ವಿಧಾನಸಭಾ ಚುನಾವಣೆಯ ಭರ್ಜರಿ ಪ್ರಚಾರ

0
21
loading...

ಕನ್ನಡಮ್ಮ ಸುದ್ದಿ-ಶಿರಶಿ: ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಬನವಾಸಿ ಘಟಕದ ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ ಯುವ ಘಟಕದ ರಾಜಾಧ್ಯಕ್ಷ ಹಾಗೂ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಾರ್ಥದ ಅಂಗವಾಗಿ ರವಿವಾರ ಭರ್ಜರಿ ಪ್ರಚಾರ ನಡೆಸಲಾಯಿತು.
ತಾಲೂಕಿನ ಬನವಾಸಿ ಘಟಕದ ಬಿಸ್ಲಕೊಪ್ಪ, ದಾಸನಕೊಪ್ಪ, ಅಂಡಗಿ, ಬಂಕನಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು 33 ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಜೊತೆಯಲ್ಲಿ ವ್ಯಾಪಕವಾದ ಜನಸಂಪರ್ಕ ಪ್ರಚಾರ ಕಾರ್ಯ ಯೋಜನೆಯು ಪಕ್ಷದ ವತಿಯಿಂದ ಜರುಗಿದವು.
ಈ ವೇಳೆ ಮಧು ಬಂಗಾರಪ್ಪ ಮಾತನಾಡಿ, ಅಭಿವೃದ್ಧಿ ಮತ್ತು ರೈತ ಪರ ನಿಲುವಿನ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಸ್ಥಳೀಯ ರೈತರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ಪ್ರಚಾರಾಂದೋಲನ ಜರುಗಿದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳಾದ ಅರಣ್ಯ ಹಾಗೂ ಗಾಂವಠಾಣಾ ಅತಿಕ್ರಮಣ, ರಸ್ತೆ, ನೀರಾವರಿ, ಬೆಂಬಲ ಬೆಲೆ, ರೈತರ ಸಮಸ್ಯೆಗಳಿಗೆ ರಾಷ್ಟ್ರೀಯ ಪಕ್ಷಗಳು ಸ್ಪಂದಿಸದೇ ಇರುವುದನ್ನು ಮಧು ಬಂಗಾರಪ್ಪ ಗಮನಕ್ಕೆ ತಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯದ ಕುರಿತು ವಿವರಿಸಿದ ಸ್ಥಳೀಯರು ಸಮಸ್ಯೆಗಳನ್ನು ಈಡೇರಿಸುವಂತೆ ಇದೇ ವೇಳೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರವೀಂದ್ರ ನಾಯ್ಕ, ಜಿಲ್ಲಾಧ್ಯಕ್ಷ ಬಿ.ಆರ್‌.ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುಬೇರ ಜುಕಾಕೋ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ ಶೇಖ, ಸ್ಥಳೀಯ ಮುಖಂಡರುಗಳಾದ ವಿ.ಎಂ. ಬೈಂದೂರು, ಸೋಮಣ್ಣ ಗೌಡ, ಗಣಪತಿ ಗೌಡ, ನೆಹರೂ ನಾಯ್ಕ, ಎಮ್‌.ಆರ್‌.ನಾಯ್ಕ, ಮೋಹನ ನಾಯ್ಕ, ದೇವರಾಜ ಕೋವೇರ, ರಾಜಶೇಖರ ಗೌಡ, ಬಿ.ಸಿ.ನಾಯ್ಕ , ಎಸ್‌.ಎನ್‌.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

loading...