ವಿವಿಧ ಕ್ಷೇತ್ರಗಳ ಸಾಧಕರಿಗೆ ಬಸವ ಕಾಯಕಶ್ರೀ ಪ್ರಶಸ್ತಿ ಪ್ರದಾನ

0
16
loading...

ಚಿಕ್ಕೋಡಿ 02: ತಾಲೂಕಿನ ಕುಂಗಟೋಳಿ ಗ್ರಾಮದಲ್ಲಿ ಬಸವೇಶ್ವರ ನಾಟ್ಯ ಸಂಘ ಕುಂಗಟೋಳಿ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹನುಮಾನ ಜಾತ್ರೆ ಉತ್ಸವದ ಅಂಗವಾಗಿ ಆಯೋಜಿಸಿದ ಜಾನಪದ ಸ್ವರ ಸಂಗಮ ಮೇಳ 2017-18 ಕಾರ್ಯಕ್ರಮದಲ್ಲಿ ವಿವಿಧ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾತೋಶ್ರೀ ಬ್ರಹ್ಮರಾಂಬಿಕಾದೇವಿ ಓಂಕಾರ ಆಶ್ರಮ ಬಾ.ಸೌಂದತ್ತಿ(ಪ್ರವಚನ ಕ್ಷೇತ್ರ), ಬಾಪೂ ತಾಸೇವಾಲೆ ಉಗಾರ ಖುರ್ದ(ಶ್ರೀ ಕೃಷ್ಣ ಪಾರಿಜಾತ ಕಲಾ ಕ್ಷೇತ್ರ), ಮಹಾದೇವ ಸ ಖೋತ ಯಾದ್ಯಾನವಾಡಿ(ಭಜನಾ ಕಲಾ ಕ್ಷೇ*ತ್ರ), ಸಂಗಪ್ಪ ಗು ಸವದಿ ಹಾರೊಗೇರಿ (ಸಣ್ಣಾಟ ಕಲಾ ಕ್ಷೇತ್ರ), ಸಂಜು ರಾ ಕೋಳ್ಳಾನಟ್ಟಿ ಗೋಕಾಕ ಪಾಲ್ಸ್ ( ಜಾನಪದ ಕಲಾ ಕ್ಷೇತ್ರ) ಇವರಿಗೆ ಕಬ್ಬೂರದ ಗೌರಿ ಶಂಕರ ಮಠದ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಬಸವ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.ಲಸಿದಗೌಡ ರಾ. ಪಾಟೀಲ, ೀಯ ಯುವ ಪ್ರಶಸ್ತಿ ವಿಜೇತ ಭರತ ಕಲಾಚಂದ್ರ, ಮಾರುತಿ ಕಮತೆ, ಗಣಪತಿ ಮಾದರ, ಭರಮಪ್ಪಾ ನೇಜ, ಮಾರುತಿ ಹಿರೇಕೋಡಿ, ಭರಮಪ್ಪಾ ಸೋಲ್ಲಾಪೂರೆ, ಅಜೀತ ಹಂಜಿ, ಮಾರುತಿ ಕಾಮಗೌಡ, ರುದ್ರಪ್ಪಾ ಸುಂಕದ ಮುಂತಾದವರು ಉಪಸ್ಥಿತರಿದ್ದರು.

loading...