ವಿಕಾಸ ಪರ್ವ ಸಮಾವೇಶಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

0
23
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಜೆಡಿಎಸ್ ಬಿಜೆಪಿಯ ಬೀ-ಟೀಂ ಅಲ್ಲ, ಜನತಾ ಪರಿವಾರದಲ್ಲಿದ್ದವರೇ ಕಾಂಗ್ರೆಸ್‍ಗೆ ವಲಸೆ ಹೋಗಿ ಅಲ್ಲಿ ಬಿ-ಟೀಂ ಮಾಡಿಕೊಂಡು ಖರ್ಗೆ ಸೇರಿದಂತೆ ಹಲವಾರು ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರೋಧ ವಾಗ್ದಾಳಿ ನಡೆಸಿದರು.
ನಗರದÀ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆದ ವಿಕಾಸ ಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯ ಬೀ-ಟೀಂ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವಾಸ್ತವವಾಗಿ ಜನತಾ ಪರಿವಾರದಲ್ಲಿದ್ದವರೇ ಕಾಂಗ್ರೆಸ್‍ಗೆ ವಲಸೆ ಹೋಗಿ ಅಲ್ಲಿ ಬಿ-ಟೀಂ ಮಾಡಿಕೊಂಡು ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ ಅಂತಹ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿ ಹಿಂದೂ ಎಂದು, ಕಾಂಗ್ರೆಸ್ ಮುಸ್ಲಿಂಪರ ಎಂದು ಕೇವಲ ಮತ ವಿಭಜನೆಯ ತಂತ್ರದ ಮೂಲಕ ಆಡಳಿತ ನಡೆಸಿವೆ. ಹಿಂದೂ-ಮುಸ್ಲಿಂ ಬೇರೆ ಅಲ್ಲವೇ ಅಲ್ಲ, ಎಲ್ಲರಲ್ಲಿಯೂ ಹರಿಯುತ್ತಿರುವುದು ಒಂದೇ ರಕ್ತ. ಯಾರೂ ಕೂಡಾ ದೇವರಲ್ಲಿ ಪ್ರಾರ್ಥಿಸಿಕೊಂಡು ಧರ್ಮದಲ್ಲಿ ಜನ್ಮತಾಳಿಲ್ಲ ಎಂದರು.
ರೈತರು ಬೆಳೆದ ಬೆಳಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಶಿಕ್ಷಣ ಪಡೆದ ಯುವಜನತೆಗೆ ಉದ್ಯೋಗ ಸಿಗುತ್ತಿಲ್ಲ. ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳಗಾರರ ಬದುಕು ಬವಣೆಗೆ ಸಿಲುಕಿದೆ. ಈ ಸಾಲು ಸಾಲು ಸಮಸ್ಯೆಗಳು ರಾಷ್ಟ್ರೀಯ ಪಕ್ಷಗಳಿಂದ ಪರಿಹಾರವಾಗುವುದಿಲ್ಲ ಎಂದರು.

ಮುಸ್ಲಿಂರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ನಂಬಬಾರದು. ಕರಾವಳಿಯಲ್ಲಿ ಮುಸ್ಲಿಂರಿಗೆ ರಕ್ಷಣೆಯೇ ಇಲ್ಲ. ರಕ್ಷಣೆ ಒದಗಿಸಬೇಕಾದ ಸರ್ಕಾರ ಕೈಕಟ್ಟಿ ಕುಳಿತು ಮುಸ್ಲಿಂರ ಪ್ರಾಣದ ಜೊತೆ ಚೆಲ್ಲಾಟವಾಡಿತು. ಕೇವಲ ಮುಸ್ಲಿಂರನ್ನು ವೋಟ್ ಹಾಕಲು ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದರು.
ಅನ್ನಭಾಗ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ ಏನಲ್ಲ. ಈ ಹಿಂದೆ ದಿ.ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಜಾರಿಯಲ್ಲಿತ್ತು ಎಂದರು.

loading...