್ತ ಕ್ರಮಕೈಗೊಳ್ಳುತ್ತಾರೆಂದರು.

ಖವೈಎಸ್‍ಪಿ ಡಿ ಟಿ ಪ್ರಭು ಮಾತನಾಡಿ, ಗೋಕಾಕ ನಗರ ಶಾಂತಿ ಸುವ್ಯಸ್ಥೆಗೆ ಹೆಸರಾಗಿದೆ. ನಗರದಲ್ಲಿ ಕೋಮುವಾದ ಹಾಗೂ ಅಹಿತಕರ ಘಟನೆ, ಅಪರಾಧ ಕೃತ್ಯಗಳನ್ನು ನಡೆಸದಿರಿ, ಅಪರಾದ ಕೃತ್ಯ ವೆಸಗಿದಲ್ಲಿ ಅಥವಾ ಭಾಗಿಯಾದಲ್ಲಿ ಅಂತವರನ್ನು ಪೋಲಿಸ್ ಇಲಾಖೆ ನೇರವಾಗಿ ಜೈಲಿಗೆ ಕಳುಹಿಸಲಾಗುವದು.
ಅಪರಾಧ ಕೃತ್ಯಗಳಲ್ಲಿ ಭಾಗವಹಿಸದೇ ಸಮಾಜದಲ್ಲಿ ಒಳ್ಳೇಯ ನಾಗರಿಕರಾಗಿ ತಮ್ಮ ಜೀವನ ನಡೆಸಿದರೆ ಪೋಲಿಸ್ ಇಲಾಖೆ ತಮಗೆ ಸಹಾಯ ಸಹಕಾರ ನೀಡುತ್ತದೆ ಎಂದರು. ಈ ರೌಡಿ ಶೀಟರ್ ಪೇರೆಡನಲ್ಲಿ 57ಜನ ಭಾಗವಹಿಸಿದ್ದು ಇನ್ನುಳಿದವರನ್ನು ಠಾಣೆಗೆ ಕರೆಸಿ ತಾಕೀತು ಮಾಡಲಾಗುವದು ಎಂದರು. ಈ ಸಂದರ್ಭದಲ್ಲಿ ಗೋಕಾಕ ಸಿಪಿಐ ಕಿರಣ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಶಹರ ಠಾಣೆ ಪಿಎಸ್‍ಐ ಸಂತೋಷ ಹಳ್ಳೂರÀ, ಗ್ರಾಮೀಣ ಠಾಣೆ ಸೇರಿದಂತೆ ಇತರರು ಇದ್ದರು.

loading...