ವಾಸ್ತವತೆ ತುಂಬಿದ ಕಥನ ಸಾಹಿತ್ಯ ಸದಾ ಚಿರಂತನ

0
27
loading...

ಕನ್ನಡಮ್ಮ ಸುದ್ದಿ- ಧಾರವಾಡ: ವಾಸ್ತವತೆ ತುಂಬಿದ ಕಥನ ಸಾಹಿತ್ಯ ಸದಾ ಚಿರಂತನ. ಅದು ಬೆಟ್ಟದ ನೆಲ್ಲಿ ಕಾಯಿಗೂ ಸಮುದ್ರದ ಉಪ್ಪಿಗೂ ಸಂಬಂಧ ಬೆಸೆದು ಕೌಟುಬಿಂಕ ಜೀವನದ ನಿಜ ಶೈಲಿಗೆ ಇಂಬು ನೀಡುತ್ತದೆಯೆಂದು ಕಥೆಗಾರ್ತಿ ಶಾಂತಾದೇವಿ ಕಣವಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಕೊಡಮಾಡುವ 2017ನೇ ಸಾಲಿನ ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಸ್ತ್ರೀಯು ತನ್ನ ಕೆಲಸದ ಒತ್ತಡದ ನಡುವೆಯೂ ಸದಾ ಓದಿನ ಕಡೆಗೆ ಗಮನ ನೀಡಿ ಸಾಹಿತ್ಯ ರಚನೆಗೆ ಮುಂದಾಗಬೇಕು. ವಿರಾಮದ ವೇಳೆಯನ್ನು ಕರಕುಶಲತೆಯಲ್ಲಿ ತೊಡಗಿಸಿ ಕುಟುಂಬಕ್ಕೆ ಸಹಾಯಕಳಾಗಿ ಆದರ್ಶ ಗೃಹಿಣಿಯಾಗಬೇಕೆಂದರು.
ಅಂಕಣಗಾರ್ತಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಡಾ. ಬಿ ಸರೋಜಾದೇವಿಯವರು ತಮ್ಮ ಸುಪುತ್ರಿ ಬಿ.ಭುವನೇಶ್ವರಿ ಸ್ಮರಣಾರ್ಥ ನೀಡುವ ಈ ಪ್ರಶಸ್ತಿ ಸಾರ್ಥಕ ಬದುಕು ನಡೆಸುತ್ತಾ ಸಮಾಜಕ್ಕೆ ಮಾದರಿಯಾದ ಶಾಂತಾದೇವಿ ಕಣವಿಯವರಿಗೆ ದೊರೆತದ್ದು ಶ್ಲಾಘನೀಯ. ಸತಿ ಪತಿ ಅನ್ಯೋನ್ಯವಾಗಿದ್ದಲ್ಲಿ ಅಲ್ಲೊಂದು ಶಾಂತಿವನ ನಿರ್ಮಾಣವಾಗುತ್ತದೆಂಬುದಕ್ಕೆ ಕವಿ ಚನ್ನವೀರ ಕಣವಿ ಕಥೆಗಾರ್ತಿ ಶಾಂತಾದೇವಿ ಕಣವಿಯವರ ದಾಂಪತ್ಯಜೀವನವೇ ನಿದರ್ಶನ. ಡಾ. ಬಿ ಸರೋಜಾದೇವಿಯವರು ತಮ್ಮ ಆದರ್ಶ ಕಲಾತ್ಮಕತೆಯ ಜೊತೆಗೆ ಸಮಾಜ ಮುಖಿಯಾಗಿ ದತ್ತಿ ದಾನಿಗಳಾಗಿ ಸೇವೆ ಸಲ್ಲಿಸಿರುತ್ತಿರುವುದು ಆದರ್ಶಪ್ರಾಯ ಎಂದರು. ಸಾಹಿತಿ ಡಾ ಜಿ. ಎಂ. ಹೆಗಡೆ ಮಾತನಾಡಿ, ನಾವೆಲ್ಲಾ ನಮ್ಮ ಕೃತಿಗಳ ಮೂಲP ದೊಡ್ಡವಾರಗಬೇಕೆಂಬ ಮಾತಿಗೆ ಶಾಂತಾದೇವಿ ಕಣವಿಯವರು ಸದಾ ಸ್ಮರಣೀಯರು ನಾಡೋಜ ಚನ್ನವೀರ ಕಣವಿ ತಮ್ಮ ಕೃತಿಗಳಿಂದ ಲೊಕಾಂತರಾದರೆ ಅವರ ಸಂಗಾತಿಯಾಗಿ ಶಾಂತಾದೇವಿ ಕಥೆಗಳ ಮೂಲಕ ಎಕಾಂತರಾದರೆಂದರು.

ಕವಿ ಚನ್ನÉವೀರ ಕಣವಿ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಲೀಂಗರಾಜ ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ. ಡಾ. ಜಿನದತ್ತ ಹಡಗಲಿ. ಎಸ್.ಎಸ್. ದೊಡಮನಿ, ಡಾ. ಬಿ.ಜಿ. ಬಿರಾದರ, ಡಾ ಎಚ್.ಪಿ. ನೀಲಗುಂದ, ಡಿ.ಎಂ. ನಿಡವಣಿ, ಎಸ್. ಎನ್. ಗಿಡ್ಡನವರ, ಎಮ್. ಎನ್. ಕರಡೋಣಿ, ಚಂದ್ರಶೇಖರ ಪಾಟೀಲ, ರಂಜಿತಾ ಗೋಧಿ, ಡಾ. ಅಶೋಕ ಗೋಧಿ, ಎಫ್. ಬಿ. ಕಣವಿ, ವ್ಹಿ. ಎನ್. ಕೀರ್ತಿವತಿ, ಶಿವಾನಂದ ಟವಳಿ, ಬಸವರಾಜ ವಾಸನದ, ಮಹಾದೇವಿ ದೊಡಮನಿ, ಪ್ರಮಿಳಾ ಜಕ್ಕಣ್ಣವರ, ರಾಜೇಶ್ವರಿ ಕೋ¯ಕಾರ, ಆರ್.ಎಸ್. ಪಾಟೀಲ, ಆರತಿ ದೇವಶಿಖಾಮಣಿ,ಶಶಿರೇಖಾ ಚಕ್ರಸಾಲಿ, ಮಲ್ಲಮ್ಮ ವಟವಟಿ,ಎಸ್.ಎಸ್ ಜೋಶಿ ಹಾಜರಿದ್ದರು.

loading...