ಲಿಂಗಾಯತ್ ಹೋರಾಟಕ್ಕೆ ರಾಜಕೀಯ ಬೆರಿಸುವುದು ಸೂಕ್ತವಲ್ಲ: ಜಾಮದಾರ

0
32
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಲಿಂಗಾಯತ ಅಲ್ಪಸಂಖ್ಯಾತ ಮಾನ್ಯತೆಗಾಗಿ ನಡೆದಿರುವ ಹೋರಾಟದಲ್ಲಿ ರಾಜಕೀಯ ಬೆರೆಸಿ ಮಾತನಾಡುವುದು ಸೂಕ್ತವಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರು ಹೋರಾಟದ ಮುಂಚೂಣಿಯಲ್ಲಿದ್ದಾರೆ. ಜೊತೆಗೆ ಬಿಜೆಪಿ ಕೆಲ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ರಾಜಕೀಯ ಬೇರಸುವುದು ಸರಿಯಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಹೇಳಿದರು.
ಪಟ್ಟಣದ ಶಿವಮೂರ್ತೇಶ್ವರ ಮಠದ ಸಭಾಭವನದಲ್ಲಿ ಶನಿವಾರ ಜರುಗಿದ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ ನಡೆದಿರುವ ಹೋರಾಟ ರಾಜಕೀಯ ಪಕ್ಷಕ್ಕೆ ಅಂಟಿಸುವುದು ಸರಿಯಲ್ಲ. ಹೋರಾಟ ಪಕ್ಷಾತೀತವಾಗಿದೆ.

ದೇಶದಲ್ಲಿ ಸಿಖ್, ಪಾರಸಿ, ಜೈನ್ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡುವಾಗ ಇಲ್ಲದ ಹಿಂದು ಧರ್ಮ ಒಡೆಯುವ ವಿಚಾರ ಲಿಂಗಾಯತ ಧರ್ಮ ಮಾನ್ಯತೆಗೆ ಆಗ್ರಹಿಸುವಾಗ ಮಾತ್ರ ಧ್ವನಿಎತ್ತಿರುವುದು ವಿಷಾದದ ಸಂಗತಿ. ಬಸವ ಧರ್ಮ ಹಾಗೂ ಹಿಂದು ಧರ್ಮದ ಆಚರಣೆಯಲ್ಲಿ ವ್ಯತ್ಯಾಸಗಳಿವೆ. ಬಸವ ತತ್ವವನ್ನು ಒಪ್ಪಿಕೊಂಡ ಆಚರಣೆ ಮಾಡುವವರು ಲಿಂಗಾಯತರು ಎಂದರು.
ಇಂದು ಲಿಂಗಾಯತರ ಅಲ್ಪಸಂಖ್ಯಾತ ಮಾನ್ಯತೆ ವಿರೋಧಿಸುವ ಪಂಚಪೀಠಗಳು 2002ರಲ್ಲಿ ಬೇಡ ಜಂಗಮ ಮಾನ್ಯತೆ ನೀಡಿ ಪರಿಶಿಷ್ಠ ಜಾತಿಗೆ ಸೇರಿಸಲು ಒತ್ತಾಯಿಸಿ ಇಂದು ವೀರಶೈವ ಲಿಂಗಾಯತರಾಗಲು ಸಾಧ್ಯವೆ ಎಂದು ಜಾಮದಾರ ಪ್ರಶ್ನಿಸಿದರು.

ವಿಶ್ವಗುರು ಬಸವಣ್ಣನವರು ಹಿಂದೂ ಧರ್ಮದಲ್ಲಿರುವ ಅನೇಕ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿ ಲಿಂಗಾಯತ ಧರ್ಮ ಸ್ಥಾಪಿಸಿದ್ದರಿಂದ ಹಿಂದೂ ಧರ್ಮಕ್ಕೂ ಬಸವಣ್ಣನವರ ಲಿಂಗಾಯತ ಧರ್ಮಕ್ಕೂ ಯಾವದೇ ಸಂಭಂಧವಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ| ವೈ.ಬಿ. ಕುಲಗೋಡ ಮಾತನಾಡಿ, ಲಿಂಗಾಯತ ಧರ್ಮ ಮತ್ತು ವೈದಿಕ ಧರ್ಮದ ನಡುವಿನ ವ್ಯತ್ಯಾಸವನ್ನು ತಿಳಿಸಿ, ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟಕ್ಕೆ ಸರ್ವ ಬಸವ ತತ್ವಾಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದಾಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.

ನಾಗಭೂಷಣ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಬಸವಪ್ರಕಾಶ ಸ್ವಾಮೀಜಿ, ಗುರುಪುತ್ರಯ್ಯ ಸ್ವಾಮೀಜಿ ಸೇರಿದಂತೆ ಮುಂತಾದವರು ಉಪಸ್ಥಿತಿರದ್ದರು.
ಪ್ರಧಾನ ಕಾರ್ಯದರ್ಶಿ ಪ್ರೊ| ಎಸ್.ಎಂ. ಸಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಘಟಕದ ಅಧ್ಯಕ್ಷ ಮಹೇಶ ಕಲ್ಯಾಣಿ ಸ್ವಾಗತಿಸಿದರು. ಖಜಾಂಚಿ ಎಂ.ಎಸ್. ಜಂಗವಾಡ ನಿರೂಪಿಸಿದರು. ಸಹಕಾರ್ಯದರ್ಶಿ ಈರಣ್ಣ ಬುಡ್ಡಾಗೋಳ ವಂದಿಸಿದರು.

loading...