ವಿಶೇಷ ಚೇತನ ಮತದಾರರಿಗೆ ಆಮಂತ್ರಣ ಪತ್ರಿಕೆ : ನಾಯಕ

0
15
loading...

ಕನ್ನಡಮ್ಮ ಸುದ್ದಿ-ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ಅರ್ಹ ವಿಶೇಷ ಚೇತನ ಮತದಾರರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು ಅಂತಹ ಮತದಾರರನ್ನು ಮತದಾನಕ್ಕೆ ಆಹ್ವಾನಿಸಲು ಆಮಂತ್ರಣ ಪತ್ರಿಕೆ ನೀಡಲಾಗುವದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ಅವರು ಬುಧವಾರ ಜಿಲ್ಲಾ ರಂಗಮಂದಿರಲ್ಲಿ ಜಿಲ್ಲಾ ಮಟ್ಟದ ಎಲ್ಲರನ್ನು ಒಳಗೊಂಡ ಎಂಬ ವಿಶೇಷ ಚೇತನರ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಎರಡು ಹಂತದಲ್ಲಿ ವಿಶೇಷ ಚೇತನÀ ಮತದಾರರ ಸರ್ವೆ ಮಾಡಲಾಗಿದೆ. ಈ ಎರಡೂ ಹಂತದ ಸಮೀಕ್ಷೆಯಲ್ಲಿ ಒಟ್ಟು 13680 ವಿಶೇಷ ಚೇತನ ಮತದಾರರನ್ನು ಗುರುತಿಸಲಾಗಿದೆ. ಗುರುತಿಸಲಾದ ಎಲ್ಲ ವಿಶೇಷ ಚೇತನ ಮತದಾರರಿಗೆ ಮತದಾನಕ್ಕೆ ಆಹ್ವಾನಿಸಲು ಆಮಂತ್ರಣ ಪತ್ರಿಕೆ ನೀಡಲಾಗುವದು ಎಂದು ಹೇಳಿದರು.
ಜಿಲ್ಲೆಯ ಎಲ್ಲ ವಿಶೇಷಚೇತನ ಮತದಾರರಿಗೆ ಮತದಾನ ಜಾಗೃತಿ ಕುರಿತು ವೈಯ್ಸ ಎಸ್‍ಎಮ್‍ಎಸ್ ಕಳುಹಿಸಲಾಗುವದು. ಮತದಾನ ದಿನದಂದು ಮತಗಟ್ಟೆಗಳಲ್ಲಿ ಸಹಾಯ ಮಾಡಲು ಸ್ವಯಂ ಸೇವಕರು ನಿಯೋಜಿಸಲಾಗುವದು.
ಈ ಸಂದರ್ಭದಲ್ಲಿ ತಾಲೂಕಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ವಿತರಿಸಲಾಯಿತು.ಜಾಥಾದಲ್ಲಿ ವಿಕಲಚೇತನರು, ಪಾಲಕರು, ಸಂಘಸಂಸ್ಥೆಯ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

loading...