ರೌಡಿ ಸೀಟರ್‌ಗಳಿಗೆ ಖಡಕ್‌ ಎಚ್ಚರಿಕೆ ನೀಡಿದ: ಐಜಿಪಿ ಅಲೋಕ ಕುಮಾರ

0
22
loading...

ಕನ್ನಡಮ್ಮ ಸುದ್ದಿ-ಸಿಂದಗಿ: ನಿಮ್ಮ ತಪ್ಪುಗಳು ಸುಧಾರಣೆಗೊಂಡರೆ ನೀವು ಮನುಷ್ಯರಾಗುತ್ತಿರಿ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾದವರು ಕೂಡಲೆ ಜಿಲ್ಲೆಯನ್ನು ಬಿಟ್ಟು ತೊಲಗಬೇಕು. ಇಲ್ಲದಿದ್ದಲ್ಲಿ ಕಾನೂನಿನ ಪ್ರಕಾರ ನಾವೇ ಅಂತವರನ್ನು ಗಡಿಪಾರು ಮಾಡಬೇಕಾಗುತ್ತದೆ ಹುಷಾರ್‌ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕ ಕುಮಾರ ಖಡಕ್‌ ತಾಕೀತು ನೀಡಿದ್ದಾರೆ.
ಪಟ್ಟಣದ ಪೊಲೀಸ್‌ ಠಾಣೆಗೆ ಸೋಮವಾರ ಭೇಟಿ ನೀಡಿದ ಅವರು ಸಿಂದಗಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿನ ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ, ಅಕ್ರಮ ಶಸ್ತ್ರಾಸ್ತಗಳ ರವಾನೆ ಕಳ್ಳತನ ಮತ್ತು 2013 ರಲ್ಲಿ ಹಿಂದೂ ಮುಸ್ಲಿಂ ಗಲಾಟೆ, ಕಲ್ಲು ತುರಾಟ, ಪೋಸ್ಕೋ ಸೇರಿದಂತೆ ವಿವಿಧ ಪ್ರಕರಣಗಳಲ್ಲಿನ ಭಾಗಿಗಳಾದ ರೌಡಿಗಳ ಪೈಕಿ ಸುಮಾರು 21 ರೌಡಿಗಳಿಗೆ ಖಡಕ್‌ ಕ್ಲಾಸ್‌ ಮಾಡಿ ನೀವು ಶಿಸ್ತಿನಿಂದಿರಬೇಕು ನಿಮ್ಮ ಉಡುಗೆ ತೊಡುಗೆಗಳಲ್ಲಿ ಬದಲಾವಣೆಯಾಗಬೇಕು.
ಪೋಲಿಸರು ಮತ್ತು ಕೇಲ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿರುವವರ ಜೊತೆ ಗುರುತಿಸುತ್ತಿದ್ದಾರೆ ಎಂದು ಕಂಡು ಬರುತ್ತಲಿದೆ ಅದು ಸಲ್ಲದು ಹಾಗೇನಾದರು ಮುಂದುವರೆದಲ್ಲಿ ಅಂತವರನ್ನು ಗುರುತಿಸಿ ಅವರನ್ನು ಕೂಡಲೆ ಅಮಾನತು ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ಠಾಣೆಯ ಸಿಬ್ಬಂದಿ ಐ.ವಾಯ್‌ ದಳವಾಯಿ ಅವರು 2017 ರಲ್ಲಿ ತಾಲೂಕಿನಲ್ಲಿ 22 ಬೈಕಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚಿ ವಾಹನ ಮಾಲಿಕರಿಗೆ ಬೈಕ್‌ ನೀಡಿರುವ ಹಿನ್ನಲೆಯಲ್ಲಿ ಇಲಾಖೆ ಅವರನ್ನು ಉತ್ತಮ ಕಾರ್ಯ ಪ್ರಶಸ್ತಿ ನೀಡಿತ್ತು ಅದನ್ನು ಆಯ್‌ಜಿಪಿ ಪ್ರಸಂಶಿಸಿ ನಗದು ರೂ 1 ಸಾವಿರ ನೀಡಿ ಗೌರವಿಸಿದರು.
ವಿಜಯಪುರ ಪೊಲೀಸ ವರಿಷ್ಠಾಕಾರಿ ಪ್ರಕಾಶ ನಿಕ್ಕಮ್‌, ಹೆಚ್ಚುವರಿ ಪೊಲೀಸವರಿಷ್ಠಾಕಾರಿ ಶಿವುಕುಮಾರ ಆರ್‌, ಡಿವಾಯ್‌ಎಸ್‌ಪಿಗಳಾದ ರವೀಂದ್ರ ಶಿರೂರ, ಪೃತ್ವಿ ಎಂ.ಜೆ, ನವೀನ ಕುಮಾರ ಎಲ್‌, ಸಿಪಿಆಯ್‌ ಎಮ್‌.ಕೆ.ದ್ಯಾಮಣ್ಣನವರ, ಸಿಂದಗಿ ಪಿಎಸ್‌ಆಯ್‌ ನಿಂಗಪ್ಪ ಪೂಜಾರಿ, ಆಲಮೇಲ ಪಿಎಸ್‌ಆಯ್‌ ಅನೀಲ ಕುಮಾರ್‌ ಎಚ್‌.ಡಿ ಸೇರಿದಂತೆ ಅನೇಕರು ಇದ್ದರು.

loading...