ಲಂಡನ್‍ನಲ್ಲಿ ಮೊಳಗಿದ ಮೋದಿ ಪರ ಘೋಷಣೆ

0
20
loading...

ಲಂಡನ್-ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳ ಬಗ್ಗೆ ಇಂಗ್ಲೆಂಡ್‍ನಲ್ಲಿ ನೆಲೆಸಿರುವ ನೂರಾರು ಭಾರತೀಯರು ಮೆಚ್ಚುಗೆ ಸೂಚಿಸಿದ್ದಾರೆ. ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರೊಂದಿಗೆ ಮಾತುಕತೆ ನಡೆಸಲು ನಂ.10 ಡೌನಿಂಗ್ ಸ್ಟ್ರೀಟ್ ನಿನ್ನೆ ರಾತ್ರಿ ಆಗಮಿಸಿದೆ. ಮೋದಿ ಅವರನ್ನು ನೂರಾರು ಮಂದಿ ಜಯ ಘೋಷಣೆಗಳ ಮೂಲಕ ಸ್ವಾಗತಿಸಿದರು. ಇದೇ ವೇಳೆ ಭಾರತದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಪ್ರತಿಭಟನಾಕಾರರು ಖಂಡಿಸಿದರು.

ಭಾರತೀಯ ಸಂಪ್ರದಾಯದಂತೆ ಧೋತಿ ಧರಿಸಿದ್ದ ಪುರುಷರು ಮತ್ತು ಸೀರೆ ತೊಟ್ಟಿದ್ದ ಮಹಿಳೆಯರು ಸಂಸತ್ ಚೌಕದ ಬಳಿ ಇರುವ ಡೌನ್ನಿಂಗ್ ಸ್ಟ್ರೀಟ್‍ಗೆ ಆಗಮಿಸುತ್ತಿದ್ದಂತೆ ಜೈಕಾರ ಹಾಕಿದರು. ಚೆಕ್ ದೇ ಇಂಡಿಯಾ ಮತ್ತು ಜೈ ಹಿಂದ್ ಎಂಬ ಬ್ಯಾನರ್‍ಗಳನ್ನು ಹಿಡಿದ್ದಿದ್ದ ಭಾರತೀಯರು ಮೋದಿ ಪರ ಘೋಷಣೆಗಳನ್ನು ಮೊಳಗಿಸಿದರು.

loading...