ವಿಕಲಚೇತನರು ತಪ್ಪದೇ ಮತ ಚಲಾಯಿಸಿ: ಮನೋಜ್

0
15
loading...

ಗದಗ: ಕಲಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಪ್ರಜಾಪ್ರಭುತ್ವ ಬಲಪಡಿಸಲು ಮತದಾರ ಪಟ್ಟಿಯಲ್ಲಿ ನೊಂದಣಿ ಆದ ಅವರೂ ಸಹ ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ತಿಳಿಸಿದರು.

ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ವಿಕಲಚೇತನರಿಗಾಗಿ ಮತದಾರರ ಜಾಗೃತಿ ಕಾರ್ಯಕ್ರಮ ಹಾಗೂ ಎವಿಎಂ ಮತಯಂತ್ರದ ಜೊತೆಗೆ ಮತ ಖಾತರಿಗೊಳಿಸುವ ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ವಿಕಲಚೇತನ ಮತದಾರರಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಲವು ಸೌಲಭ್ಯ ಒದಗಿಸಲಾಗುವುದು. 1-1-2018 ರ ಅರ್ಹತಾ ದಿನಾಂಕದಂದು 18 ವರ್ಷ ಪೂರ್ಣಗೊಂಡ ಅರ್ಹ ವಿಕಲಚೇತನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಣಿಯಾಗಬೇಕು. ನೋಂದಣಿ ಆಗದಿದ್ದಲ್ಲಿ ಎಪ್ರಿಲ್ 14 ರವರೆಗೆ ತಹಶೀಲ್ದಾರ ಕಚೇರಿಯಲ್ಲಿ ನಮೂನೆ 6 ಸಲ್ಲಿಸಿ ನೊಂದಣಿ ಮಾಡಿಸಬೇಕು. ಮತಗಟ್ಟೆಯಲ್ಲಿ ನಿಯೋಜಿತ ಸಹಾಯಕರನ್ನು ಬಳಸಿಕೊಂಡು ಮತದಾನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ತಿಳಿಸಿದರು.

ಗದಗ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ಮಾತನಾಡಿ ಪ್ರತಿಯೊಬ್ಬ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಮತದಾರರು ತಾವು ಇಚ್ಛಿಸಿದ ಅಭ್ಯರ್ಥಿಗೆ ಮತ ಹಾಕಿರುವ ಖಾತರಿ ನೀಡಲು ಭಾರತ ಚುನಾವಣಾ ಆಯೋಗವು ಮತ ಖಾತರಿ ಯಂತ್ರ ವಿವಿ ಪ್ಯಾಟ್ ವ್ಯವಸ್ಥೆ ಜಾರಿಗೊಳಿಸಿದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಪಟ್ಟಿಯಲ್ಲಿರುವವರು ಯಾವುದೇ ಅಮಿಷಕ್ಕೊಳಗಾಗದೇ £ರ್ಭಿತಿಯಿಂದ ಮತದಾನ ಮಾಡಲು ಮಂಜುನಾಥ ಚವ್ಹಾಣ ವಿಕಲಚೇತನರಿಗೆ ಕರೆ ನೀಡಿದರು.
ಮತದಾನದ ಹಾಗೂ ಮತ ಖಾತರಿ ವಿವಿ ಪ್ಯಾಟ್ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಕಿರುಚಿತ್ರ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಟಿ ದಿನೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ£ರ್ದೆಶಕ ರಾಮಕೃಷ್ಣ ಪಡಗಣ್ಣವರ, ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಆಶು ನದಾಫ್, ಸ್ಪಂದನಾ ಕಿವುಡ ಮೂಗ ಶಾಲೆಯ ವಿಶೇಷ ಶಿಕ್ಷಕರಾದ ಸುವರ್ಣ ಸಿ, ಎಂ.ಆರ್. ಡಬ್ಲ್ಯು, ವಿ.ಆರ್.ಡಬ್ಲ್ಯು, ವಿಕಲಚೇತನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳ ಮುಖ್ಯಸ್ಥರು, ವಿಕಲಚೇತನರು ಭಾಗವಹಿಸಿದ್ದರು.

loading...