ವರಿಷ್ಠರು ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಲಿ: ಮಹಾವೀರ ಮೊಹಿತೆ

0
34
loading...

ಚಿಕ್ಕೋಡಿ 17: ವಿಧಾನಸಭೆ ಚುನಾವಣೆಯಲ್ಲಿ ರಾಯಬಾಗ ಮತಕ್ಷೇತ್ರದಿಂದ ಸ್ಪರ್ಧಿಸಲು ಮೂಲ ಕಾಂಗ್ರೆಸಿಗರನ್ನು ನಿರ್ಲಕ್ಷಿಸಿ ವಲಸಿಗರಿಗೆ ಟಿಕೆಟ್ ನೀಡಿದ್ದರಿಂದ ಕ್ಷೇತ್ರದ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ತುಂಬಾ ನಿರಾಸೆಯಾಗಿದೆ ಎಂದು ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಹಾವೀರ ಮೊಹಿತೆ ಹೇಳಿದರು.

ರಾಯಬಾಗ ತಾಲೂಕಿನ ಬಾವಾನ ಸೌಂದತ್ತಿ ಗ್ರಾಮದಲ್ಲಿ ನಡೆದ ರಾಯಬಾಗ ಮತಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವರಿಷ್ಠರು ಇನ್ನು ತಡ ಮಾಡದೇ ಪಕ್ಷಕ್ಕಾಗಿ ಹಗಲಿರುಳು ದುಡಿದಿರುವ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಮನವಿಗೆ ಸ್ಪಂದಿಸಿ ವರಿಷ್ಠರು ತಮ್ಮ ನಿಲುವನ್ನು ಬದಲಿಸಿ, ಪಕ್ಷವನ್ನು ಸಂಘಟನೆ ಮಾಡಿದವರಿಗೆ ಟಿಕೆಟ್ ನೀಡಿ ಅವರಿಗೆ ಪಕ್ಷದ ಬಿ ಪಾರ್ಮಂ ನೀಡಬೇಕೆಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವ್ಯಕ್ತಿಗೆ ಇಂದು ಪಕ್ಷ ಮನೆ ಹಾಕಿರುವುದರಿಂದ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. 40 ವರ್ಷಗಳಿಂದ ಪಕ್ಷದ ಏಳ್ಗಿಗೆಗಾಗಿ ದುಡಿದಿರುವ ಕಾರ್ಯಕರ್ತರ ಮಾತಿಗೆ ಇಂದು ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಹೈಕಮಾಂಡ್ ವಲಸಿಗರಿಗೆ ಮನೆ ಹಾಕುತ್ತಿರುವುದರಿಂದ ಪಕ್ಷದ ನಿಷ್ಠಾವಂತರು ಬೇರೆ ಪಕ್ಷದ ಕಡೆಗೆ ಮುಖಮಾಡುವ ಸಂದರ್ಭ ಬರಬಹುದು. ಇದನ್ನು ತಪ್ಪಿಸಲು ಪಕ್ಷದ ಹಿರಿಯ ಮುಖಂಡರು ತಮ್ಮ ನಿರ್ಧಾರವನ್ನು ಬದಲಿಸಿ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೌಡ ಪಾಟೀಲ, ನಾಗರಮುನ್ನೊಳ್ಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್.ಎಚ್.ಪಾಟೀಲ ಧೂಳಗೌಡ ಪಾಟೀಲ, ಸದಾಶಿವ ದೇಶಿಂಗೆ, ದಿಲೀಪ ಜಮಾದಾರ, ಜಾಕೀರ ತರಡೆ, ಅಶೋಕ ಬನಗೆ, ನಾಮದೇವ ಕಾಂಬಳೆ, ರಾಜು ಪಾಟೀಲ, ಸಂಜಯ ಕಾಂಬಳೆ, ಶ್ರವಣ ಕಾಂಬಳೆ, ಮುರಗೇಶ ಕೋಟಿವಾಲೆ ಭಾಗವಹಿಸಿದ್ದರು.
ಲಸಭೆಯಲ್ಲಿ ಸಾವಿರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

loading...